CSK ಫ್ರಾಂಚೈಸಿಗೆ ಬಲವಾದ ಹೊಡೆತ; ಗಾಯದಿಂದಾಗಿ ತಂಡದ ಕ್ಯಾಪ್ಟನ್‌ ಟೂರ್ನಿಯಿಂದಲೇ ಔಟ್!

Published : Jan 13, 2026, 06:08 PM IST
CSK Logo

ಸಾರಾಂಶ

ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್‌ ತಂಡದ ನಾಯಕ ಫಾಫ್ ಡು ಪ್ಲೆಸಿಸ್, ಉಂಗುರದ ಬೆರಳಿನ ಗಾಯದ ಸಮಸ್ಯೆಯಿಂದಾಗಿ 2025-26ನೇ ಸಾಲಿನ ಸೌಥ್ ಆಫ್ರಿಕಾ ಟಿ20 ಲೀಗ್‌ನಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಅವರ ಅನುಪಸ್ಥಿತಿಯಲ್ಲಿ, ತಂಡವು ಹೊಸ ನಾಯಕನ ಹುಡುಕಾಟದಲ್ಲಿದೆ.

ಜೋಹಾನ್ಸ್‌ಬರ್ಗ್‌: 2025-26ನೇ ಸಾಲಿನ ಸೌಥ್ ಆಫ್ರಿಕಾ ಟಿ20 ಲೀಗ್ ಭರ್ಜರಿಯಾಗಿ ಸಾಗುತ್ತಿದೆ. ಈಗಾಗಲೇ ಟೂರ್ನಿಯ ಮೊದಲಾರ್ಧ ಮುಕ್ತಾಯವಾಗಿದ್ದು, ದ್ವಿತಿಯಾರ್ಧದ ಸಾಕಷ್ಟು ರೋಚಕತೆ ಕಾಯ್ದುಕೊಳ್ಳುತ್ತಾ ಸಾಗುತ್ತಿದೆ. ಹೀಗಿರುವಾಗಲೇ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಮುನ್ನುಗ್ಗುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ತಂಡವಾದ ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್‌ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್‌ ತಂಡದ ಕ್ಯಾಪ್ಟನ್ ಗಾಯದ ಸಮಸ್ಯೆಯಿಂದಾಗಿ ಫಾಫ್ ಡು ಪ್ಲೆಸಿಸ್‌ SA20 ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್‌ ತಂಡವು ಹೊಸ ನಾಯಕನ ಹುಡುಕಾಟದಲ್ಲಿದೆ. ಸದ್ಯ ಫಾಫ್ ಡು ಪ್ಲೆಸಿಸ್ ಇದೀಗ ಟೂರ್ನಿಯಿಂದ ಹೊರಬಿದ್ದಿರುವುದರಿಂದ ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್‌ ತಂಡದಲ್ಲಿರುವ ಇಬ್ಬರು ಆಟಗಾರರು ಇದೀಗ ನಾಯಕರಾಗುವ ರೇಸ್‌ನಲ್ಲಿದ್ದಾರೆ.

SA20 ಟೂರ್ನಿಯಿಂದ ಫಾಫ್ ಡು ಪ್ಲೆಸಿಸ್ ಔಟ್:

