
ಮುಂಬೈ(ಮೇ.07) ಐಪಿಎಲ್ ಟೂರ್ನಿಯಲ್ಲಿ ಬ್ಯೂಸಿಯಾಗಿರುವ ರೋಹಿತ್ ಶರ್ಮಾ ದಿಢೀರ್ ಆಗಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ತಂಡದ ಆಯ್ಕೆ ಕಸರತ್ತು ನಡೆಯುತ್ತಿರುವ ಬೆನ್ನಲ್ಲೇ ಭಾರಿ ಕಸರತ್ತು ನಡೆದಿದೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ದಿಢೀರ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ತಕ್ಷಣದಿಂದ ಟೆಸ್ಟ್ ಮಾದರಿಯಿಂದ ನಿವೃತ್ತಿಯಾಗುವುದಾಗಿ ರೋಹಿತ್ ಶರ್ಮಾ ಹೇಳಿದ್ದಾರೆ. ಈ ಬೆಳವಣಿಗೆ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಬೇಸರ ತರಿಸಿದೆ. ರೋಹಿತ್ ಶರ್ಮಾಗೆ ಈಗಾಗಲೇ ಬಿಸಿಸಿಐ ವಾರ್ನಿಂಗ್ ನೀಡಿತ್ತು, ಇಷ್ಟೇ ಅಲ್ಲ ಟೆಸ್ಟ್ ನಾಯಕತ್ವದಿಂದ ರೋಹಿತ್ ಶರ್ಮಾರನ್ನು ಕಿತ್ತು ಹಾಕಲು ಚರ್ಚೆ ನಡೆದಿತ್ತು ಅನ್ನೋ ಮಾಹಿತಿಗಳು ಹೊರಬೀಳುತ್ತಿದ್ದಂತೆ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ರೋಹಿತ್ ಶರ್ಮ ಭಾವುಕ ಸಂದೇಶ
ಎಲ್ಲರಿಗೆ ಹೆಲೋ, ನಾನು ಒಂದು ವಿಚಾರವನ್ನು ಇಲ್ಲಿ ಹೇಳುತ್ತಿದ್ದೇನೆ. ನಾನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ. ಬಿಳಿ ಜರ್ಸಿಯಲ್ಲಿ ದೇಶ ಪ್ರತಿನಿಧಿಸುವುದು ನನ್ನ ಅತೀವ ಹೆಮ್ಮೆಯ ಕ್ಷಣವಾಗಿತ್ತು. ಕಳೆದ ಹಲವು ವರ್ಷಗಳಿಂದ ನೀಡಿದ ಬೆಂಬಲ, ಪ್ರೋತ್ಸಾಹಕ್ಕೆ ಧನ್ಯವಾದ. ನಾನು ಟೀಂ ಇಂಡಿಯಾದ ಏಕದಿನ ಮಾದರಿಯಲ್ಲಿ ಮಂದುವರಿಯುತ್ತೇನೆ ಎಂದು ಅಭಿಮಾಗಳಿಗೆ ಸಂದೇಶ ನೀಡಿದ್ದಾರೆ.
ರೋಹಿತ್ ಶರ್ಮಾ ಫೇಲ್ಯೂರ್ ನೆಪವೊಡ್ಡಿ ಇಂಪ್ಯಾಕ್ಟ್ ಪ್ಲೇಯರ್ ಮಾಡಿದ ಮುಂಬೈ? ಇಲ್ಲಿದೆ ವಿವರಣೆ
ಆಯ್ಕೆ ಸಮಿತಿಗೆ ಠಕ್ಕರ್ ಕೊಟ್ಟ ರೋಹಿತ್ ಶರ್ಮಾ
ಜೂನ್ 20 ರಿಂದ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿ ಆರಂಭಗೊಳ್ಳಲಿದೆ. ಹೀಗಾಗಿ ಐಪಿಎಲ್ ಟೂರ್ನಿ ನಡುವೆ ಟೀಂ ಇಂಡಿಯಾ ಆಯ್ಕೆ ಸಮಿತಿ ಕಸರತ್ತು ನಡೆಸುತ್ತಿದೆ. ಇಂಗ್ಲೆಂಡ್ ವಿರುದ್ಧದ ಸರಣಿಗೆ ಹೊಸ ನಾಯಕನ ಆಯ್ಕೆ ಮಾಡಲು ಆಯ್ಕೆ ಸಮಿತಿ ಮುಂದಾಗಿತ್ತು. ಆದರೆ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ನಾಯಕನಾಗಿ ಮುಂದುವರಿಯಲು ಬಯಸಿದ್ದರು. ಆದರೆ ಆಯ್ಕೆ ಸಮಿತಿ ಮಾತ್ರ ಹೊಸ ನಾಯಕನ ಆಯ್ಕೆಗೆ ತಯಾರಿ ಮಾಡಿತ್ತು. ಬಿಸಿಸಿಐಗೆ ರೋಹಿತ್ ಶರ್ಮಾ ಟೆಸ್ಟ್ ನಾಯಕತ್ವ ಹಾಗೂ ಫಾರ್ಮ್ ಕುರಿತು ಅಂಕಿ ಅಂಶ ತೆರೆದಿಟ್ಟಿತ್ತು. ಹೀಗಾಗಿ ರೋಹಿತ್ ಶರ್ಮಾ ಇಂಗ್ಲೆಂಡ್ ಸರಣಿಯಲ್ಲಿ ಆಟಗಾರನಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಚರ್ಚೆ, ಹೈಡ್ರಾಮ ಬೆನ್ನಲ್ಲೇ ರೋಹಿತ್ ಶರ್ಮಾ ಟೆಸ್ಟ್ ಮಾದರಿಗೆ ವಿದಾಯ ಹೇಳಿದ್ದಾರೆ.
ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದ ರೋಹಿತ್ ಶರ್ಮಾ
ಮೈಕಲ್ ಕ್ಲಾರ್ಕ್ ಜೊತೆಗಿನ ಪಾಡ್‌ಕಾಸ್ಟ್ ಒಂದರಲ್ಲಿ ರೋಹಿತ್ ಶರ್ಮಾ ಪ್ರಮುಖ ವಿಚಾರವೊಂದನ್ನು ಹೇಳಿದ್ದರು. ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ತಂಡವನ್ನು ಮುನ್ನಡೆಸಲು ಬಯಸುತ್ತೇನೆ ಎಂದಿದ್ದರು. ಆದರೆ ರೋಹಿತ್ ಶರ್ಮಾ ಬಯಕೆಗೆ ಆಯ್ಕೆ ಸಮಿತಿ ಬ್ರೇಕ್ ಹಾಕಿತ್ತು. ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೈಬಿಡುವಂತೆ ಬಿಸಿಸಿಐಗೆ ಆಯ್ಕೆ ಸಮಿತಿ ಸೂಚಿಸಿತ್ತು. ಇಷ್ಟೇ ಅಲ್ಲ ಈ ಕುರಿತು ರೋಹಿತ್ ಶರ್ಮಾಗೆ ಸೂಚ್ಯವಾಗಿ ಹೇಳಿತ್ತು. ಈ ಹೈಡ್ರಾಮಗಳು ನಡೆಯುತ್ತಿರುವ ಬೆನ್ನಲ್ಲೇ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕಿತ್ತು ಹಾಕಲಾಗುತ್ತಿದೆ ಅನ್ನೋ ಮಾಹಿತಿ ಸೋರಿಕೆಯಾಗಿದೆ. ಇದು ರೋಹಿತ್ ಶರ್ಮಾಗೆ ಇನ್ನಿಲ್ಲದ ನೋವು ಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ದಿಢೀರ್ ಟೆಸ್ಟ್ ಮಾದರಿಗೆ ವಿದಾಯ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ. ರೋಹಿತ್ ಶರ್ಮಾ ವಿದಾಯ ಹಿಂದೆ ಭಾರಿ ಹೈಡ್ರಾಮ ನಡಿದೆದೆ ಅನ್ನೋದರಲ್ಲಿ ಎರಡು ಮಾತಿಲ್ಲ.
ಟೀಂ ಇಂಡಿಯಾ ಆಯ್ಕೆ ಸಮಿತಿ ಇದೀಗ ಟೀಂ ಇಂಡಿಯಾ ಟೆಸ್ಟ್ ನಾಯಕತ್ವಕ್ಕೆ ಆಯ್ಕೆ ನಡೆಯಲಿದೆ. ಯುವ ನಾಯಕತ್ವಕ್ಕೆ ಮಣೆ ಹಾಕಲು ಆಯ್ಕೆ ಸಮಿತಿ ಮುಂದಾಗಿದೆ. ಇಷ್ಟೇ ಅಲ್ಲ ರೋಹಿತ್ ಶರ್ಮಾ ಸ್ಥಾನಕ್ಕೂ ಮತ್ತೊಬ್ಬರ ಆಯ್ಕೆಯನ್ನು ನಡೆಸಬೇಕಾಗಿದೆ.
ಇದು ನಿನ್ನ ತವರು ಮನೆನಾ? ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಈ ಮಾತು ಹೇಳಿದ್ಯಾರಿಗೆ?
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.