ಹೌ ಈಸ್‌ ದ 'JOSH' ಚಿನ್ನಸ್ವಾಮಿಯಲ್ಲಿ ಗೆಲುವಿನ ಖಾತೆ ತೆರೆದ ಆರ್‌ಸಿಬಿ!

Published : Apr 24, 2025, 11:30 PM ISTUpdated : Apr 24, 2025, 11:32 PM IST
ಹೌ ಈಸ್‌ ದ 'JOSH' ಚಿನ್ನಸ್ವಾಮಿಯಲ್ಲಿ ಗೆಲುವಿನ ಖಾತೆ ತೆರೆದ ಆರ್‌ಸಿಬಿ!

ಸಾರಾಂಶ

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಗೆ ಮೊದಲ ಗೆಲುವು. ರಾಜಸ್ಥಾನದ 195 ರನ್‌ಗಳಿಗೆ ಪ್ರತಿಯಾಗಿ 206 ರನ್‌ ಗಳಿಸಿ 11 ರನ್‌ಗಳ ಜಯ. ಕೊಹ್ಲಿ (70), ಪಡಿಕ್ಕಲ್‌ (52) ಅರ್ಧಶತಕ. ಹ್ಯಾಸಲ್‌ವುಡ್‌ ಕೊನೆಯ ಓವರ್‌ನಲ್ಲಿ 2 ವಿಕೆಟ್‌ ಪಡೆದು ಆರ್‌ಸಿಬಿ ಗೆಲುವಿನ ರೂವಾರಿ.

ಬೆಂಗಳೂರು (ಏ.24): ರಾಜಸ್ಥಾನ ತಂಡದ ಅಬ್ಬರವನ್ನು 19ನೇ ಓವರ್‌ನಲ್ಲಿ ನಿಯಂತ್ರಿಸು ಯಶಸ್ವಿಯಾದ ಆರ್‌ಸಿಬಿ ತಂಡ ಹಾಲಿ ಐಪಿಎಲ್‌ನಲ್ಲಿ ತನ್ನ ತವರು ಮೈದಾನವಾದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಗೆಲುವು ಕಂಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ 11 ರನ್‌ಗಳಿಂದ ರಾಜಸ್ಥಾನ ತಂಡವನ್ನು ಸೋಲಿಸಿತು. ಆ ಮೂಲಕ ಲೀಗ್‌ನಲ್ಲಿ ಆರ್‌ಸಿಬಿ ತಂಡಕ್ಕೆ 6ನೇ ಗೆಲುವು ಕಂಡಂತಾಗಿದೆ.

ರಾಜಸ್ಥಾನಕ್ಕೆ ಕೊನೇ 12 ಎಸೆತಗಳಲ್ಲಿ 18 ರನ್‌ ಬೇಕಿದ್ದವು. ಆದರೆ, 19ನೇ ಓವರ್‌ ಎಸೆಯಲು ಬಂದ ಜೋಸ್‌ ಹ್ಯಾಸಲ್‌ವುಡ್‌, ಉತ್ತಮವಾಗಿ ಆಡುತ್ತಿದ್ದ ಧ್ರುವ್‌ ಜುರೇಲ್‌(47ರನ್‌, 34 ಎಸೆತ, 3 ಬೌಂಡರಿ, 3 ಸಿಕ್ಸರ್‌) ಹಾಗೂ ಜೋಫ್ರಾ ಆರ್ಚರ್‌ರನ್ನು ಸತತ ಎರಡು ಎಸೆತಗಳಲ್ಲಿ ಔಟ್‌ ಮಾಡಿದ್ದಲ್ಲದೆ, ಕೇವಲ 1 ರನ್‌ ನೀಡಿ ತಂಡದ ಗೆಲುವಿನ ಸಾಧ್ಯತೆಯನ್ನು ಅಧಿಕವಾಗಿಸಿದರು. ಇದರಿಂದಾಗಿ ಆರ್‌ಸಿಬಿ ನೀಡಿದ 206 ರನ್‌ಗಳ ಟಾರ್ಗೆಟ್‌ಗೆ ಪ್ರತಿಯಾಗಿ ರಾಜಸ್ಥಾನ 9 ವಿಕೆಟ್‌ಗೆ 194 ರನ್‌ ಬಾರಿಸಿ ಸೋಲು ಕಂಡಿತು.

