
ಬೆಂಗಳೂರು(ಏ.21): ಹೇಳಿ ಕೇಳಿ ಐಪಿಎಲ್ ಅಂದ್ರೆ ರನ್ ಹೊಳೆ ಹರಿಯುವ ಟೂರ್ನಿ. ಇಲ್ಲಿ ಬೌಲರ್ಸ್ ಪಾರಮ್ಯ ಕಮ್ಮಿ. ಬ್ಯಾಟರ್ಗಳ ದರ್ಬಾರ್ ಸದಾ ಜೋರು. ಅದಕ್ಕೆ ಈ ಸಲದ ಐಪಿಎಲ್ ಕೂಡ ಹೊರತಾಗಿಲ್ಲ. ಬೌಲರ್ಸ್ಗಿಂತ ಹೆಚ್ಚಾಗಿ ಬ್ಯಾಟರ್ಗಳ ಸಿಕ್ಸರ್-ಬೌಂಡರಿ ಸದ್ದುನೇ ಹೆಚ್ಚು ಕೇಳಿಸ್ತಿದೆ. ವಿದೇಶಿ ಪ್ಲೇಯರ್ಸ್ ಜೊತೆ ದೇಶಿ ಯುವ ಕ್ರಿಕೆಟರ್ಸ್ ಪ್ರಬಲ ಪೈಪೋಟಿಗೆ ಇಳಿದಿದ್ದಾರೆ. ಆದರೆ ಯಾರು ಈ ಸಲ ಕಲರ್ಫುಲ್ ಟೂರ್ನಿಯಲ್ಲಿ ರನ್ ಭರಾಟೆ ನಡೆಸ್ತಾರೆ ಅಂದುಕೊಂಡಿದ್ರೋ ಅವರೆಲ್ಲಾ ಸೈಲೆಂಟಾಗಿದ್ದಾರೆ. ಆ ಪೈಕಿ ಟೀಂ ಇಂಡಿಯಾ (Team India) ಹಾಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ಮುಂಚೂಣಿಯಲ್ಲಿದ್ದಾರೆ.
ಹೌದು, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ (Rohit Sharma) ಪ್ರಸಕ್ತ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡ್ತಿಲ್ಲ. ಇವರ ಮೇಲಿದ್ದ ನಿರೀಕ್ಷೆಗಳೆಲ್ಲವೂ ಹುಸಿಯಾಗಿವೆ. ರೋಹಿತ್ ನಾಯಕನ ಜೊತೆ ಬ್ಯಾಟಿಂಗ್ನಲ್ಲಿ ದಯನೀಯ ವೈಫಲ್ಯ ಅನುಭವಿಸ್ತಿದ್ದಾರೆ. ಇನ್ನು ಕೊಹ್ಲಿ ಆರ್ಸಿಬಿ ಕ್ಯಾಪ್ಟನ್ಸಿ ತೊರೆದ ಬಳಿಕ ರನ್ ಗುಡ್ಡೆ ಹಾಕುವಲ್ಲಿ ಫೇಲಾಗಿದ್ದಾರೆ. ಕೆಂಪಂಗಿ ಸೈನ್ಯ ಉತ್ತಮ ಪ್ರದರ್ಶನ ಹೊರತಾಗಿಯೂ ಕೊಹ್ಲಿ ಬ್ಯಾಡ್ಫಾರ್ಮ್ ತಂಡವನ್ನ ಚಿಂತಿಗೀಡು ಮಾಡಿದೆ.
19.83 ಎವರೇಜ್ನಲ್ಲಿ 119 ರನ್ ಬಾರಿಸಿದ ಕೊಹ್ಲಿ:
ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ತಕ್ಕಂತೆ ಐಪಿಎಲ್‌ನಲ್ಲಿ ವಿರಾಟ ರೂಪ ತಾಳ್ತಿದ್ರು. ಆದ್ರೆ ಈ ಬಾರಿ ಯಾಕೋ ಕೊಹ್ಲಿ ಬ್ಯಾಟ್ ಸೌಂಡ್ ಮಾಡ್ತಿಲ್ಲ. ಸೀಸನ್ವೊಂದರಲ್ಲೇ 4 ಶತಕ ಸಿಡಿಸಿದ ಹಿರಿಮೆಗಾರ ಈಗ ಒಂದೊಂದು ರನ್ ಗಳಿಸೋಕು ತಿಣುಕಾಡ್ತಿದ್ದಾರೆ. ಅರ್ಧಶತಕ, ಶತಕ ಅನ್ನೋದು ಇವರಿಗೆ ಮರೆತು ಹೋಗಿದೆ. ಪ್ರಸಕ್ತ ಐಪಿಎಲ್‌ನಲ್ಲಿ 7 ಪಂದ್ಯಗಳನ್ನಾಡಿರೋ ವಿರಾಟ್ ಕೊಹ್ಲಿ 19.83 ರ ಎವರೇಜ್ನಲ್ಲಿ ಬರೀ 119 ರನ್ ಕಲೆ ಹಾಕಿದ್ದಾರೆ. 48 ಈವರೆಗಿನ ಬೆಸ್ಟ್ ಸ್ಕೋರ್ ಆಗಿದೆ.
