ಐಪಿಎಲ್ ಸೀಸನ್ 17ರ ಸಮರ ಕೊನೆಯ ಹಂತಕ್ಕೆ ತಲುಪಿದೆ. ಐಪಿಎಲ್ ಮುಗಿದ ಒಂದೇ ವಾರ ಅಂತರದಲ್ಲಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಏಕದಿನ ವಿಶ್ವಕಪ್ ಕೈಚೆಲ್ಲಿದ್ದ ಟೀಂ ಇಂಡಿಯಾ, ಟಿ20 ವಿಶ್ವಕಪ್ ಎತ್ತಹಿಡಿಯಬೇಕು ಪಣ ತೊಟ್ಟಿದೆ ಆದ್ರೆ, ರೋಹಿತ್ ಪಡೆ ವರ್ಲ್ಡ್‌ಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ..? ಚಾಂಪಿಯನ್ಸ್ ಪಟ್ಟ ಅಲಂಕರಿಸುತ್ತಾ..? ಅನ್ನೋ ಪ್ರಶ್ನೆ ಮೂಡಿದೆ. ಇದಕ್ಕೆ ಪ್ರಮುಖ ಕಾರಣ ಐಪಿಎಲ್.
ಬೆಂಗಳೂರು(ಮೇ.09) ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್. ಇದರಿಂದ ಹಲವು ಟ್ಯಾಲೆಂಟೆಡ್ ಕ್ರಿಕೆಟರ್ಸ್ IPLನಿಂದ ಬೆಳಕಿಗೆ ಬಂದಿದ್ದಾರೆ. ಆದ್ರೆ, ಇದೇ ಐಪಿಎಲ್ ಟೂರ್ನಿ ಟೀಂ ಇಂಡಿಯಾದ ಐಸಿಸಿ ಕಪ್ ಗೆಲುವಿಗೆ ಅಡ್ಡಿಯಾಗ್ತಿದೆ. ಈ ಬಾರಿಯು ಅದೇ ರಿಪೀಟ್ ಆಗಲಿದೆ ಅನ್ನೋ ಮಾತುಗಳು ಕೇಳಿಬರ್ತಿವೆ. ಅದ್ಹೇಗೆ ಅಂತ ಹೇಳ್ತೀವಿ, ಈ ಸ್ಟೋರಿ ನೋಡಿ....!
ಕೆಲಸಕ್ಕೆ ಬಾರದ ಮ್ಯಾಚ್‌ಗಳಿಂದಲೂ ರೆಸ್ಟ್ ಸಿಗ್ತಿಲ್ಲ..?
ಐಪಿಎಲ್ ಸೀಸನ್ 17ರ ಸಮರ ಕೊನೆಯ ಹಂತಕ್ಕೆ ತಲುಪಿದೆ. ಐಪಿಎಲ್ ಮುಗಿದ ಒಂದೇ ವಾರ ಅಂತರದಲ್ಲಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಏಕದಿನ ವಿಶ್ವಕಪ್ ಕೈಚೆಲ್ಲಿದ್ದ ಟೀಂ ಇಂಡಿಯಾ, ಟಿ20 ವಿಶ್ವಕಪ್ ಎತ್ತಹಿಡಿಯಬೇಕು ಪಣ ತೊಟ್ಟಿದೆ ಆದ್ರೆ, ರೋಹಿತ್ ಪಡೆ ವರ್ಲ್ಡ್‌ಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ..? ಚಾಂಪಿಯನ್ಸ್ ಪಟ್ಟ ಅಲಂಕರಿಸುತ್ತಾ..? ಅನ್ನೋ ಪ್ರಶ್ನೆ ಮೂಡಿದೆ. ಇದಕ್ಕೆ ಪ್ರಮುಖ ಕಾರಣ ಐಪಿಎಲ್.