ಚೇಸಿಂಗ್‌ ಆರಂಭಿಸಿದ ರಾಜಸ್ಥಾನ ತಂಡಕ್ಕೆ ಯಶಸ್ವಿ ಜೈಸ್ವಾಲ್‌ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿದರು. ಇದರಿಂದಾಗಿ ಮೊದಲ ಓವರ್‌ನಲ್ಲಿ ರಾಜಸ್ಥಾನ 8 ರನ್‌ ಬಾರಿಸಿತ್ತು. ಯಶಸ್ವಿ ಜೊತೆಗೆ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಬಂದಿದ್ದ ವೈಭವ್‌ ಸೂರ್ಯವಂಶಿ 12 ಎಸೆತಗಳಲ್ಲಿ 16 ರನ್‌ ಬಾರಿಸಿದರೆ, ಯಶಸ್ವಿ ಜೈಸ್ವಾಲ್‌ 19 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ ಇದ್ದ 49 ರನ್‌ ಚಚ್ಚಿದರು. ಇದರಿಂದಾಗಿ ಕೇವಲ 5ನೇ ಓವರ್‌ನಲ್ಲೇ ರಾಜಸ್ಥಾನ 50 ರನ್‌ ಗಡಿ ದಾಟಿದ್ದರೆ, ಮರು ಓವರ್‌ ಎಸೆತದಲ್ಲೇ ಸೂರ್ಯವಂಶಿ ವಿಕೆಟ್‌ ಉರುಳಿಸಿ ಭುವನೇಶ್ವರ್‌ ಆರ್‌ಸಿಬಿಗೆ ಮೇಲುಗೈ ನೀಡಿದರು. ಮರು ಓವರ್‌ನಲ್ಲಿ ಯಶಸ್ವಿ ಕೂಡ ಔಟಾದಾಗ, ರಾಜಸ್ಥಾನ 6 ಓವರ್‌ಗಳಲ್ಲಿ 2 ವಿಕೆಟ್‌ಗೆ 72 ರನ್‌ ಬಾರಿಸಿತ್ತು.

ಆರಂಭಿಕರ ಆಟವನ್ನು ಮಧ್ಯಮ ಕ್ರಮಾಂಕದ ನಿತೇಶ್‌ ರಾಣಾ (28 ರನ್‌ 22 ಎಸೆತ, 3 ಬೌಂಡರಿ, 1 ಸಿಕ್ಸರ್‌) ಹಾಗೂ ರಿಯಾನ್‌ ಪರಾಗ್‌(22 ರನ್‌, 10 ಎಸೆತ, 2 ಬೌಂಡರಿ, 2 ಸಿಕ್ಸರ್‌) ಕೂಡ ಮುಂದುವರಿಸಿದ್ದರಿಂದ ರಾಜಸ್ಥಾನ 9ನೇ ಓವರ್‌ನಲ್ಲಿ 100 ರನ್‌ ಗಡಿ ದಟಿತ್ತು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಟಾಸ್‌ ಸೋಲು ಕಂಡು ಮೊದಲು ಬ್ಯಾಟಿಂಗ್‌ಗೆ ಇಳಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 5 ವಿಕೆಟ್‌ ನಷ್ಟಕ್ಕೆ 205 ರನ್‌ ಬಾರಿಸಿತು. ಅದರಲ್ಲೂ ಜೋಫ್ರಾ ಆರ್ಚರ್‌ಎಸೆದ ಕೊನೆಯ ಓವರ್‌ನಲ್ಲಿ ಆರ್‌ಸಿಬಿ ಕೇವಲ 8 ನರ್‌ ಬಾರಿಸಲು ಶಕ್ತವಾಗಿದ್ದು ತಂಡದ ಇನ್ನಷ್ಟು ದೊಡ್ಡ ಮೊತ್ತದ ಆಸೆಗೆ ತಣ್ಣೀರೆರಚಿತು. ಟಿಮ್‌ ಡೇವಿಡ್‌ 15 ಎಸೆತಗಳಲ್ಲಿ 23 ರನ್ ಬಾರಿಸಿದರೆ, ಜಿತೇಶ್‌ ಶರ್ಮ ಎದುರಿಸಿದ 10 ಎಸೆತಗಳಲ್ಲಿ 20 ರನ್‌ ಬಾರಿಸಿದರು.

ಇದು ರಾಜಸ್ಥಾನ ರಾಯಲ್ಸ್‌ ವಿರುದ್ಧ ಆರ್‌ಸಿಬಿ ತಂಡದ ಗರಿಷ್ಠ ಸ್ಕೋರ್‌ ಎನಿಸಿದೆ. ಇದಕ್ಕೂ ಮುನ್ನ 2015ರಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿಯೇ 7 ವಿಕೆಟ್‌ ನಷ್ಟಕ್ಕೆ 200 ರನ್‌ ಬಾರಿಸಿದ್ದು ತಂಡದ ಗರಿಷ್ಠ ಮೊತ್ತವಾಗಿತ್ತು.

