ಆರ್‌ಸಿಬಿ ರಾಜಸ್ಥಾನ ರಾಯಲ್ಸ್ ಟ್ರೇಡ್ ಡೀಲ್, ಬೆಂಗಳೂರು ತಂಡ ಸೇರಿಕೊಳ್ತಾರ ಸ್ಯಾಮ್ ಕುರನ್?

Published : Oct 02, 2026, 07:16 PM IST
Sam Curran IPL trade

ಸಾರಾಂಶ

ರಾಜಸ್ಥಾನ ರಾಯಲ್ಸ್ ಜೊತೆ ಆರ್‌ಸಿಬಿ ಟ್ರೇಡ್ ಡೀಲ್ ಮಾತುಕತೆ ಅಂತಿಮ ಹಂತ ತಲುಪಿದೆ. ಸ್ಯಾಮ್ ಕುರನ್ ಆರ್‌ಸಿಬಿ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಹಾಗಾದರೆ ಆರ್‌ಸಿಹಿಯಿಂದ ರಾಜಸ್ಥಾನ ತಂಡ ಸೇರಿಕೊಳ್ಳುವ ಕ್ರಿಕೆಟಿಗ ಯಾರು?

ಬೆಂಗಳೂರು (ಅ.02) ಹ್ಯಾಟ್ರಿಕ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತಷ್ಟು ಬಲಪಡಿಸಲು ನಿರ್ಧರಿಸಿದೆ. ಮುಂಬರುವ ಐಪಿಎಲ್ ಟೂರ್ನಿಗೆ ತಯಾರಿ ಆರಂಭಗೊಂಡಿದೆ. ಇದೀಗ ಟ್ರೇಡ್ ಡೀಲ್ ಮಾತುಕತೆಗಳು ನಡೆಯುತ್ತಿದೆ. ಆಟಗಾರರ ರಿಟೇನ್ ಹಾಗೂ ರಿಲೀಸ್ ದಿನಾಂಕ ಸಮೀಪಿಸುತ್ತಿದೆ. ಹೀಗಾಗಿ ಆರ್‌ಸಿಬಿ ಮಾತುಕತೆ ಮೂಲಕ ಟ್ರೇಡಿಂಗ್ ಡೀಲ್ ಕುದುರಿಸುತ್ತಿದೆ. ಮೂಲಗಳ ಪ್ರಕಾರ ಆರ್‌ಸಿಬಿ ತಂಡ ರಾಜಸ್ಥಾನ ರಾಯಲ್ಸ್ ಜೊತೆ ಮಾತುಕತೆ ನಡೆಸಿದೆ. ರಾಜಸ್ಥಾನ ರಾಯಲ್ಸ್ ತಂಡದ ಸ್ಯಾಮ್ ಕುರನ್ ಆರ್‌ಸಿಬಿ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.

ಆರ್‌ಸಿಬಿ ತಂಡದಿಂದ ರಾಜಸ್ಥಾನ ಸೇರಿಕೊಳ್ಳುವ ಆಟಗಾರ ಯಾರು?

ಆರ್‌ಸಿಬಿ ಟ್ರೇಡ್ ಡೀಲ್ ಮಾತುಕತೆ ಅಂತಿಮಗೊಂಡರೆ ಸ್ಯಾಮ್ ಕುರನ್ ಆರ್‌ಸಿಬಿ ಸೇರಲಿದ್ದಾರೆ. ಇದಕ್ಕೆ ಬದಲಾಗಿ ಆರ್‌ಸಿಬಿ ತಂಡದ ರೊಮಾರಿಯೋ ಶೆಫರ್ಡ್ ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಳ್ಳಲಿದ್ದಾರೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ರೋಮಾರಿಯೋ ಶೆಫರ್ಡ್ ಹೆಚ್ಚಿನ ಅವಕಾಶವೂ ಸಿಕ್ಕಿಲ್ಲ, ಸಿಕ್ಕ ಅವಕಾಶದಲ್ಲಿ ಮಿಂಚಲು ಸಾಧ್ಯವಾಗಿಲ್ಲ. ಇದೀಗ ರೋಮಾರಿಯೋ ಶೆಫರ್ಡ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನೀಡಿ, ಸ್ಯಾಮ್ ಕುರನ್ ತಂಡಕ್ಕೆ ಸೇರಿಸಿಕೊಳ್ಳಲು ಆರ್‌ಸಿಬಿ ಮಾತುಕತೆ ನಡೆಸುತ್ತಿದೆ. ಸದ್ಯ ಈ ಡೀಲ್ ಮಾತುಕತೆ ಹಂತದಲ್ಲಿದೆ. ಅಂತಿಮಗೊಂಡಿಲ್ಲ. ಇಷ್ಟೇ ಅಲ್ಲ ಈ ಕುರಿತು ಆರ್‌ಸಿಬಿ ಅಥವ ರಾಜಸ್ಥಾನ ರಾಯಲ್ಸ್ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಕಳೆದ ಸೀಸನ್‌ನಿಂದ ಹೊರಗುಳಿದಿದ್ದ ಸ್ಯಾಮ್ ಕುರನ್

ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದ ಸ್ಯಾಮ್ ಕುರನ್ ಕಳೆದ ಆವೃತ್ತಿಯಲ್ಲಿ ಐಪಿಎಲ್‌ನಿಂದ ದೂರ ಉಳಿದಿದ್ದರು. ಇಂಜುರಿಯಿಂದ ಚೇತರಿಸಿಕೊಳ್ಳುತ್ತಿದ್ದ ಕಾರಣ 2026ರ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಇತ್ತ ಆರ್‌ಸಿಬಿ ಬಲಿಷ್ಠ ಫಿನೀಶರ್ ಹುಡುಕಾಡುತ್ತಿದೆ. ರೊಮಾರಿಯೋ ಶೆಫರ್ಡ್ 2026ರಲ್ಲಿ ಸಂಪೂರ್ಣ ವಿಫಲಗೊಂಡಿದ್ದರು. ಲೋವರ್ ಆರ್ಡರ್ ಬ್ಯಾಟಿಂಗ್ ಮೂಲಕ ತಂಡಕ್ಕೆ ಫಿನೀಶ್ ಟಚ್ ನೀಡಲು ಸ್ಯಾಮ್ ಕುರನ್ ಹೆಚ್ಚು ಸೂಕ್ತ ಅನ್ನೋದು ಆರ್‌ಸಿಬಿ ಲೆಕ್ಕಾಚಾರ.

ಸ್ಯಾಮ್ ಕುರನ್‌ಗೆ ಬೇಡಿಕೆ

2026ರ ಐಪಿಎಲ್ ಟೂರ್ನಿಗಾಗಿ ರಾಜಸ್ಥಾನ ರಾಯಲ್ಸ್ ದುಬಾರಿ ಟ್ರೇಡಿಂಗ್ ನಡೆಸಿ ಸ್ಯಾಮ್ ಕುರನ್ ತಂಡಕ್ಕೆ ಸೇರಿಸಿಕೊಂಡಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಸ್ಯಾಮ್ ಕುರನ್‌ಗಾಗಿ ರಾಜಸ್ಥಾನ ರಾಯಲ್ಸ್ ಭಾರಿ ಕಸರತ್ತು ನಡೆಸಿತ್ತು. ತಂಡದ ಪ್ರಮುಖ ಆಟಗಾರ, ನಾಯಕನಾಗಿದ್ದ ಸಂಜು ಸ್ಯಾಮ್ಸನ್‌ನ ಸಿಎಸ್‌ಕೆ ತಂಡಕ್ಕೆ ಬಿಟ್ಟು ಕೊಟ್ಟು, ಚೆನ್ನೈ ತಂಡದಿಂದ ಸ್ಯಾಮ್ ಕುರನ್ ಹಾಗೂ ರವೀಂದ್ರ ಜಡೇಜಾರನ್ನು ಸೇರಿಸಿಕೊಂಡಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸನ್‌ರೈಸರ್ಸ್‌ ಹೈದರಾಬಾದ್‌ಗೆ ಅಭಿಷೇಕ್ ಶರ್ಮಾ ಗುಡ್‌ಬೈ? ಕಾವ್ಯ ಮಾರನ್ ಮೇಲೆ ಸಿಟ್ಟಾದ ಸ್ಪೋಟಕ ಬ್ಯಾಟರ್..!
Cricket; 2027ರ ವಿಶ್ವಕಪ್‌ನಲ್ಲಿ ಎಷ್ಟು ಬಾರಿ ಮುಖಾಮುಖಿಯಾಗಲಿದೆ ಭಾರತ-ಪಾಕಿಸ್ತಾನ? ಹಳೆಯ ದಾಖಲೆ ಏನು ಹೇಳುತ್ತೆ?