SA20 Squads: ಸೌಥ್ ಆಫ್ರಿಕಾ 20 ಲೀಗ್ ಟೂರ್ನಿಯಲ್ಲಿ ಯಾವ ತಂಡದಲ್ಲಿ ಯಾರಿದ್ದಾರೆ? ಇಲ್ಲಿದೆ ಕಂಪ್ಲೀಟ್

By Naveen KodaseFirst Published Jan 9, 2023, 6:14 PM IST
Highlights

ಚೊಚ್ಚಲ ಆವೃತ್ತಿಯ ಸೌಥ್ ಆಫ್ರಿಕಾ ಟಿ20 ಲೀಗ್ ಟೂರ್ನಿಗೆ ಕ್ಷಣಗಣನೆ
6 ತಂಡಗಳು ಸೌಥ್ ಆಫ್ರಿಕಾ ಟಿ20 ಲೀಗ್ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಕಾದಾಟ
ಜನವರಿ 10ರಿಂದ ಟೂರ್ನಿಗೆ ಅಧಿಕೃತ ಚಾಲನೆ

ಜೊಹಾನ್ಸ್‌ಬರ್ಗ್‌(ಜ.09): ಚೊಚ್ಚಲ ಆವೃತ್ತಿಯ ಸೌಥ್ ಆಫ್ರಿಕಾ ಟಿ20 ಲೀಗ್(SA20) ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜನವರಿ 10ರಿಂದ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಆರು ತಂಡಗಳು SA20 ಟ್ರೋಫಿಗಾಗಿ ಸೆಣಸಾಡಲಿದ್ದು, ಆರು ತಂಡಗಳಿಗೂ ಭಾರತೀಯ ಮೂಲದ ಫ್ರಾಂಚೈಸಿಗಳಿದ್ದಾರೆ ಎನ್ನುವುದು ವಿಶೇಷ.

ಟೂರ್ನಿಗೆ ಇಂಗ್ಲೆಂಡ್ ಮಾರಕ ವೇಗಿ ಜೋಫ್ರಾ ಆರ್ಚರ್, ಆರೋನ್ ಫಂಗಿಸೋ, ಅಕಿಲಾ ಧನಂಜಯ, ಆಂಡಿಲೆ ಫೆಲುಕ್ವಾಯೊ, ಸೆನುರನ್ ಮುತ್ತುಸಾಮಿ ಮತ್ತು ಜೋರ್ಡನ್ ಹರ್ಮನ್‌ ವೈಲ್ಡ್‌ಕಾರ್ಡ್ ಮೂಲಕ SA20 ಟೂರ್ನಿಗೆ ಪ್ರವೇಶ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಗೊಂಡಿರುವ ಚೊಚ್ಚಲ ಆವೃತ್ತಿಯ SA20 ಟೂರ್ನಿಯು ಈಗಾಗಲೇ ಹಲವು ಕಾರಣಗಳಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. SA20 ಟೂರ್ನಿಯು ಜನವರಿ 10ರಿಂದ ಫೆಬ್ರವರಿ 11ರ ವರೆಗೆ ನಡೆಯಲಿದೆ. ಆದರೆ ಜನವರಿ 25ರಿಂದ ಫೆಬ್ರವರಿ 01ರವರೆಗೆ ಟೂರ್ನಿ ತಾತ್ಕಾಲಿಕವಾಗಿ ಸ್ಥಗಿತವಾಗಲಿದ್ದು, ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ತಂಡವು ತವರಿನಲ್ಲಿ ಇಂಗ್ಲೆಂಡ್ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಲಿದೆ.

SA20 2023: ಸೌಥ್ ಆಫ್ರಿಕಾ ಟಿ20 ಲೀಗ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ತಿಳಿದಿರಬೇಕಾದ ಸಂಗತಿಗಳಿವು..!

SA20 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಒಡೆತನದ ಎಂಐ ಕೇಪ್‌ಟೌನ್‌, ಲಖನೌ ಸೂಪರ್‌ಜೈಂಟ್ಸ್ ಫ್ರಾಂಚೈಸಿ ಒಡೆತನದ ಡರ್ಬನ್‌ ಸೂಪರ್‌ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ಒಡೆತನದ ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್‌ ಒಡೆತನದ ಪಾರ್ಲ್ ರಾಯಲ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಒಡೆತನದ ಪ್ರಿಟೋರಿಯಾ ಕ್ಯಾಪಿಟಲ್ಸ್‌ ಹಾಗೂ ಸನ್‌ರೈಸರ್ಸ್ ಒಡೆತನದ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡಗಳು ಟ್ರೋಫಿಗಾಗಿ ಕಾದಾಡಲಿವೆ.  ಫೆಬ್ರವರಿ 11ರಂದು ಜೋಹಾನ್ಸ್‌ಬರ್ಗ್‌ನ ದ ವಾಂಡರರ್ಸ್‌ನಲ್ಲಿ ಫೈನಲ್‌ ಪಂದ್ಯ ಜರುಗಲಿದೆ.