ಎಂಐ ಕೇಪ್‌ಟೌನ್ ಎದುರು ಜನವರಿ 10ರಂದು ನಡೆದ ಪಂದ್ಯದಲ್ಲಿ ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್‌ ತಂಡದ ನಾಯಕ ಹಾಗೂ ಆರಂಭಿಕ ಬ್ಯಾಟರ್ ಫಾಫ್ ಡು ಪ್ಲೆಸಿಸ್, ಉಗುಂರದ ಬೆರಳಿನ ಗಾಯಕ್ಕೆ ಒಳಗಾಗಿದ್ದಾರೆ. ಇದೇ ಕಾರಣದಿಂದ ಸಂಪೂರ್ಣ ಟೂರ್ನಿಯಿಂದಲೇ ಫಾಫ್ ಹೊರಬಿದ್ದಿದ್ದಾರೆ. ಇದೀಗ ಸಿಎಸ್‌ಕೆ ಫ್ರಾಂಚೈಸಿಯು, ಫಾಫ್ ಸರ್ಜರಿಗೆ ಒಳಗಾಗಲಿದ್ದಾರೆ ಎನ್ನುವುದನ್ನು ಖಚಿತಪಡಿಸಿದೆ. ಇದೀಗ ಫಾಫ್ ಡು ಪ್ಲೆಸಿಸ್ SA20 ಲೀಗ್ ಜತೆಜತೆಗೆ 2026ರ ಪಾಕಿಸ್ತಾನ ಸೂಪರ್ ಲೀಗ್‌ನಿಂದಲೂ ಹೊರಬಿದ್ದಿದ್ದಾರೆ. ಅಂದಹಾಗೆ ಫಾಫ್ ಡು ಪ್ಲೆಸಿಸ್ ಚೇತರಿಸಿಕೊಳ್ಳಲು ಇನ್ನೆಷ್ಟು ಸಮಯ ಬೇಕಾಗಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. 'ನಮ್ಮ ನಾಯಕನಿಗೆ ನಮ್ಮೆಲ್ಲರ ಪ್ರೀತಿ ನಿಮ್ಮ ಜತೆ ಇರಲಿದೆ. ಉಂಗುರದ ಬೆರಳಿನ ಗಾಯಕ್ಕೆ ಒಳಗಾಗಿರುವುದರಿಂದ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರು ಸರ್ಜರಿಗೆ ಒಳಗಾಗಲಿದ್ದು, ಆದಷ್ಟು ಬೇಗ ಚೇತರಿಸಿಕೊಳ್ಳಲಿ' ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

 

ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್‌ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದ ಫಾಫ್ ಡು ಪ್ಲೆಸಿಸ್:

ದಕ್ಷಿಣ ಆಫ್ರಿಕಾ ಮೂಲದ 41 ವರ್ಷದ ಅನುಭವಿ ಆಟಗಾರ ಫಾಫ್ ಡು ಪ್ಲೆಸಿಸ್ ಕಳೆದ ಐದು ಪಂದ್ಯಗಳಲ್ಲಿ ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್‌ ಪರ 27ರ ಸರಾಸರಿ ಹಾಗೂ 151.68ರ ಸ್ಟ್ರೈಕ್‌ರೇಟ್‌ನಲ್ಲಿ 135 ರನ್ ಸಿಡಿಸಿದ್ದರು. ಫಾಫ್ ಡು ಪ್ಲೆಸಿಸ್ ನೇತೃತ್ವದ ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್‌ ತಂಡವು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್‌ ತಂಡವು ಹೊಸ ನಾಯಕನ ಹುಡುಕಾಟದಲ್ಲಿದ್ದು, ರಿಲೇ ರೂಸೌ ಹಾಗೂ ವಿಯಾನ್ ಮುಲ್ಡರ್ ಈ ಇಬ್ಬರ ಪೈಕಿ ಒಬ್ಬರಿಗೆ ನಾಯಕತ್ವ ಪಟ್ಟ ಕಟ್ಟುವ ಸಾಧ್ಯತೆಯಿದೆ. ಈ ಇಬ್ಬರು ಆಟಗಾರರು SA20 ಟೂರ್ನಿಯಲ್ಲಿ ಇಲ್ಲಿಯವರೆಗೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇನ್ನು ಫಾಫ್ ಡು ಪ್ಲೆಸಿಸ್‌ಗೆ ಬದಲಿ ಆಟಗಾರನಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳಲಿದೆ ಎನ್ನುವ ಕುತೂಹಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಹುಲ್ ದ್ರಾವಿಡ್ ಅದೊಂದು ತಪ್ಪು ತೀರ್ಮಾನ ಮಾಡಿದ್ರೆ ಧೋನಿ ಕ್ಯಾಪ್ಟನ್ ಆಗ್ತಾನೇ ಇರಲಿಲ್ಲ!
ಅರ್ಜುನ್‌ ತೆಂಡುಲ್ಕರ್‌ ಮದುವೆ ನಿಶ್ಚಯವಾದ ಬೆನ್ನಲ್ಲೇ ಸಚಿನ್‌ ದೊಡ್ಡ ನಿರ್ಧಾರ, ಶೀಘ್ರವೇ ಸಾರಾ ತೆಂಡುಲ್ಕರ್‌ ವಿವಾಹ