
ಬೆಂಗಳೂರು (ಆ.3): ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ 'ಹಿಟ್‌ಮ್ಯಾನ್' ಎಂದೇ ಖ್ಯಾತರಾಗಿರುವ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಅಪರೂಪದ ಹಾಗೂ ಹೈ-ವೋಲ್ಟೇಜ್ ಮೈಲಿಗಲ್ಲಿನ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ. ತಮ್ಮ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಈವರೆಗೆ ಒಟ್ಟು 984 ವಿಭಿನ್ನ ಅಂತಾರಾಷ್ಟ್ರೀಯ ಆಟಗಾರರೊಂದಿಗೆ (ತಮ್ಮ ಸಹ-ಆಟಗಾರರಾಗಿ ಅಥವಾ ಎದುರಾಳಿ ಆಟಗಾರರಾಗಿ) ಮೈದಾನ ಹಂಚಿಕೊಂಡಿರುವ ರೋಹಿತ್, ಇದೀಗ ಕೇವಲ 16 ಆಟಗಾರರನ್ನು ಎದುರಿಸಿದರೆ ಸಾಕು, 1,000 ವಿಭಿನ್ನ ಕ್ರಿಕೆಟಿಗರ ಜೊತೆ ಮೈದಾನ ಹಂಚಿಕೊಂಡ ಮೊದಲ ಭಾರತೀಯ ಆಟಗಾರ ಎಂಬ ಐತಿಹಾಸಿಕ ದಾಖಲೆಗೆ ಭಾಜನರಾಗಲಿದ್ದಾರೆ.
ರೋಹಿತ್ ಶರ್ಮಾ ತಮ್ಮ ಕ್ರೀಡಾಜೀವನದಲ್ಲಿ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಒಟ್ಟು 19 ಪ್ರಮುಖ ಹಾಗೂ ಜೂನಿಯರ್ ಕ್ರಿಕೆಟ್ ರಾಷ್ಟ್ರಗಳ ಆಟಗಾರರ ವಿರುದ್ಧ/ಆಟಗಾರರೊಂದಿಗೆ ಪಂದ್ಯಗಳನ್ನಾಡಿದ್ದಾರೆ. ಅವರ ಈ 984 ಆಟಗಾರರ ವಿವರ ಇಲ್ಲಿದೆ.
2007ರಲ್ಲಿ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದ ರೋಹಿತ್ ಶರ್ಮಾ, ಇಂದಿನವರೆಗೂ ದೀರ್ಘಾವಧಿಯ ಯಶಸ್ವಿ ಕ್ರಿಕೆಟ್ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ. ಪ್ರಸ್ತುತ 984 ಆಟಗಾರರೊಂದಿಗೆ ಮೈದಾನ ಹಂಚಿಕೊಂಡಿರುವ ಹಿಟ್‌ಮ್ಯಾನ್‌ಗೆ ಇನ್ನು ಕೇವಲ 16 ಹೊಸ ಆಟಗಾರರು ಸಿಕ್ಕರೆ, ಅವರು 1,000 ಆಟಗಾರರ ಜೊತೆ ಜಂಟಿಯಾಗಿ ಮೈದಾನ ಹಂಚಿಕೊಂಡ ಏಕೈಕ ಭಾರತೀಯ ಎಂಬ ಅಪರೂಪದ ದಾಖಲೆ ನಿರ್ಮಿಸಲಿದ್ದಾರೆ. ಇಲ್ಲಿವರೆಗೂ ಭಾರತದ ಯಾವ ಆಟಗಾರರು ಕೂಡ ಈ ದಾಖಲೆ ಮಾಡಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.