
ನವದೆಹಲಿ (ಅಕ್ಟೋಬ್ 12): ಕಿಂಗ್ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ (Virat Kohli and Anushka Sharma) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಸ್ಟಾರ್ ಜೋಡಿ ಇಂಗ್ಲೆಂಡ್‌ನಲ್ಲಿ ಶಾಶ್ವತವಾಗಿ ನೆಲೆಸಲು ಪ್ಲಾನ್ ಮಾಡಿದ್ದಾರೆ ಎಂದು ಫ್ಯಾನ್ಸ್ ಅಂದುಕೊಳ್ತಿದ್ದಾರೆ. ಆದರೆ.. ಅವರ ಹೂಡಿಕೆ ಮತ್ತು ರಿಯಲ್ ಎಸ್ಟೇಟ್, ಬ್ಯುಸಿನೆಸ್ ಸೇರಿದಂತೆ ಎಲ್ಲವೂ ಭಾರತದಲ್ಲಿಯೇ!
ಲೇಟೆಸ್ಟ್ ವಿಚಾರ ಏನೆಂದರೆ ಕೊಹ್ಲಿ ದಂಪತಿ ಮುಂಬೈನ ಅಪಾರ್ಟ್‌ಮೆಂಟ್ ಒಂದರಲ್ಲಿ ಒಟ್ಟು ಮೂರು ಐಷಾರಾಮಿ ಫ್ಲಾಟ್‌ಗಳನ್ನು ಖರೀದಿಸಿದೆ. ಎರಡು ಕೊಹ್ಲಿ ಮತ್ತು ಅನುಷ್ಕಾ ದಂಪತಿ ಖರೀದಿಸಿದ್ರೆ.. ಇನ್ನೊಂದನ್ನು ಅನುಷ್ಕಾ ಶರ್ಮಾ ಅವರ ಪೋಷಕರು ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಮುಂಬೈನ ಐಷಾರಾಮಿ ವರ್ಸೋವಾ ಪ್ರದೇಶದಲ್ಲಿ ಮೂರು ಮನೆಗಳನ್ನ ಖರೀದಿ ಮಾಡಿದ್ದಾರೆ. ವರದಿಗಳ ಪ್ರಕಾರ ಮೂರೂ ಮನೆಗಳನ್ನ ಒಟ್ಟು 44.1 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರೆ. ರಿಯಲ್ ಎಸ್ಟೇಟ್ ವಿಶ್ಲೇಷಣಾ ಸಂಸ್ಥೆ ಸಿಆರ್‍ಇ ಮ್ಯಾಟ್ರಿಕ್ಸ್ ಗೆ ಲಭ್ಯವಾಗಿರುವ ನೋಂದಣಿ ದಾಖಲೆಗಳು ವರ್ಸೋವಾದ ಯಾರಿ ರಸ್ತೆಯಲ್ಲಿರುವ ಗೋದ್ರೇಜ್ ಸ್ಕೈಶೋರ್ ಕಟ್ಟದಲ್ಲಿದೆ.
ಆಸ್ತಿ ದಾಖಲೆಯಲ್ಲಿ ನೋಂದಣಿ ಆಗಿರುವ ವಿವರಗಳ ಪ್ರಕಾರ.. ಅನುಷ್ಕಾ ಶರ್ಮಾಗೆ ಸೇರಿದ ಮನೆಯು 2153 ಚದರ್ ಅಡಿ ವಿಸ್ತೀರರ್ಣ ಹೊಂದಿದೆ. ಅದರ ಮೌಲ್ಯ 14.89 ಕೋಟಿ ಮೌಲ್ಯ ಎಂದು ಹೇಳಲಾಗಿದೆ. ಈ ಐಷಾರಾಮಿ ಮನೆಗಾಗಿ ಅವರು 74.47 ಲಕ್ಷ ರೂಪಾಯಿ ಮೌಲ್ಯದ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿದ್ದಾರೆ. ಇದೇ ಬಿಲ್ಡಿಂಗ್‌ನಲ್ಲಿ ಅನುಷ್ಕಾ ಶರ್ಮಾ ಪೋಷಕರಾದ ಆಶಿಮಾ ಮತ್ತು ಅಜಯ್ ಕುಮಾರ್ ಶರ್ಮಾ 10.91 ಕೋಟಿ ರೂಪಾಯಿ ನೀಡಿ ಮನೆ ಖರೀದಿಸಿದ್ದಾರೆ. ಇವರು 65.44 ಲಕ್ಷ ರೂಪಾಯಿ ಮೌಲ್ಯದ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿದ್ದಾರೆ. ಅಂದ್ಹಾಗೆ ಈ ಇವರೆಲ್ಲರೂ ಕಳೆದ ಜುಲೈನಲ್ಲೇ ಮನೆಯನ್ನು ನೋಂದಾಯಿಸಿಕೊಂಡಿದ್ದಾರೆ.
ಕೆಲವು ವರದಿಗಳ ಪ್ರಕಾರ.. ಅನುಷ್ಕಾ ಶರ್ಮಾ, ಕೊಹ್ಲಿ ಜೊತೆ ಸೇರಿ ಮೂರನೇ ಫ್ಲಾಟ್ ಒಂದನ್ನ ಇದಾಗಿದೆ. ಅದರ ಮೌಲ್ಯ 18.29 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಇದು 2644 ಚದರ್ ಅಡಿ ವಿಸ್ತೀರ್ಣ ಹೊದಿದೆ. ಈ ಮೂರೂ ಫ್ಲಾಟ್‌ಗಳು ಗೋದ್ರೇಜ್ ಸ್ಕೈಶೋರ್‍ನ ಟವರ್-ಎನ 24ನೇ ಮಹಡಿಯಲ್ಲಿದೆ. ಇನ್ನೂ ಈ ಯೋಜನೆ ನಿರ್ಮಾಣ ಹಂತದಲ್ಲಿದೆ. ನೋಂದಣಿ ಪ್ರಕಾರ.. ಜೂನ್ 30, 2031 ವೇಳೆಗೆ ದಂಪತಿಯ ಕೈಗೆ ಸೇರಲಿದೆ.
ಅಂದ್ಹಾಗೆ ವಿರುಷ್ಕಾ ದಂಪತಿ ಹೂಡಿಕೆ ಮಾಡುವ ವಿಚಾರದಲ್ಲಿ ಎತ್ತಿದ ಕೈ. ಇದೇ ಮೊದಲ ಬಾರಿಗೆ ಅವರು ಹೂಡಿಕೆ ಮಾಡುತ್ತಿಲ್ಲ. ದೇಶದ ಹಲವು ಭಾಗಗಳಲ್ಲಿ ಈ ಜೋಡಿ ಹೂಡಿಕೆ ಮಾಡಿದೆ. ವರದಿಗಳ ಪ್ರಕಾರ 2026ರಲ್ಲಿ ಇದೇ ಫ್ಲಾಟ್‌ನ ಪಕ್ಕದಲ್ಲಿ ಎರಡು ಫ್ಲಾಟ್‌ಗಳನ್ನ ಖರೀದಿಸಿದೆ. ಇದರ ಬಲೆ 37 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಇನ್ನು ಅಲಿಬಾಗ್‌ನಲ್ಲೂ ವಿರುಷ್ಕಾ ದಂಪತಿ ಆಸ್ತಿಯನ್ನ ಹೊದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.