SA20 ಟೂರ್ನಿಯಲ್ಲಿ ಪಾಲ್ಗೊಂಡಿರುವ ತಂಡಗಳ ಆಟಗಾರರ ಕಂಪ್ಲೀಟ್ ಡೀಟೈಲ್ಸ್ ಹೀಗಿದೆ:

ಎಂಐ ಕೇಪ್‌ಟೌನ್‌:

ರಶೀದ್ ಖಾನ್‌(ನಾಯಕ), ರಾಸ್ಸಿ ವ್ಯಾನ್ ಡರ್‌ ಡುಸೇನ್, ಝ್ಯಾಯೆದ್ ಅಬ್ರಾಮ್ಸ್, ವೆಸ್ಲೆ ಮಾರ್ಷಲ್, ರಿಯಾನ್ ರಿಕಲ್ಟನ್, ಗ್ರ್ಯಾಂಟ್ ರೊಲೆಫ್ಸನ್, ಡೆವಾಲ್ಡ್ ಬ್ರೆವೀಸ್, ಸ್ಯಾಮ್ ಕರ್ರನ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾರ್ಜ್ ಲಿಂಡೆ, ಡುಯನ್ ಯಾನ್ಸನ್, ಒಡೆನ್ ಸ್ಮಿತ್, ಕಗಿಸೋ ರಬಾಡ, ಬ್ಯುರನ್ ಹೆಂಡ್ರಿಕ್ಸ್‌, ಡಿಲಾನೊ ಪೊಟೇಟರ್, ಜೋಫ್ರಾ ಆರ್ಚರ್, ಒಲಿ ಸ್ಟೋನ್ ಮತ್ತು ವಕಾರ್ ಸಾಲಮಕೇಲ್.

ಜೋಹಾನ್ಸ್‌ಬರ್ಗ್‌ ಸೂಪರ್‌ ಕಿಂಗ್ಸ್‌:
ಫಾಫ್ ಡು ಪ್ಲೆಸಿಸ್(ನಾಯಕ), ಹ್ಯಾರಿ ಬ್ರೂಕ್, ಜಾನೆಮನ್ ಮಲಾನ್, ರೀಜಾ ಹೆಂಡ್ರಿಕ್ಸ್, ಕೈಲ್ ವೆರಿಯೆನ್ನೆ, ಡೊನಾವನ್‌ ಫೆರಾರಿಯಾ, ರೊಮ್ಯಾರಿಯೋ ಶೆಫರ್ಡ್, ಗೆರಾರ್ಲ್ಡ್‌ ಕೋಝಿ, ಜಾರ್ಜ್‌ ಗಾರ್ಟನ್, ಲಿಯೂಸ್ ಡು ಪೋಲೆ, ಲೆವಿಸ್ ಗ್ರೆಗೊರಿ, ನಂದ್ರೆ ಬರ್ಗರ್, ಕ್ಯಾಲೆಬ್‌ ಸೆಲೆಕಾ, ಮಹೀಶ್ ತೀಕ್ಷಣ, ಅಲ್ಜೆರಿ ಜೋಸೆಫ್, ಲಿಜ್ಜಾಡ್‌ ವಿಲಿಯಮ್ಸ್, ಮಲುಸಿ ಸಿಬಾಟ, ಆರೋನ್ ಫಂಗಿಸೋ.

ಸನ್‌ರೈಸರ್ಸ್‌ ಈಸ್ಟರ್ನ್‌:
ಏಯ್ಡನ್ ಮಾರ್ಕ್‌ರಮ್‌(ನಾಯಕ), ಒಟ್ಟನೈಲ್ ಬಾರ್ಟ್‌ಮನ್‌, ಮಾರ್ಕೊ ಯಾನ್ಸೆನ್, ಟ್ರಿಸ್ಟನ್ ಸ್ಟಬ್ಸ್, ಸಿಸಾಂದ ಮಗಲಾ,ಜುನೈದ್ ದಾವೂದ್, ಮಾಸೂದ್ ಕ್ರೇನ್, ಜಾನ್-ಜಾನ್ ಸ್ಮುಟ್ಸ್, ಜೋರ್ಡನ್ ಕಾಕ್ಸ್, ಆಡಂ ರೊಸ್ಸಿಗ್ಟನ್, ರೊಲೆಫ್ ವ್ಯಾನ್ ಡರ್ ಮೆರ್ಮೆ, ಮಾರ್ಕೆಸ್‌ ಅಕೆರ್‌ಮನ್, ಜೇಮ್ಸ್ ಪುಲ್ಲರ್‌, ಬ್ರೈಡನ್‌ ಕೇರ್ಸ್‌, ಸರೆಲ್ ಎರ್ವೆ, ಅಯಾ ಗಾಮಾನೆ, ಟಾಮ್ ಆಬೆಲ್ ಮತ್ತು ಜೋರ್ಡನ್‌ ಹಾರ್ಮನ್.