ಲಖನೌ ಹೀನಾಯವಾಗಿ ಸೋಲುತ್ತಿದ್ದಂತೆಯೇ ಕೆ ಎಲ್ ರಾಹುಲ್ ಮೇಲೆ ಸಂಜೀವ್ ಗೋಯೆಂಕಾ ಸಿಡಿಮಿಡಿ.! ವಿಡಿಯೋ ವೈರಲ್
ಯೆಸ್, ಟೀಂ ಇಂಡಿಯಾ ಆಟಗಾರರು ಕಳೆದ ಒಂದು ತಿಂಗಳಿನಿಂದ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಈಗ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಚಿಂತೆಗೆ ಕಾರಣವಾಗಿದೆ. ಯಾಕಂದ್ರೆ, ಯಾವುದೇ ಸಿದ್ಧತೆ, ರೆಸ್ಟ್ ಇಲ್ಲದೇ ಟೀಂ ಇಂಡಿಯಾ ಆಟಗಾರರು ಮೆಗಾ ಟೂರ್ನಿಗೆ ರೆಡಿಯಾಬೇಕಿದೆ. ಫ್ರಾಂಚೈಸಿಗಳು ಆಟಗಾರರಿಗೆ ವಿಶ್ರಾಂತಿ ನೀಡದೇ, ಡೆಡ್ ರಬ್ಬರ್ ಮ್ಯಾಚ್ಗಳಲ್ಲಿ ಆಡಿಸ್ತಿದ್ದಾರೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯೇ ಬೆಸ್ಟ್ ಎಕ್ಸಾಂಪಲ್..!
ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮಕಾಡೆ ಮಲಗಿದೆ. ಆಡಿರೋ 12 ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಕಂಡಿದೆ. ಪಾಯಿಂಟ್ ಟೇಬಲ್ನಲ್ಲಿ ಕೊನೆಯ ಸ್ಥಾನ ಅಲಂಕರಿಸಿದೆ. ಪ್ಲೇ ಆಫ್ ರೇಸ್ನಿಂದ ಔಟಾಗಿದೆ. ಇಷ್ಟಾದ್ರೂ ವಿಶ್ವಕಪ್‌ಗೆ ಆಯ್ಕೆಯಾದ ಆಟಗಾರರಿಗೆ ಫ್ರಾಂಚೈಸಿ ಮತ್ತು ಟೀಂ ಮ್ಯಾನೇಜ್ಮೆಂಟ್ ರೆಸ್ಟ್ ನೀಡ್ತಿಲ್ಲ.
ಬುಮ್ರಾ ಇಂಜುರಿಗೊಳಗಾದ್ರೆ ಯಾರು ಹೊಣೆ..?
ಜಸ್ಪ್ರೀತ್ ಬುಮ್ರಾ, ಟಿ20 ವರ್ಲ್ಡ್‌ಕಪ್‌ನಲ್ಲಿ ಭಾರತ ತಂಡದ ಟ್ರಂಪ್ ಕಾರ್ಡ್ ಬೌಲರ್. 2022ರ T20 ವಿಶ್ವಕಪ್‌ನಲ್ಲಿ ಬುಮ್ರಾ ಅಲಭ್ಯತೆ, ಟೀಂ ಇಂಡಿಯಾಗೆ ದೊಡ್ಡ ಪೆಟ್ಟು ನೀಡಿದ್ದನ್ನ ಮರೆಯುವಂತಿಲ್ಲ. ಹೀಗಾಗಿ ಈ ಬಾರಿ ಬುಮ್ರಾ ವಿಷ್ಯದಲ್ಲಿ ಹೆಚ್ಚು ಎಚ್ಚರಿಕೆವಹಿಸಬೇಕಿದೆ. ಆದ್ರೆ, ಮುಂಬೈ ಪ್ಲೇ ಆಫ್ ಚಾನ್ಸ್ ಇಲ್ಲದೇ ಇದ್ರೂ, ಅವರನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಮುಂದುವರಿಸಲಾಗ್ತಿದೆ.
