
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಕ್ರೈಸ್ಟ್ ಚರ್ಜ್‌ನ ಹ್ಯಾಗ್ಲಿ ಓವಲ್‌ನಲ್ಲಿ ಪಂದ್ಯ ನಡೆದಿತ್ತು. 181 ರನ್‌ಗಳ ಗುರಿ ಬೆನ್ನು ಹತ್ತಿದ್ದ ಟೀಂ ಇಂಡಿಯಾಗೆ ಉಪನಾಯಕ ತಿಲಕ್ ವರ್ಮಾ ಗೆಲುವಿನ ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾದರು.
ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ತಿಲಕ್ ವರ್ಮಾ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. 196.15ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ತಿಲಕ್ ವರ್ಮಾ, 26 ಬಾಲ್‌ನಲ್ಲಿ 51 ರನ್‌ಗಳಿಸಿದರು. ಈ ವೇಳೆ ಅವರು ಒಂದು ಸಿಕ್ಸರ್, ಆರು ಬೌಂಡರಿ ಬಾರಿಸಿದರು. ಆ ಮೂಲಕ ತಿಲಕ್ ವರ್ಮಾ ಕೊನೆಯವರೆಗೂ ಔಟ್ ಆಗದೇ ಪಂದ್ಯವನ್ನು ಗೆಲ್ಲಿಸಿಕೊಂಡು ಬಂದರು. ಟೀಂ ಇಂಡಿಯಾ ಗೆಲುವಿನೊಂದಿಗೆ ಪಂದ್ಯ ಪರುಷೋತ್ತಮ ಪ್ರಶಸ್ತಿಗೂ ಪಾತ್ರರಾದರು.
ಮ್ಯಾನ್ ಆಫ್ ದಿ ಮ್ಯಾಚ್ ಅವರ್ಡ್ ಸ್ವೀಕರಿಸಿ ಮಾತನಾಡಿದ ತಿಲಕ್ ವರ್ಮಾ.. ತಮ್ಮ ಆಟದ ಶೈಲಿಯಲ್ಲಿ ಬದಲಾದ ಕ್ಷಣವನ್ನು ವಿವರಿಸಿದರು. ತಮ್ಮ ಶಕ್ತಿಶಾಲಿ ಇನ್ನಿಂಗ್ಸ್ ಹಾಗೂ ಮೈದಾನದಲ್ಲಿ ಪ್ರೋತ್ಸಾಹಿಸಿದ ಡ್ರೆಸ್ಸಿಂಗ್ ಕೋಣೆಯೊಳಗೆ ನಡೆದ ಸಂಭಾಷಣೆಯನ್ನು ಬಹಿರಂಗಪಡಿಸಿದರು. ಈ ವೇಳೆ ತಿಲಕ್ ವರ್ಮಾ ಕೋಚ್ ಗೌತಮ್ ಗಂಭೀರ್ ಅವರ ಬೆಂಬಲ ನೆನಪಿಸಿಕೊಂಡು ಭಾವುಕರಾದರು.