IPL 2022: ಅಳಿವು, ಉಳಿವಿಗಾಗಿ ಮುಂಬೈ vs ಚೆನ್ನೈ ಫೈಟ್..!
19.0 ರ ಎವರೇಜ್ನಲ್ಲಿ ರೋಹಿತ್ 114 ರನ್: ಇನ್ನು ರೋಹಿತ್ ಶರ್ಮಾ ಕೂಡ ಮಂಕಾಗಿದ್ದಾರೆ. ನಾಯಕನ ಜೊತೆ ಫಾರ್ಮ್ ಕೂಡ ಕಳೆದುಕೊಂಡಿದ್ದಾರೆ. ಬಿಗ್ ಇನ್ನಿಂಗ್ಸ್ ಮೂಡಿ ಬಂದಿಲ್ಲ. ಬೌಲರ್ಸ್ಗಳಿಗೆ ಸಿಲ್ಲಿಯಾಗಿ ವಿಕೆಟ್ ಒಪ್ಪಿಸ್ತಿದ್ದಾರೆ. ಇಂದು ಚೆನ್ನೈ ವಿರುದ್ಧ ಪಂದ್ಯ ನಡೆಯಲಿದ್ದು, ಲಯಕ್ಕೆ ಮರಳಲು ಎದುರು ನೋಡ್ತಿದ್ದಾರೆ. ಈವರೆಗೆ ಒಟ್ಟು 6 ಪಂದ್ಯ ಆಡಿರುವ ರೋಹಿತ್ ಶರ್ಮಾ 19.00ರ ಎವರೇಜ್ನಲ್ಲಿ 114 ರನ್ ಗಳಿಸಿದ್ದಾರೆ. 41 ಬೆಸ್ಟ್ ಸ್ಕೋರ್ ಆಗಿದೆ. ಸೆಂಚುರಿ, ಹಾಫ್ಸೆಂಚುರಿ ಈವರೆಗೆ ಮೂಡಿ ಬಂದಿಲ್ಲ.
ಟಿ20 ವಿಶ್ವಕಪ್ ಮುನ್ನ ಫಾರ್ಮ್ ಕಂಡುಕೊಳ್ತಾರಾ ಕೊಹ್ಲಿ-ರೋಹಿತ್..?:
ಐಪಿಎಲ್‌ನಲ್ಲಿ ರೋಹಿತ್ ಹಾಗೂ ಕೊಹ್ಲಿ ಕಳಪೆ ಆಟ ಟೀಮ್ ಇಂಡಿಯಾಗೆ ಟೆನ್ಷನ್ ತಂದೊಡ್ಡಿದೆ. ಯಾಕಂದ್ರೆ ಈ ವರ್ಷಾಂತ್ಯದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. 2013ರ ಬಳಿಕ ಟೀಮ್ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಆ ಕನಸು ಬಾರಿ ನನಸಾಗಬೇಕಾದ್ರೆ ಕೊಹ್ಲಿ ಹಾಗೂ ರೋಹಿತ್ರಂತ ಲೆಜೆಂಡ್ ಕ್ರಿಕೆಟರ್ಸ್ ಫಾರ್ಮ್ಗೆ ಮರಳೋದು ಅತಿ ಅಗತ್ಯ. ಉಳಿದಿರೋ ಶಾರ್ಟ್ ಟೈಮ್ನಲ್ಲಿ ಇಬ್ಬರು ಬ್ಯಾಡ್ಫಾರ್ಮ್ ಮೆಟ್ಟಿನಿಂತು, ಚುಟುಕು ಮಹಾಸಮರದ ವೇಳೆಗೆ ರನ್ ಗುಡ್ಡೆ ಹಾಕ್ತಾರಾ ಅನ್ನೋದನ್ನ ಕಾದು ನೋಡಬೇಕು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.