ಆರ್‌ಸಿಬಿ vs ಪಂಜಾಬ್ ಕಿಂಗ್ಸ್: ಪ್ಲೇ ಆಫ್ ರೇಸ್ ಗೆಲ್ಲೋರು ಯಾರು?
ಸೂರ್ಯಕುಮಾರ್ ಯಾದವ್ ಕೂಡ, ಇಂಜುರಿಯಿಂದಾಗಿ ಕೆಲ ಕಾಲ ತಂಡದಿಂದ ದೂರ ಉಳಿದಿದ್ರು. ಐಪಿಎಲ್‌ಗೂ ಲೇಟ್ ಆಗಿ ಎಂಟ್ರಿಕೊಟ್ರು. ಹಾರ್ದಿಕ್ ಪಾಂಡ್ಯ ಕಥೆಯು ಸೇಮ್. ಈ ಇಬ್ಬರೂ ಕಮ್ಬ್ಯಾಕ್ ನಂತರ ನಿರಂತರವಾಗಿ ಕ್ರಿಕೆಟ್ ಆಡ್ತಿದ್ದಾರೆ. ಒಂದು ವೇಳೆ ಇವರಿಬ್ಬರೂ ಮತ್ತೆ ಇಂಜುರಿ ಗೊಳಗಾದ್ರೆ, ವಿಶ್ವಕಪ್‌ಗೂ ಮುನ್ನ ಚೇತರಿಸಿಕೊಳ್ಳುವುದು ಕಷ್ಟವಾಗಲಿದೆ.
ಔಟ್ ಆಫ್ ಫಾರ್ಮ್‌ನಲ್ಲಿರೋ ರೋಹಿತ್ ಬೇಕು ರೆಸ್ಟ್..!
ಟಿ20 ವಿಶ್ವಕಪ್ ದೃಷ್ಟಿಯಿಂದ ರೋಹಿತ್ ಶರ್ಮಾರ ಫಿಟ್ನೆಸ್ ತುಂಬಾನೇ ಮುಖ್ಯ. ಕಳೆದ ಆರೇಳು ತಿಂಗಳಿನಿಂದ ರೋಹಿತ್ ನಿರಂತರವಾಗಿ ಕ್ರಿಕೆಟ್ ಆಡ್ತಿದ್ದಾರೆ. ಏಷ್ಯಾಕಪ್, ಏಕದಿನ ವಿಶ್ವಕಪ್, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ, ಅಪ್ಘಾನಿಸ್ತಾನ ವಿರುದ್ಧದ T20 ಸರಣಿಗಳಲ್ಲಿ ರೋಹಿತ್ ಆಡಿದ್ರು. ಇದ್ರಿಂದ ಮೂರು ವಾರಗಳ ಟೈಮ್ ರೋಹಿತ್ ವರ್ಕ್ಲೋಡ್ ಕಡಿಮೆ ಮಾಡಲಿದೆ. ಅಲ್ಲದೇ, ರಿಲ್ಯಾಕ್ಸ್ ಆಗಿ ಹೊಸ ಫ್ರೆಶ್ ಮೈಂಡ್ಸೆಟ್ನೊಂದಿಗೆ ವಿಶ್ವಕಪ್ ಆಡಲು ನೆರವಾಗಲಿದೆ. ಆದ್ರೆ, ರೋಹಿತ್ಗೆ ರೆಸ್ಟ್ ಸಿಗ್ತಿಲ್ಲ.
ಒಟ್ಟಿನಲ್ಲಿ ಫ್ರಾಂಚೈಸಿಗಳು ತಮ್ಮ ಪ್ರತಿಷ್ಠೆ, ಸ್ವಾರ್ಥಕ್ಕಾಗಿ ಭಾರತೀಯ ಆಟಗಾರರನ್ನ ಬಳಸಿಕೊಳ್ತಿದ್ದಾರೆ. ಇದನ್ನೆಲ್ಲಾ ನೋಡುತ್ತಾ ಬಿಸಿಸಿಐ ಸುಮ್ಮನೆ ಕುಳಿತಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್