ಕೊಹ್ಲಿ ಶ್ರೀಕೃಷ್ಣ, ಪಾಟೀದಾರ್ ಅರ್ಜುನ, ಡಿಲೀಟ್ ಎಡಿಟ್ ಸರ್ಕಸ್ ಮೂಲಕ ಪೋಸ್ಟ್ ಸರಿಪಡಿಸಿದ RCB

Published : Feb 13, 2025, 09:47 PM ISTUpdated : Feb 13, 2025, 09:50 PM IST
ಕೊಹ್ಲಿ ಶ್ರೀಕೃಷ್ಣ, ಪಾಟೀದಾರ್ ಅರ್ಜುನ, ಡಿಲೀಟ್ ಎಡಿಟ್ ಸರ್ಕಸ್ ಮೂಲಕ ಪೋಸ್ಟ್ ಸರಿಪಡಿಸಿದ RCB

ಸಾರಾಂಶ

ಆರ್‌ಸಿಬಿ ತಂಡಕ್ಕೆ ಹೊಸ ನಾಯಕನ ಘೋಷಣೆಯಾಗುತ್ತಿದ್ದಂತೆ ತಂಡ ಅಧಿಕೃತ ಪೋಸ್ಟ್ ಹಾಕಿ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಹೊಸ ರಜತ್ ಪಾಟೀದಾರ್ ಆರ್‌ಸಿಬಿ ತಂಡದ ಅರ್ಜುನ, ಆದರೆ ವಿರಾಟ್ ಕೊಹ್ಲಿ ಶ್ರೀಕೃಷ್ಣನಾಗಿ ಪೋಸ್ಟ್ ಹಾಕಲಾಗಿತ್ತು. ಆದರೆ ಈ ಟ್ವೀಟ್ ಡಿಲೀಟ್ ಮಾಡಿದರೆ, ಇನ್‌ಸ್ಟಾ ಪೋಸ್ಟ್ ಎಡಿಟ್ ಮಾಡಲಾಗಿದೆ. 

ಬೆಂಗಳೂರು(ಫೆ.13) ಮಹಾಭಾರತ ಯುದ್ಧಕ್ಕೆ ವೇದಿಕೆ ಸಜ್ಜಾಗಿದೆ. ಇದರ ಮೊದಲ ತಯಾರಿಯ ಭಾಗವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ನಾಯಕನ ಘೋಷಿಸಿದೆ. ರಜತ್ ಪಾಟೀದಾರ್ ಆರ್‌ಸಿಬಿ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಹಾಭಾರತದ ಪೋಸ್ಟ್ ಒಂದನ್ನು ಹಾಕಿದೆ. ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಅರ್ಜುನನಾಗಿದ್ದರೆ, ನಾಯಕ ರಜತ್ ಪಾಟೀದಾರ್ ಅರ್ಜುನನಾಗಿ ಪೋಸ್ಟರ್ ಹಾಕಲಾಗಿದೆ. ಈ ಪೋಸ್ಟ್ ಭಾರಿ ಸದ್ದು ಮಾಡಿದೆ. ವಿವಾದಗಳು ಶುರುವಾಗುವ ಮುನ್ನವೇ ಆರ್‌ಸಿಬಿ ಟ್ವೀಟ್ ಡಿಲೀಟ್ ಮಾಡಿದೆ. ಬಳಿಕ ಇನ್‌ಸ್ಟಾಗ್ರಾಂ ಪೋಸ್ಟ್ ಎಡಿಟ್ ಮಾಡಿ ವಿವಾದಿಂದ ದೂರ ಉಳಿದುಕೊಂಡಿದೆ. 

ಯುದ್ಧಕ್ಕೆ ಹೊರಟ ವಿರಾಟ್ ಕೊಹ್ಲಿ ರಥವನ್ನು ಮುನ್ನಡೆಸುತ್ತಿದ್ದರೆ, ರಜತ್ ಪಾಟೀದಾರ್ ಬತ್ತಳಿಕೆಯಲ್ಲಿ ಬಾಣ ತುಂಬಿಕೊಂಡು ಗುರಿಯತ್ತ ಚಿತ್ತ ನೆಟ್ಟಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್ ಮಹಾಯುದ್ಧದದಲ್ಲಿ ಆರ್‌ಸಿಬಿ ವಿಜಯಶಾಲಿಯಾಗಲಿದೆ. ಶ್ರೀಕೃಷ್ಣಾರ್ಜುನರ ಜೋಡಿಯಂತೆ ಯಶಸ್ವಿಯಾಗಿ ಸವಾಲು ಮೆಟ್ಟಿ ನಿಲ್ಲಲಿದೆ ಎಂದು ಸೂಚ್ಯವಾಗಿ ಹೇಳಿದೆ. ಈ ಪೋಸ್ಟರ್‌ಗೆ ಹಲವರು ಭರ್ಜರಿ ಕಮೆಂಟ್ ಮಾಡಿದ್ದಾರೆ. ಅಶ್ವಮೇಧ ಯಾಗಕ್ಕೆ ಹೊರಟ ಶ್ರೀಕೃಷ್ಣಾರ್ಜುನರು ಎಂದು ಪ್ರತಿಕ್ರಿಯೆಸಿದ್ದಾರೆ. 2025ರ ಐಪಿಎಲ್‌ನಲ್ಲಿ ಈ ಕಾಂಬಿನೇಷನ್ ಗೆಲುವಿನ ಅಲೆ ಸೃಷ್ಟಿಸಲಿದೆ. ಈ ಬಾರಿ ಚಾಂಪಿಯನ್ ಕಿರೀಟದತ್ತ ತಂಡವನ್ನು ಕೊಂಡೊಯ್ಯಲು ಕೃಷ್ಮನ ಸಾರಥ್ಯ, ಅರ್ಜುನನ ಪರಾಕ್ರಮ ನೆರವಾಗಲಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. 