ಆರ್‌ಸಿಬಿ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ಮೊದಲ ಓವರ್‌ನಲ್ಲಿಯೇ ಫಿಲ್‌ ಸಾಲ್ಟ್‌ ಹಾಗೂ ವಿರಾಟ್‌ ಕೊಹ್ಲಿ ಜೋಡಿ 11 ರನ್‌ ಪೇರಿಸಿದರೆ, 2ನೇ ಓವರ್‌ನಲ್ಲಿ ಫಿಲ್‌ ಸಾಲ್ಟ್‌ಗೆ ಜೀವದಾನ ಸಿಕ್ಕಿತ್ತು. ಫಜ್ಲಕ್‌ ಫಾರೂಖಿ ಎಸೆದ ಫುಲ್‌ಟಾಸ್‌ ಎಸೆತವನ್ನು ಆಡುವಲ್ಲಿ ಸಾಲ್ಟ್‌ ಎಡವಿದ್ದರು. ಈ ವೇಳೆ ಮಿಡ್‌ಆಫ್‌ನತ್ತ ಹಾರಿದ್ದ ಚೆಂಡನ್ನು ಕ್ಯಾಚ್‌ ಪಡೆದುಕೊಳ್ಳುವಲ್ಲಿ ರಿಯಾನ್‌ ಪರಾಗ್‌ ಎಡವಿದರು.ಐದನೇ ಓವರ್‌ನಲ್ಲಿ ಆರ್‌ಸಿಬಿ ತಂಡ ಅರ್ಧಶತಕದ ಗಡಿ ಮುಟ್ಟಿಸಿತ್ತು. ಪವರ್‌ಪ್ಲೇಯ 6 ಓವರ್‌ಗಳಲ್ಲಿ ಆರ್‌ಸಿಬಿ ವಿಕೆಟ್‌ ನಷ್ಟವಿಲ್ಲದೆ 59 ರನ್‌ ಬಾರಿಸಿತ್ತು.7ನೇ ಓವರ್‌ ಎಸೆಯಲು ಬಂದ ವಾನಿಂದು ಹಸರಂಗ, ನಾಲ್ಕನೇ ಎಸೆತದಲ್ಲಿ 26 ರ್‌ ಬಾರಿಸಿದ್ದ ಫಿಲ್‌ಸಾಲ್ಟ್‌ ವಿಕೆಟ್‌ ಉರುಳಿಸಿದರು.

ಈ ಹಂತದಲ್ಲಿ ವಿರಾಟ್ ಕೊಹ್ಲಿಗೆ ಜೊತೆಯಾದ ದೇವದತ್‌ ಪಡಿಕ್ಕಲ್‌ ಉತ್ತಮ ಜೊತೆಯಾಟವಾಡಿದರು. ಕೊಹ್ಲಿ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕೊಹ್ಲಿಗೆ ಜೊತೆಯಾಗಿದ್ದ ದೇವದತ್ ಪಡಿಕ್ಕಲ್‌, ತುಷಾರ್‌ ದೇಶಪಾಂಡೆ ಎಸೆತವನ್ನು ಸಿಕ್ಸರ್‌ಗಟ್ಟಿ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.

70 ರನ್‌ ಬಾರಿಸಿದ ಕೊಹ್ಲಿ ಇದೇ ಓವರ್‌ನಲ್ಲಿ ಜೋಫ್ರಾ ಆರ್ಚರ್‌ಗೆ ವಿಕೆಟ್‌ ನೀಡಿದರೆ, ಮರು ಓವರ್‌ನಲ್ಲಿಯೇ ದೇವದತ್‌ ಪಡಿಕ್ಕಲ್‌, ಸಂದೀಪ್‌ ಶರ್ಮಗೆ ವಿಕೆಟ್‌ ನೀಡಿದರು. ಇದೇ ವರ್‌ನಲ್ಲಿ ನಾಯಕ ರಜತ್‌ ಪಾಟಿದಾರ್‌ ಅವರ ವಿಕೆಟ್‌ ಕಳೆದುಕೊಂಡಿದ್ದೂ ಆರ್‌ಸಿಬಿಯ ಸ್ಲಾಗ್‌ ಓವರ್‌ ಅಬ್ಬರಕ್ಕೆ ಹಿನ್ನಡೆ ನೀಡಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್
ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್