36 ವರ್ಷಗಳ ಹಿಂದೆ ಸಚಿನ್‌, ಇಂದು ಸೂರ್ಯವಂಶಿ: ಕಿವೀಸ್‌ ನೆಲದಲ್ಲಿ ಚೊಚ್ಚಲ ಪಂದ್ಯ, ಯಾರು ಅತ್ಯುತ್ತಮ ಬ್ಯಾಟರ್?

Published : Oct 24, 2026, 09:25 PM IST
Sachin vs Suryavanshi

ಸಾರಾಂಶ

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಕಣಕ್ಕಿಳಿಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. 36 ವರ್ಷಗಳ ಹಿಂದೆ ನ್ಯೂಜಿಲೆಂಡ್‌ನಲ್ಲಿ ಚೊಚ್ಚಲ ಪಂದ್ಯವಾಡಿದ್ದ ಸಚಿನ್ ತೆಂಡುಲ್ಕರ್ ಮತ್ತು ವೈಭವ್ ನಡುವೆ ಅಚ್ಚರಿಯ ಹೋಲಿಕೆ ಕಂಡುಬಂದಿದೆ.

ಇವತ್ತು ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳು ಎರಡನೇ ಟಿ-20ಯಲ್ಲಿ ಮುಖಾಮುಖಿ ಆಗಿದ್ದವು. ಪಂದ್ಯ ಶುರುವಾಗುತ್ತಿದ್ದಂತೆಯೇ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಹಾಗೂ ವೈಭವ್‌ ಸೂರ್ಯವಂಶಿ ನಡುವೆ ಹೋಲಿಕೆ ಶುರುವಾಗಿತ್ತು. ಅದು ಯಾವ ವಿಚಾರಕ್ಕೆ ಗೊತ್ತಾ?

ಹೌದು, ಇವತ್ತಿನ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿಗೆ ಆಡುವ ಅವಕಾಶ ಸಿಕ್ಕಿತ್ತು. 15 ವರ್ಷ ಮತ್ತು 211 ದಿನಗಳ ಸೂರ್ಯವಂಶಿ ಮೊದಲ ಬಾರಿಗೆ ನ್ಯೂಜಿಲೆಂಡ್‌ ನೆಲದಲ್ಲಿ ಆಡಿ ಗಮನ ಸೆಳೆದರು. ಆ ಮೂಲಕ ನ್ಯೂಜಿಲೆಂಡ್‌ ನೆಲದಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನ ಆಡಿದ ಅತ್ಯಂತ ಕಿರಿಯ ವಯಸ್ಸಿನ ವಿದೇಶಿಗ ಎಂಬ ಹೆಗ್ಗಳಿಕೆಗೆ ಸೂರ್ಯವಂಶಿ ಪಾತ್ರರಾದರು.

ಏನಿದು ಹೋಲಿಕೆ?

ವೈಭವ್‌ ಅವರ ನ್ಯೂಜಿಲೆಂಡ್‌ ನೆಲದ ಚೊಚ್ಚಲ ಪಂದ್ಯಕ್ಕೂ ಸಚಿನ್‌ ತೆಂಡುಲ್ಕರ್‌ ನಡುವೆ ಹೋಲಿಕೆ ನಡೆಯಿತು. 36 ವರ್ಷಗಳ ಹಿಂದೆ ಸಚಿನ್‌ ತೆಂಡುಲ್ಕರ್‌ ಅವರು ನ್ಯೂಜಿಲೆಂಡ್‌ ನೆಲದಲ್ಲಿ ಮೊದಲ ಬಾರಿಗೆ ಪಂದ್ಯವನ್ನ ಆಡಿದ್ದರು. ಫೆಬ್ರವರಿ 1990ರಲ್ಲಿ ಲ್ಯಾಂಕಾಸ್ಟರ್ ಪಾರ್ಕ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಮೂಲಕ ಸಚಿನ್ ಮೊದಲ ಬಾರಿಗೆ ನ್ಯೂಜಿಲೆಂಡ್ ನೆಲದಲ್ಲಿ ಆಡಿದ್ದರು.