ಪ್ರಿಟೋರಿಯಾ ಕ್ಯಾಪಿಟಲ್ಸ್‌:

ವೇಯ್ನ್ ಪಾರ್ನೆಲ್(ನಾಯಕ), ಏನ್ರಿಚ್ ನೋಕಿಯಾ, ಮಿಗೇಲ್ ಪ್ರಿಟೋರಿಯಸ್, ರಿಲೇ ರೂಸೌ, ಫಿಲ್ ಸಾಲ್ಟ್‌, ಜೋಶ್ ಲಿಟ್ಲ್‌, ಶಾನ್‌ ವಾನ್‌ ಬ್ರೆಗ್, ಆದಿಲ್ ರಶೀದ್, ಕ್ಯಾಮರೋನ್ ಡೆಲ್ಪೋರ್ಟ್‌, ವಿಲ್ ಜೇಕ್ಸ್, ಟ್ಯುನಿಸ್ ಡೆ ಬ್ರೃಯಾನ್, ಮಾರ್ಕೊ ಮ್ಯಾರಿಸ್, ಜೇಮ್ಸ್ ನೀಶಮ್, ಕುಸಾಲ್ ಮೆಂಡಿಸ್, ಡೇರನ್‌ ಡುಪವಿಲ್ಲನ್, ಸೇನುರನ್‌ ಮುತ್ತುಸಾಮಿ, ಮತ್ತು ಈಟನ್‌ ಬೋಸ್.

ಡರ್ಬನ್‌ ಸೂಪರ್‌ ಜೈಂಟ್ಸ್‌:

ಕ್ವಿಂಟನ್ ಡಿ ಕಾಕ್(ನಾಯಕ), ಪ್ರೆನೆಲಾನ್ ಸುಬ್ರಾಯೆನ್, ಜೇಸನ್ ಹೋಲ್ಡರ್, ಕೈಲ್ ಮೇಯರ್ಸ್‌, ರೀಸ್ ಟೋಪ್ಲೆ, ಡ್ವೇನ್ ಪ್ರಿಟೋರಿಯಸ್, ಹೆನ್ರಿಚ್ ಕ್ಲಾಸೇನ್, ಕೀಮೋ ಪೌಲ್, ಕೇಶವ್ ಮಹರಾಜ್, ಕೈಲ್ ಅಬೋಟ್, ಜೂನಿಯರ್ ಡಾಲಾ, ದಿಲ್ಷನ್‌ ಮದುಶನಕ, ಜಾನ್ಸನ್‌ ಕಾರ್ಲ್ಸ್‌, ಮ್ಯಾಥ್ಯೂ  ಬ್ರೆಕೆ, ಕ್ರಿಸ್ಟಿನಾ ಜಾನ್ಕರ್, ವಿಯಾನ್ ಮುಲ್ಡರ್, ಅಕಿಲಾ ಧನಂಜಯ, ಸಿಮೊನ್‌ ಹಾರ್ಮರ್.

ಪಾರ್ಲ್‌ ರಾಯಲ್ಸ್

ಡೇವಿಡ್ ಮಿಲ್ಲರ್(ನಾಯಕ), ಕೋರ್ಬಿಯನ್ ಬೋಸ್, ಜೋಸ್ ಬಟ್ಲರ್, ಒಬೆಡ್ ಮೆಕಾಯ್, ಲುಂಗಿ ಎಂಗಿಡಿ, ತಬ್ರೀಜ್ ಶಮ್ಸಿ, ಜೇಸನ್ ರಾಯ್, ಡೇನ್ ವಿಲಾಸ್, ಬೋರನ್‌ ಫೋರ್ಟಿಸ್‌, ವಿಹಾನ್ ಲುಬ್ಬೆ, ಪೆರಿಸ್ಕೊ ಆಡಮ್ಸ್, ಇಮ್ರಾನ್‌ ಮೊನಾಕ್‌, ಎವಾನ್‌ ಜೋನಾನ್ಸ್, ರೊಮಾನ್‌ ಸಿಮೊಂಡ್ಸ್‌, ಮಿಚೆಲ್‌ ವ್ಯಾನ್ ಬುರ್ರೇನ್, ಇಯಾನ್ ಮಾರ್ಗನ್, ಆಂಡಿಲೆ ಫೆಲಾಕ್ವಾಯೋ, ಕೋಡಿ ಯೂಸುಫ್.

click me!