RCB ನಾಯಕನಾಗುತ್ತಿದ್ದಂತೆಯೇ ಖಂಡಕ್ ಸಂದೇಶ ಕೊಟ್ಟ ರಜತ್ ಪಾಟೀದಾರ್!

ಯುವ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ತಂಡದ ಹೊಸ ನಾಯಕರಾಗಿದ್ದಾರೆ. ಯಾರು ನಾಯಕರಾಗ್ತಾರೆ ಅನ್ನೋ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ವಿರಾಟ್ ಕೊಹ್ಲಿ ಮತ್ತೆ ನಾಯಕರಾಗ್ತಾರೆ ಅಂತ ಅಂದುಕೊಂಡಿದ್ರು. ಆದ್ರೆ ಹಾಗಾಗ್ಲಿಲ್ಲ. ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹೊಸ ನಾಯಕರ ಹೆಸರನ್ನು ಘೋಷಿಸಲಾಯಿತು. ಈ ನಿರ್ಧಾರದಿಂದ ವಿರಾಟ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪಾಟಿದಾರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯುವ ಆಟಗಾರನಿಗೆ ಬೆಂಬಲ ನೀಡುವುದಾಗಿ ಹೇಳಿದರು.

ಆರ್‌ಸಿಬಿ ತಂಡದ ನಾಯಕರಾಗಿ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಈಗ ಫ್ಯಾನ್ಸ್‌ಗಳ ಮನಸ್ಸಿನಲ್ಲಿ ಪ್ರಶ್ನೆ ಮೂಡಿದೆ, 16 ವರ್ಷಗಳಿಂದ ಐಪಿಎಲ್ ಟ್ರೋಫಿ ಗೆಲ್ಲದಿರುವ ಬರವನ್ನು ಪಾಟಿದಾರ್ ನೀಗಿಸುತ್ತಾರಾ? ರಜತ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲು ಕಾರಣಗಳೇನು ಅಂತ ತಿಳಿದುಕೊಳ್ಳೋಣ.

ದೇಶೀ ಕ್ರಿಕೆಟ್‌ನಲ್ಲಿ ಅದ್ಭುತ ನಾಯಕತ್ವ
ರಜತ್ ಪಾಟಿದಾರ್ ಇತ್ತೀಚೆಗೆ ದೇಶೀ ಕ್ರಿಕೆಟ್‌ನಲ್ಲಿ ಅದ್ಭುತ ನಾಯಕತ್ವ ತೋರಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಧ್ಯಪ್ರದೇಶ ತಂಡವನ್ನು ಫೈನಲ್‌ಗೆ ಕರೆದೊಯ್ದಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲೂ ನಾಯಕತ್ವ ವಹಿಸಿದ್ದರು. ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಸೈಯದ್ ಮುಷ್ತಾಕ್ ಅಲಿಯಲ್ಲಿ 186.08 ಸ್ಟ್ರೈಕ್ ರೇಟ್‌ನಲ್ಲಿ 428 ರನ್ ಗಳಿಸಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲಿ 56.60 ಸರಾಸರಿಯಲ್ಲಿ 226 ರನ್ ಗಳಿಸಿದ್ದರು.

 

 

ಆಕ್ರಮಣಕಾರಿ ಆಟದ ಶೈಲಿ
ರಜತ್ ಪಾಟಿದಾರ್ ಆಕ್ರಮಣಕಾರಿ ಆಟಗಾರ. ಬ್ಯಾಟಿಂಗ್ ಮೂಲಕ ಪಂದ್ಯದ ಗತಿ ಬದಲಿಸಬಲ್ಲರು. ಕಳೆದ ವರ್ಷ ಐಪಿಎಲ್ 2024 ರಲ್ಲಿ ಇದನ್ನು ಸಾಬೀತುಪಡಿಸಿದ್ದಾರೆ. 15 ಪಂದ್ಯಗಳಲ್ಲಿ 395 ರನ್ ಗಳಿಸಿದ್ದರು. ಅವರ ಬ್ಯಾಟಿಂಗ್‌ನಿಂದ ಆರ್‌ಸಿಬಿ ಪ್ಲೇಆಫ್ ತಲುಪಿತ್ತು.

ತಂಡದೊಂದಿಗೆ ದೀರ್ಘಾವಧಿಯ ಅನುಭವ
ರಜತ್ ಪಾಟಿದಾರ್ 2021 ರಿಂದ ಆರ್‌ಸಿಬಿ ತಂಡದಲ್ಲಿದ್ದಾರೆ. ತಂಡದ ವಾತಾವರಣದ ಬಗ್ಗೆ ಚೆನ್ನಾಗಿ ತಿಳಿದಿದೆ. ವಿರಾಟ್ ಕೊಹ್ಲಿ ಅವರ ಬೆಂಬಲವೂ ಇದೆ. ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸವಿದೆ.

RCB ನೂತನ ನಾಯಕನ ಘೋಷಣೆ ಬೆನ್ನಲ್ಲೇ ಮಹತ್ವದ ಅಪ್‌ಡೇಟ್ ಕೊಟ್ಟ ವಿರಾಟ್ ಕೊಹ್ಲಿ!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರಿನ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಮೇಜರ್ ಚೇಂಜ್?
ಕೆಎಸ್‌ಸಿಎ ಚುನಾವಣೆ: ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!