ಇನ್ನಿಂಗ್ಸ್‌ಗಾಗಿ ಕ್ರೀಸ್‌ಗೆ ಬರುವುದಕ್ಕೂ ಮೊದಲು ನಾನು ಕೋಚ್ ಗಂಭೀರ್ ಸರ್ ಹಾಗೂ ಸಿತಾಂಶು ಕೋಟಕ್ ಸರ್ ಜೊತೆ ಮಾತನಾಡಿದೆ. ಅವರು ನನಗೆ ಒಂದೇ ವಿಚಾರವನ್ನು ಹೇಳಿದರು. ನಾವೆಲ್ಲರೂ ನಿನ್ನನ್ನು ನಂಬುತ್ತೇವೆ. ಇಡೀ ದೇಶವು ನಿನ್ನನ್ನು ನಂಬುತ್ತದೆ. ನೀನು ಕೊನೆಯವರೆಗೂ ಕ್ರೀಸ್‌ನಲ್ಲಿ ಇದ್ದರೆ, ನೀನು ಪಂದ್ಯವನ್ನು ಗೆಲ್ಲುತ್ತಿಯಾ ಎಂದಿದ್ದರು. ಬಳಿಕ ನನಗೆ ಅದೊಂದೇ ಯೋಚನೆ ನನ್ನ ತಲೆಯಲ್ಲಿ ಬಂದು ಕೂತಿತ್ತು. ಅದೇ ಕಾರಣಕ್ಕೆ ನಾನು ಆಟವನ್ನು ಸಾಕಷ್ಟು ದೂರ ಕೊಂಡೊಯ್ಯಲು ನಿರ್ಧರಿಸಿದೆ ಎಂದು ಇನ್ನಿಂಗ್ಸ್ ಬದಲಾದ ಸಿಕ್ರೇಟ್ ಅನ್ನು ಬಹಿರಂಗಪಡಿಸಿದರು.
ಹಾಗೆಯೇ ಇನ್ನಿಂಗ್ಸ್ ಬಗ್ಗೆ ಮಾತು ಮುಂದುವರಿಸಿ.. ಪಿಚ್ ಸ್ವಲ್ಪ ನಿಧಾನವಾಗಿತ್ತು. ನಮನ್ ಸ್ಪಿನ್ನರ್‌ಗಳ ವಿರುದ್ಧ ಬೌಂಡರಿಗಳನ್ನ ಹೊಡೆಯುವ ಮತ್ತು ರನ್ ಕದಿಯಲು ತಂತ್ರ ರೂಪಿಸಿದರು. ನಮನ್ ನಾಲೈದು ಬಾರಿ ಎರಡು ರನ್‌ಗಳನ್ನ ತೆಗೆದುಕೊಂಡರು. ಈ ರನ್‌ಗಳು ತಂಡದ ಗೆಲುವಿಗೆ ತುಂಬಾನೇ ನಿರ್ಣಾಯಕವಾಯಿತು. ನಂತರ ನಿತೀಶ್ ರೆಡ್ಡಿ ಜೊತೆಗೆ ಆಟ ಮುಗಿಸಲಾಯಿತು. ನಮ್ಮ ಹುಡುಗರು ಮೈದಾನದಲ್ಲಿ ಪೂರ್ಣ ಪ್ರದರ್ಶನ ನೀಡಿದ್ದಾರೆ ಎಂದು ಮುಗುಳುನಕ್ಕರು.
ಇನ್ನು ಟೀಂ ಇಂಡಿಯಾ ಪರ ನಮನ್ ಧೀರ್ 17 ಬಾಲ್‌ನಲ್ಲಿ 31 ರನ್‌ಗಳಿಸಿದ್ರೆ, ನಿತೀಶ್ ರೆಡ್ಡಿ 13 ಬಾಲ್‌ನಲ್ಲಿ 26 ರನ್‌ಗಳಿಸಿದರು. ಅಭಿಷೇಕ್ ಶರ್ಮಾ 21 ಬಾಲ್‌ನಲ್ಲಿ 27 ರನ್‌ಗಳನ್ನ ಬಾರಿಸಿದರು. ವೈಭವ್ ಸೂರ್ಯವಂಶಿ ನಾಲ್ಕು ರನ್‌ಗಳಿಸಿ ನಿರಾಸೆ ಮೂಡಿಸಿದರು. ಅರ್ಷದೀಪ್ ಸಿಂಗ್ ಎರಡು ಹಾಗೂ ಭುವಿ ಮತ್ತು ರೆಡ್ಡಿ ತಲಾ ಒಂದು ವಿಕೆಟ್ ಪಡೆದರು. ಇತ್ತು ಭುವನೇಶ್ವರ್ ಕುಮಾರ್ 50 ರನ್‌ಗಳನ್ನ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.