ಅಂದು ಸಚಿನ್‌ ತೆಂಡುಲ್ಕರ್‌ಗೆ 16 ವರ್ಷ 284 ದಿನಗಳಾಗಿತ್ತು. ಈಗ 15 ವರ್ಷ 211 ದಿನಗಳು ತುಂಬಿದ್ದ ವೈಭವ್ ನ್ಯೂಜಿಲೆಂಡ್‌ ನೆಲದಲ್ಲಿ ಟಿ20 ಮ್ಯಾಚ್‌ ಆಡಿದರು. ಅವತ್ತಿನ ಪಂದ್ಯದಲ್ಲಿ ಸಚಿನ್‌ ತೆಂಡುಲ್ಕರ್‌ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟ್‌ ಆಗಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ 44 ಎಸೆತಗಳಲ್ಲಿ 24 ರನ್‌ಗಳಿಸಿದರು. ಸೂರ್ಯವಂಶಿ ಅವರು ಇವತ್ತಿನ ಪಂದ್ಯದಲ್ಲಿ 8 ಬಾಲ್‌ ಎದುರಿಸಿ ಕೇವಲ 4 ರನ್‌ ಬಾರಿಸಿದರು. ಆ ಮೂಲಕ ಇಬ್ಬರಿಗೂ ನ್ಯೂಜಿಲೆಂಡ್‌ ನೆಲದ ತಮ್ಮ ಚೊಚ್ಚಲ ಪಂದ್ಯದಲ್ಲಿ ಬಿಗ್‌ ಸ್ಕೋರ್‌ ಗಳಿಸುವಲ್ಲಿ ಸಾಧ್ಯವಾಗಲಿಲ್ಲ.

ಆಟಗಾರವೇದಿಕೆವಯಸ್ಸುಮೊದಲ ಪ್ರದರ್ಶನ
ಸಚಿನ್ ತೆಂಡೂಲ್ಕರ್ಕ್ರೈಸ್ಟ್‌ಚರ್ಚ್, 199016 ವರ್ಷ 284 ದಿನಗಳು0 & 24
ವೈಭವ್ ಸೂರ್ಯವಂಶಿಕ್ರೈಸ್ಟ್‌ಚರ್ಚ್, 202615 ವರ್ಷ 211 ದಿನಗಳು4 ರನ್‌ಗಳು

ಮುಂದಿನ ದಿನಗಳಲ್ಲಿ ಸಚಿನ್‌ ತೆಂಡುಲ್ಕರ್‌ ವಿಶ್ವದ ಶ್ರೇಷ್ಠ ಬ್ಯಾಟರ್‌ ಆಗಿ ಹೊರಹೊಮ್ಮಿದರು. ವೈಭವ್‌ ಅವರ ವೃತ್ತಿ ಜೀವನ ಈಗಷ್ಟೇ ಶುರುವಾಗಿದೆ. ವೈಭವ್‌ ಸೂರ್ಯವಂಶಿ ಯಾವ ರೀತಿ ತಮ್ಮ ವೃತ್ತಿಜೀವನವನ್ನು ಕೊಂಡೊಯ್ಯಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. 181 ರನ್‌ಗಳ ಗುರಿ ಬೆನ್ನತ್ತಿದ ಭಾರತ 70 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದರೂ, ತಿಲಕ್ ವರ್ಮಾ ಅವರ ಅಜೇಯ ಅರ್ಧಶತಕದ ನೆರವಿನಿಂದ ಗೆಲುವು ಒಲಿಸಿಕೊಂಡಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಇಡೀ ದೇಶ ನಿಮ್ಮನ್ನು ನಂಬುತ್ತದೆʼ ಕೋಚ್ ಗಂಭೀರ್‌ ಆಟ ಬದಲಿಸಿದ ರಹಸ್ಯ ಬಿಚ್ಚಿಟ್ಟು ಭಾವುಕರಾದ ತಿಲಕ್‌ ವರ್ಮಾ
Ind vs NZ T20I: ಕಿವೀಸ್ ಎದುರಿನ ಎರಡನೇ ಟಿ20ಯಲ್ಲಿ ಅಪರೂಪದ ವಿಶ್ವದಾಖಲೆ ಬರೆದ ತಿಲಕ್ ವರ್ಮಾ..!