
ಬೆಂಗಳೂರು (ಮಾ.24) ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲವೇ ದಿನ ಮಾತ್ರ ಬಾಕಿ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಕಳೆದ ವರ್ಷ ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಲಿತ ಪ್ರಕರಣದಿಂದ ಎಲ್ಲಾ ಪಂದ್ಯಗಳು ರದ್ದಾಗಿದ್ದ ಚಿನ್ನಸ್ವಾಮಿಯಲ್ಲಿ ಇದೀಗ ಮತ್ತೆ ಪಂದ್ಯಗಳು ಆರಂಭಗೊಳ್ಳುತ್ತಿದೆ. ಆದರೆ ಮೃತಪಟ್ಟ 11 ಅಭಿಮಾನಿಗಳಿಗೆ ಟ್ರಿಬ್ಯೂಟ್ ನೀಡಲು ಆರ್‌ಸಿಬಿ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮುಂದಾಗಿದೆ. ಇದಕ್ಕಾಗಿ ಆರ್‌ಸಿಬಿ ಆಟಗಾರರು ಅಭ್ಯಾಸದ ವೇಳೆ 11 ನಂಬರ್ ಜರ್ಸಿ ಧರಿ ಪ್ರಾಕ್ಟೀಸ್ ಮಾಡಲಿದ್ದಾರೆ. ಇಷ್ಟೇ ಅಲ್ಲ ಈ ಮೃತಪಟ್ಟ 11 ಅಭಿಮಾನಿಗಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚಿನ್ನಸ್ವಾಮಿ ಕ್ರೀಡಾಗಣದಲ್ಲಿ 11 ಆಸನಗಳನ್ನು ರಿಸರ್ವ್ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವ ಎಲ್ಲಾ ಪಂದ್ಯಗಳಲ್ಲಿ ಮೃತ 11 ಅಭಿಮಾನಿಗಳಿಗಾಗಿ 11 ಸೀಟುಗಳನ್ನು ರಿಸರ್ವ್ ಮಾಡಲಿದೆ. ಈ ಮೂಲಕ ಕೆಎಸ್‌ಸಿಎ ಮೃತ ಅಭಿಮಾನಿಗಳಿಗೆ ಗೌರವ ನೀಡಲು ಮುಂದಾಗಿದೆ. ಪ್ರತಿ ಮ್ಯಾಚ್ ಗೂ ಈ 11 ಸೀಟ್‌ಗಳ ಟಿಕೆಟ್ ಮಾರಾಟ ಮಾಡುವುದಿಲ್ಲ.ಇಷ್ಟೇ ಅಲ್ಲ ಅಂತರರಾಷ್ಟ್ರೀಯ ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಸಹ 11 ಸೀಟ್ ಗಳು ಮೃತರ ಹೆಸರಿನಲ್ಲಿ ಮೀಸಲಿಡುವಾದಿಗ ಕೆಎಸ್‌ಸಿಎ ಘೋಷಣೆ ಮಾಡಿದೆ. ಬೋರ್ಡ್ ಅಳವಡಿಕೆ ಮಾಡಿ ಅದರಲ್ಲಿ ಮೃತರ ಹೆಸರನ್ನ ದಾಖಳಿಸಲಾಗುತ್ತದೆ. ಮುಖ್ಯ ದ್ವಾರದ ಭಾಗದಲ್ಲಿ ಹೆಸರಗಳನ್ನ ಕೆಎಸ್‌ಸಿಎ ಅಳವಡಿಕೆ ಮಾಡಲಿದೆ.
19 ನೇ ಆವೃತ್ತಿಯ IPL ಉದ್ಘಾಟನಾ ಪಂದ್ಯದ ವೇಳೆ ಮೃತರಿಗೆ 1 ನಿಮಿಷ ಮೌನಾಚರಣೆ ಮಾಡಲಾಗುತ್ತದೆ. ಈ ಮೂಲಕ ಆರ್‌ಸಿಬಿ ಹಾಗೂ ಕೆಎಸ್‌ಸಿ ಮ್ಯಾನೇಜ್ಮೆಂಟ್ ಮೃತ ಅಭಿಮಾನಿಗಳಿಗೆ ಗೌರವ ನಮನ ಸಲ್ಲಿಸಲು ನಿರ್ಧರಿಸಿದೆ.
ಆರ್‌ಸಿಬಿ ತನ್ನ ಎಲ್ಲಾ ಅಭ್ಯಾಸಗಳಲ್ಲಿ 11 ಜರ್ಸಿ ನಂಬರ್‌ನಲ್ಲಿ ಆಡಲಿದೆ. ಆರ್‌ಸಿಬಿಯ ಅಭ್ಯಾಸ ಪಂದ್ಯದ ಜರ್ಸಿಯಲ್ಲಿ 11 ನಂಬರ್ ದಾಖಲಿಸಲಾಗಿದೆ. ಇನ್ನು ಬಿಸಿಸಿಐ ಐಪಿಎಲ್ ಹಾಗೂ ಐಸಿಸಿ ನಿಯಮದ ಪ್ರಕಾರ ಪಂದ್ಯದಲ್ಲಿ ಒಂದೇ ನಂಬರ್ ಜರ್ಸಿಯಲ್ಲಿ ಕಣಕ್ಕಿಳಿಯಲು ಸಾಧ್ಯವಿಲ್ಲ. ಹೀಗಾಗಿ ಆರ್‌ಸಿಬಿ ಅಭ್ಯಾಸದ ವೇಳೆ 11 ಜರ್ಸಿ ತೊಡಲಿದೆ.
ಬೆಂಗಳೂರಿ ಚಿನ್ನಸ್ವಾಮಿ ಪಂದ್ಯದಲ್ಲಿ ನಡೆಯುವ ಪಂದ್ಯದ ಟಿಕೆಟ್ ಖರೀದಿಸಿದ ಅಭಿಮಾನಿಗಳಿಗೆ ನಮ್ಮ ಮೆಟ್ರೋ ಪ್ರಯಾಣ ಉಚಿತವಾಗಿದೆ. ಟಿಕೆಟ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಇರಲಿದೆ. ಇದು ಮೆಟ್ರೋ ಪ್ರಯಾಣಕ್ಕೂ ಅನ್ವಯವಾಗಲಿದೆ. ಪಂದ್ಯದ ಟಿಕೆಟ್ ಇದ್ದ ಅಭಿಮಾನಿಗಳು ಉಚಿತವಾಗಿ ಮೆಟ್ರೋದಲ್ಲಿ ಪ್ರಾಯಣಿಸಬಹುದು. ಇನ್ನು ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಯುವ ದಿನ ಮೆಟ್ರೋ ಅವಧಿ ವಿಸ್ತರಣೆ ಮಾಡಲಾಗುತ್ತದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.