ಚಿನ್ನಸ್ವಾಮಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೇಡು ತೀರಿಸಿಕೊಳ್ಳಲು ರೆಡಿಯಾದ ಆರ್‌ಸಿಬಿ!

Kannadaprabha News   | Kannada Prabha
Published : Apr 18, 2026, 09:58 AM IST
RCB

ಸಾರಾಂಶ

ತವರಿನಲ್ಲಿ ಸತತ ಗೆಲುವಿನ ನಿರೀಕ್ಷೆಯಲ್ಲಿರುವ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಅಮೋಘ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಹಾಗೂ ಮಧ್ಯಮ ಓವರ್‌ಗಳಲ್ಲಿ ಮಿಂಚುತ್ತಿರುವ ರಜತ್ ಪಾಟೀದಾರ್ ತಂಡದ ಪ್ರಮುಖ ಶಕ್ತಿಯಾಗಿದ್ದು, ಕಳೆದ ಬಾರಿ ತವರಿನಲ್ಲೇ ಸೋತಿದ್ದ ಆರ್‌ಸಿಬಿ ಈ ಬಾರಿ ಗೆಲ್ಲುವ ವಿಶ್ವಾಸದಲ್ಲಿದೆ.

ಬೆಂಗಳೂರು: ತಾನೇಕೆ ಚಾಂಪಿಯನ್‌ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಈ ಬಾರಿ ಐಪಿಎಲ್‌ನಲ್ಲಿ ಅಬ್ಬರಿಸುತ್ತಿರುವ ಆರ್‌ಸಿಬಿ ತಂಡ ಶನಿವಾರ ಮತ್ತೆ ತನ್ನ ತವರು ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್‌ಸಿಬಿ ತವರಿನಲ್ಲಿ ಸತತ 4ನೇ, ಒಟ್ಟಾರೆ ಈ ಬಾರಿ 5ನೇ ಗೆಲುವು ದಾಖಲಿಸಲು ಕಾಯುತ್ತಿದೆ. ಜೊತೆಗೆ ಅಗ್ರಸ್ಥಾನದ ಮೇಲೂ ಕಣ್ಣಿಟ್ಟಿದೆ.

ಹಿಂದಿನಂತೆ ಆರ್‌ಸಿಬಿ ಈಗ ಒಬ್ಬರನ್ನೇ ಅವಲಂಬಿಸಿ ಆಡುತ್ತಿಲ್ಲ. ಸಂಘಟಿತ ಆಟವಾಡುತ್ತಿರುವ ತಂಡ ತವರಿನಲ್ಲಿ ಮತ್ತಷ್ಟು ಆಕ್ರಮಣಕಾರಿ ಪ್ರದರ್ಶನ ನೀಡುತ್ತಿದೆ. ವಿರಾಟ್‌ ಕೊಹ್ಲಿ ಅಮೋಘ ಲಯದಲ್ಲಿದ್ದು, ದೇವದತ್‌ ಪಡಿಕ್ಕಲ್‌, ರಜತ್‌ ಪಾಟೀದಾರ್‌, ಫಿಲ್‌ ಸಾಲ್ಟ್‌, ಟಿಮ್‌ ಡೇವಿಡ್‌ ಕೂಡಾ ರನ್‌ ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

ರಜತ್‌ ಪಾಟೀದಾರ್ ಮ್ಯಾಜಿಕ್‌:

ಈ ಐಪಿಎಲ್‌ನಲ್ಲಿ ಆರ್‌ಸಿಬಿಯ ಗೆಲುವಿನ ನಾಗಲೋಟದ ಹಿಂದೆ ರಜತ್‌ ಕೊಡುಗೆ ಅಪಾರ. ಮಧ್ಯಮ ಓವರ್‌ಗಳಲ್ಲಿ ಅವರ ಬ್ಯಾಟ್‌ನಿಂದ ಸಿಡಿಯುವ ಬೌಂಡರಿ, ಸಿಕ್ಸರ್‌ಗಳೇ ತಂಡದ ಫಲಿತಾಂಶ ನಿರ್ಧರಿಸುತ್ತಿವೆ. ಈ ಐಪಿಎಲ್‌ನಲ್ಲಿ ರಜತ್‌ ಮಧ್ಯಮ ಓವರ್‌ಗಳಲ್ಲಿ 18 ಸಿಕ್ಸರ್‌ ಸಿಡಿಸಿತ್ತು. ತಂಡದ ಉಳಿದೆಲ್ಲಾ ಆಟಗಾರರು ಒಟ್ಟಾಗಿ ಬಾರಿಸಿದ್ದು 17 ಸಿಕ್ಸರ್‌. 6-16 ಓವರ್‌ ಮಧ್ಯೆ ಅವರ ಸ್ಟ್ರೈಕ್‌ರೇಟ್‌ 223.86 ಇದೆ. ಇದು ಇತರ ಬ್ಯಾಟರ್‌ಗಳಿಗಿಂತ 1.5 ಪಟ್ಟು ಹೆಚ್ಚು.

