
ಭಾರತ ಕ್ರಿಕೆಟ್ ತಂಡವು (Team India) ಇದೇ ತಿಂಗಳು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ದೊಡ್ಡ ಮಹತ್ವಾಕಾಂಕ್ಷೆಯೊಂದಿಗೆ ಆರಂಭ ಆಗುತ್ತಿರುವ ಬಿಗ್ ಈವೆಂಟ್‌ಗೆ ಟೀಂ ಇಂಡಿಯಾದಲ್ಲಿ ಗಾಯದ ಸಮಸ್ಯೆ ಕಾಡಿದೆ. ಅಂದಹಾಗೆ ಈ ಪ್ರವಾಸದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ (New Zealand) ವಿರುದ್ಧ ಐದು ಏಕದಿನ ಪಂದ್ಯ, ಐದು ಟಿ20 ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನ ಆಡಲಿದೆ.
ಕೆಲವು ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗೋದಿಲ್ಲ. ಎಷ್ಟೇ ಪ್ರತಿಭೆ ತೋರಿಸಿದರೂ ತಂಡದಲ್ಲಿ ಚಾನ್ಸ್ ಸಿಗಲ್ಲ. ಇನ್ನು ಕೆಲವರಿಗೆ ತಂಡದಲ್ಲಿ ಅವಕಾಶ ಸಿಕ್ಕರೂ ಆಡುವ ಭಾಗ್ಯ ಸಿಗೋದಿಲ್ಲ. ಆದರೆ ನಮ್ಮ ಆಗಾಗ ತಂಡಕ್ಕೆ ಬಂದು ಶೋ-ಅಪ್ ಕೊಟ್ಟು ಹೋಗುವ ರಿಷಬ್ ಪಂತ್‌ಗೆ ಮಾತ್ರ ಯಾವುದೇ ಅನ್ಯಾಯ ಆಗಿಲ್ಲ. ತಂಡದಲ್ಲಿ ಯಾವಾಗ ಕಾಣಿಸಿಕೊಳ್ಳಬೇಕು ಅಂದಾಗಲೂ ಬಿಸಿಸಿಐ ಬಾಗಿಲು ತೆರೆದು ಮುಕ್ತ ಅವಕಾಶವನ್ನು ನೀಡಿದೆ. ಆದರೆ ಅವರೇ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿಲ್ಲ.
ಅವಕಾಶ ಸಿಕ್ಕಾಗಲೆಲ್ಲ ಏನಾದರೂ ಒಂದು ಮಾಡಿಕೊಂಡು ತಂಡದಿಂದ ದೂರ ಹೋಗಿಬಿಡ್ತಾರೆ. ಅನೇಕ ಬಾರಿ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿದ್ದಾರೆ. ಈಗಲೂ ಅಷ್ಟೇ. ಈ ನ್ಯೂಜಿಲೆಂಡ್ ಸರಣಿಗಳಲ್ಲಿ ಹೆಚ್ಚುವರಿಯಾಗಿ ಭಾರತ ಎ ತಂಡ ಮೂರು ನಾಲ್ಕು ದಿನಗಳ ಪಂದ್ಯವನ್ನು ಆಡಲಿದೆ. ಆದರೆ ಪಂತ್ ಅವರನ್ನು ಎರಡು ಪಂದ್ಯಗಳಿಂದ ಕೈಬಿಡಲಾಗಿದೆ.
ಇರಾನ್ ಕಪ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಪಂತ್ ಮುನ್ನಡೆಸುತ್ತಿದ್ದಾರೆ. ಈ ಟೂರ್ನಿ ವೇಳೆ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅವರು ಭಾರತ ಎ ತಂಡದ ಮೊದಲ ಎರಡು ಪಂದ್ಯಗಳಿಂದ ಹೊರಗೆ ಉಳಿದಿದ್ದಾರೆ. ವೈದ್ಯಕೀಯ ತಂಡವು ಪಂತ್ ಅವರ ಗಾಯದ ಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ವಿಶ್ರಾಂತಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪಂತ್ ಅವರನ್ನು ಆಟದಿಂದ ಹೊರಗೆ ಇಡಲಾಗಿದೆ.
ಇನ್ನು ಪಂತ್ ಬದಲಿಗೆ ಬದಲಿ ಆಟಗಾರನನ್ನು ಬಿಸಿಸಿಐ ಆಯ್ಕೆ ಮಾಡಿದೆ. ಜಾರ್ಖಂಡ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕುಮಾರ್ ಕುಶಾಗ್ರ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಯುವ ಆಟಗಾರನಿಗೆ ಅದೊಂದು ಒಳ್ಳೆಯ ಅವಕಾಶ ಆಗಿದೆ. ಇನ್ನು, ಪಂತ್ ಅಲಭ್ಯತೆ ಬಗ್ಗೆ ಹೇಳಿಕೆ ಪ್ರಕಟಿಸಿರುವ ಬಿಸಿಸಿಐ.. ರಿಷಬ್ ಪಂತ್ ಬದಲಿಯಾಗಿ ಕುಮಾರ್ ಕುಶಾಗ್ರ ಅವರನ್ನು ಭಾರತ ಎ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪಂತ್ ಅವರ ಫಿಟ್ನೆಸ್ ಸರಿ ಹೋಗುವ ಬಗ್ಗೆ ಬಿಸಿಸಿಐ ನಿರೀಕ್ಷೆ ಮಾಡಿದೆ. ಆದರೆ ಮೊದಲ ಎರಡು ಪಂದ್ಯಗಳಿಗೆ ಅವರು ಅಲಭ್ಯರಾಗಿರುತ್ತಾರೆ. ನಮ್ಮ ವಿಕೆಟ್ ಕೀಪರ್ ಮತ್ತು ಬ್ಯಾಟರ್ ರಿಷಬ್ ಪಂತ್ ಎಡಗಾಲಿನ ಗಾಯಕ್ಕೆ ಒಳಗಾಗಿದ್ದಾರೆ. ವೈದ್ಯರು ಅವರ ಆರೋಗ್ಯ ಮತ್ತು ಫಿಟ್ನೆಸ್ ಮೇಲೆ ಗಮನ ಹರಿಸಿದ್ದಾರೆ. ಶೀಘ್ರದಲ್ಲೇ ಅವರು ಮೈದಾನಕ್ಕೆ ಇಳಿಯಲಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.