SA20 2023: ಸೌಥ್ ಆಫ್ರಿಕಾ ಟಿ20 ಲೀಗ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ತಿಳಿದಿರಬೇಕಾದ ಸಂಗತಿಗಳಿವು..!

By Naveen KodaseFirst Published Jan 6, 2023, 5:11 PM IST
Highlights

ದಕ್ಷಿಣ ಆಫ್ರಿಕಾ 20 ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ
SA20 ಟೂರ್ನಿಯಲ್ಲಿ ಆರು ತಂಡಗಳು ಪ್ರಶಸ್ತಿಗಾಗಿ ಕಾದಾಟ
ಉದ್ಘಾಟನಾ ಪಂದ್ಯದಲ್ಲಿ ಎಂಐ ಕೇಪ್‌ಟೌನ್‌ ಹಾಗೂ ಪರ್ಲ್‌ ರಾಯಲ್ಸ್ ತಂಡಗಳು ಕಾದಾಟ

ಬೆಂಗಳೂರು(ಜ.06): ಚೊಚ್ಚಲ ಆವೃತ್ತಿಯ ದಕ್ಷಿಣ ಆಫ್ರಿಕಾ 20 ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಜನವರಿ 10 ರಿಂದ ಆರಂಭವಾಗಲಿರುವ SA20 ಟೂರ್ನಿಯಲ್ಲಿ ಆರು ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಜನವರಿ 10 ರಂದು ಕೇಪ್‌ಟೌನ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಎಂಐ ಕೇಪ್‌ಟೌನ್‌ ಹಾಗೂ ಪರ್ಲ್‌ ರಾಯಲ್ಸ್ ತಂಡಗಳು ಕಾದಾಡಲಿವೆ.

ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಗೊಂಡಿರುವ ಚೊಚ್ಚಲ ಆವೃತ್ತಿಯ SA20 ಟೂರ್ನಿಯು ಈಗಾಗಲೇ ಹಲವು ಕಾರಣಗಳಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. SA20 ಟೂರ್ನಿಯು ಜನವರಿ 10ರಿಂದ ಫೆಬ್ರವರಿ 11ರ ವರೆಗೆ ನಡೆಯಲಿದೆ. ಆದರೆ ಜನವರಿ 25ರಿಂದ ಫೆಬ್ರವರಿ 01ರವರೆಗೆ ಟೂರ್ನಿ ತಾತ್ಕಾಲಿಕವಾಗಿ ಸ್ಥಗಿತವಾಗಲಿದ್ದು, ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ತಂಡವು ತವರಿನಲ್ಲಿ ಇಂಗ್ಲೆಂಡ್ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಲಿದೆ.

SA20 ಟೂರ್ನಿಯಲ್ಲಿ ಒಟ್ಟು 33 ಪಂದ್ಯಗಳು ಜರುಗಲಿದ್ದು, ಎಲ್ಲಾ 6 ತಂಡಗಳು ಎದುರಾಳಿ ತಂಡಗಳ ಎದುರು ತಲಾ ಮೂರು ಪಂದ್ಯಗಳನ್ನಾಡಲಿದೆ. ಲೀಗ್ ಹಂತದಲ್ಲಿ ಎಲ್ಲಾ ತಂಡಗಳು ಒಂದು ಪಂದ್ಯವನ್ನು ತವರಿಯಲ್ಲಿ ಮತ್ತೊಂದು ಪಂದ್ಯವನ್ನು ತವರಿನಾಚೆ ಆಡಲಿದೆ.  SA20 ಟೂರ್ನಿಯ ಲೀಗ್ ಹಂತದ ಪಂದ್ಯಗಳಿಗೆ ಕೇಪ್‌ಟೌನ್‌, ಡರ್ಬನ್‌, ಪರ್ಲ್‌ ಹಾಗೂ ಕ್ಯುಬೇರಾ ಮೈದಾನಗಳು ಆತಿಥ್ಯ ವಹಿಸಲಿವೆ. ಇನ್ನು ಜೋಹಾನ್ಸ್‌ಬರ್ಗ್‌ ಹಾಗೂ ಸೆಂಚೂರಿಯನ್‌ನಲ್ಲಿ ಎಲಿಮಿನೇಟರ್ ಪಂದ್ಯಗಳು ಜರುಗಲಿವೆ.

ICC ಏಕದಿನ ವಿಶ್ವಕಪ್‌ಗೆ BCCI ಆಯ್ಕೆ ಮಾಡಿದ ಭಾರತ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಯಾರಿಗೆಲ್ಲಾ ಸ್ಥಾನ..?

SA20 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಒಡೆತನದ ಎಂಐ ಕೇಪ್‌ಟೌನ್‌, ಲಖನೌ ಸೂಪರ್‌ಜೈಂಟ್ಸ್ ಫ್ರಾಂಚೈಸಿ ಒಡೆತನದ ಡರ್ಬನ್‌ ಸೂಪರ್‌ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ಒಡೆತನದ ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್‌ ಒಡೆತನದ ಪಾರ್ಲ್ ರಾಯಲ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಒಡೆತನದ ಪ್ರಿಟೋರಿಯಾ ಕ್ಯಾಪಿಟಲ್ಸ್‌ ಹಾಗೂ ಸನ್‌ರೈಸರ್ಸ್ ಒಡೆತನದ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡಗಳು ಟ್ರೋಫಿಗಾಗಿ ಕಾದಾಡಲಿವೆ.  ಫೆಬ್ರವರಿ 11ರಂದು ಜೋಹಾನ್ಸ್‌ಬರ್ಗ್‌ನ ದ ವಾಂಡರರ್ಸ್‌ನಲ್ಲಿ ಫೈನಲ್‌ ಪಂದ್ಯ ಜರುಗಲಿದೆ.

click me!