ಇನ್ನು, ಬೌಲಿಂಗ್‌ನಲ್ಲಿ ಹೇಜಲ್‌ವುಡ್‌, ಭುವನೇಶ್ವರ್‌, ರಸಿಕ್‌ ದಾರ್‌, ಕೃನಾಲ್‌ ಪಾಂಡ್ಯ, ಸುಯಶ್‌ ಶರ್ಮಾ ಎದುರಾಳಿ ಬೌಲರ್‌ಗಳನ್ನು ಸುಲಭದಲ್ಲಿ ಕಟ್ಟಿಹಾಕುತ್ತಿದ್ದಾರೆ.

ಮತ್ತೆ ಗೆಲ್ಲುತ್ತಾ ಡೆಲ್ಲಿ?:

ಡೆಲ್ಲಿ ತಂಡ ಕಳೆದ ವರ್ಷ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಯನ್ನು ಸೋಲಿಸಿತ್ತು. ಕೆ.ಎಲ್‌.ರಾಹುಲ್‌ ಗೆಲುವಿನ ರನ್‌ ಸಿಡಿಸಿ ಬ್ಯಾಟ್‌ನಲ್ಲೇ ವೃತ್ತ ಎಳೆದು ವಿಶೇಷ ರೀತಿಯಲ್ಲಿ ಸಂಭ್ರಮಿಸಿದ್ದರು. ಈ ಬಾರಿ ಮತ್ತೆ ಆರ್‌ಸಿಬಿಯನ್ನು ಸೋಲಿಸುವ ಗುರಿ ಡೆಲ್ಲಿಗಿದೆ. ಆದರೆ ಕಳೆದ ಬಾರಿ ಸೋಲಿಗೆ ಸೇಡು ತೀರಿಸಿಕೊಳ್ಳಲು ಆರ್‌ಸಿಬಿ ಕಾಯುತ್ತಿದೆ. ರಾಹುಲ್‌ ತನ್ನ ತವರಿನಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲವಿದೆ. ತಂಡ ಈ ಬಾರಿ 4 ಪಂದ್ಯಗಳನ್ನಾಡಿದ್ದು, 2ರಲ್ಲಿ ಗೆದ್ದು 2ರಲ್ಲಿ ಸೋತಿವೆ.

ಸಂಭವನೀಯ ಆಟಗಾರರು

ಆರ್‌ಸಿಬಿ: ಫಿಲ್ ಸಾಲ್ಟ್‌, ವಿರಾಟ್‌ ಕೊಹ್ಲಿ, ದೇವದತ್‌ ಪಡಿಕ್ಕಲ್, ರಜತ್‌ ಪಾಟೀದಾರ್(ನಾಯಕ), ಜಿತೇಶ್‌ ಶರ್ಮಾ, ಟಿಮ್ ಡೇವಿಡ್‌, ರೊಮ್ಯಾರಿಯೋ ಶೆಫರ್ಡ್‌, ಕೃನಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್, ಜೋಶ್ ಹೇಜಲ್‌ವುಡ್‌, ರಸಿಕ್‌ ಧರ್, ಸುಯಶ್‌ ಶರ್ಮಾ.

ಡೆಲ್ಲಿ ಕ್ಯಾಪಿಟಲ್ಸ್: ಪಥುಮ್ ನಿಸ್ಸಾಂಕ, ಕೆ ಎಲ್ ರಾಹುಲ್‌, ನಿತೀಶ್‌ ರಾಣಾ/ಅಶುತೋಷ್‌ ಶರ್ಮಾ, ಸಮೀರ್‌ ರಿಜ್ವಿ, ಅಕ್ಷರ್‌ ಪಟೇಲ್, ಡೇವಿಡ್ ಮಿಲ್ಲರ್‌, ಟ್ರಿಸ್ಟಿನ್ ಸ್ಟಬ್ಸ್‌, ವಿಪ್ರಾಜ್‌ ನಿಗಮ್/ಆಕಿಬ್‌ ಧರ್, ಲುಂಗಿ ಎನ್‌ಗಿಡಿ, ಕುಲ್ದೀಪ್‌ ಯಾದವ್, ಟಿ ನಟರಾಜನ್‌, ಮುಕೇಶ್‌ ಕುಮಾರ್.

ಪಂದ್ಯ: ಮಧ್ಯಾಹ್ನ 3.30ಕ್ಕೆ

ಮುಖಾಮುಖಿ: 33

ಆರ್‌ಸಿಬಿ: 19

ಡೆಲ್ಲಿ: 12

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕ್ಯಾಮರೂನ್‌ ಗ್ರೀನ್‌ ಭರ್ಜರಿ ಸಿಕ್ಸರ್‌, ಕೊಟ್ಟ ಮಾತಿನಂತೆ ನಡೆದುಕೊಂಡ ಟಾಟಾ ಮೋಟಾರ್ಸ್‌!
IPL 2026: ನಿನ್ನೆ ನಡೆದ ಗುಜರಾತ್ ಟೈಟಾನ್ಸ್-ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?