
ಬೆಂಗಳೂರು(ಮಾ.27): 15ನೇ ಆವೃತ್ತಿಯ ಐಪಿಎಲ್ಗೆ (IPL 2022) ಗ್ರ್ಯಾಂಡ್ ಕಿಕ್ ಅಪ್ ಸಿಕ್ಕಿದೆ. ಆದ್ರೆ ಆರ್‌ಸಿಬಿ (RCB) ಟೂರ್ನಿಯಲ್ಲಿ ಇಂದು ಅಭಿಯಾನ ಆರಂಭಿಸಲಿದೆ. ಕಳೆದ ಎಲ್ಲಾ ಆವೃತ್ತಿಗಳಿಗಿಂತ ಕಿಂಗ್ ಕೊಹ್ಲಿಗೆ ಈ ಸಲದ ಚುಟುಕು ದಂಗಲ್ ವೆರಿ ಸ್ಪೆಷಲ್ ಮತ್ತು ಚಾಲೆಂಜಿಂಗ್ ಎನಿಸಿದೆ. 2020-21 ಕಿಂಗ್ ಕೊಹ್ಲಿ ಪಾಲಿಗೆ ಅನ್ಲಕ್ಕಿ ಇಯರ್. ಒಂದೆಡೆ ಸೆಂಚುರಿ ಬರ, ಇನ್ನೊಂದೆಡೆ ಕ್ಯಾಪ್ಟನ್ಸಿ ಕೈತಪ್ಪಿದೆ. ಇಂತದ ಸಂಕಷ್ಟದ ನಡುವೆ 2022ನೇ ಐಪಿಎಲ್ಗೆ ಚಾಲನೆ ಸಿಕ್ಕಿದೆ. ಸದ್ಯ ಎಲ್ಲರ ಗಮನ ವಿರಾಟ್ ಕೊಹ್ಲಿ(Virat Kohli) ಮೇಲಿದೆ. ರಣ ಚತುರ, ಸೆಂಚುರಿ ಸಾಮ್ರಾಟನಿಗೆ ಈ IPL ನಿಜಕ್ಕೂ ಚಾಲೆಂಜಿಂಗ್ ಅಂದ್ರೂ ತಪ್ಪಲ್ಲ. ಯಾಕಂದ್ರೆ ಮಾಡ್ರನ್ ಕ್ರಿಕೆಟ್ ದೊರೆ ಮುಂದೆ ಈಗ ಎರಡು ದೊಡ್ಡ ಸವಾಲುಗಳಿವೆ.
ನಾಯಕನಾಗಿ ಫೇಲ್, ಆಟಗಾರನಾಗಿಯಾದ್ರು ಕಪ್ ಗೆಲ್ಲಿಸಿಕೊಡ್ತಾರಾ..?
14ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಗಿಯುತ್ತಿದ್ದಂತೆಯೇ ಕೊಹ್ಲಿ ನಾಯಕತ್ವ ತ್ಯಜಿಸಿದ್ದು ಫ್ರಾಂಚೈಸಿಗೆ ದಂಗು ಬಡಿಸಿದಂತಾಗಿದೆ. ಫಾಫ್ ಡು ಪ್ಲೆಸಿಸ್ಗೆ (Faf du Plessis) ಈ ಜವಾಬ್ದಾರಿ ಹೆಗಲಿಗೇರಿದೆ. ಹಾಗಂತ ಕೊಹ್ಲಿ ನಾಯಕರಾಗಿದ್ರೆ ಮಾತ್ರ ಆರ್‌ಸಿಬಿ ಚಾಂಪಿಯನ್ ಅನ್ನೋದು ನಿಜಕ್ಕೂ ಅದು ಅತಿ ಆಸೆನೆ. ಯಾಕಂದ್ರೆ ವಿರಾಟ್ ಸುದೀರ್ಘ ಕಾಲ ದಂಡನಾಯಕನಾದ್ರು ಆರ್ಸಿಬಿಗೆ ಒಮ್ಮೆಯೂ ಕಪ್ ಗೆಲ್ಲಿಸಿ ಕೊಡಲು ಸಾಧ್ಯವಾಗ್ಲಿಲ್ಲ. ಅಚ್ಚರಿ ರೀತಿಯಲ್ಲಿ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ರು.
ಸದ್ಯ ಕೊಹ್ಲಿ ಫ್ರೀ ಬರ್ಡ್. ಅವರಿಗೆ ಈ ಹಿಂದಿನಂತೆ ನಾಯಕತ್ವದ ಒತ್ತಡವಿಲ್ಲ. ಅವರೀಗ ಬರೀ ತಂಡದ ಆಟಗಾರನಷ್ಟೇ. ಯಾವ ಟೀಕೆಗಳಿಗೂ ಅವರು ತಲೆಕೆಡಿಸಿಕೊಳ್ಳಬೇಕಿಲ್ಲ. ಹೀಗಾಗಿ ನಾಯಕನಾಗಿದ್ದಾಗ ಕಮರಿದ ಕಪ್ ಕನಸನ್ನು ಆಟಗಾರನಾಗಿ ಆದರೂ ನನಸಾಗಿಸ್ತಾರಾ ಅನ್ನೋ ಮಹಾದಾಸೆ ಆರ್‌ಸಿಬಿ ಅಭಿಮಾನಿಗಳಲ್ಲಿ ಮನೆಮಾಡಿದೆ. ಕೊಹ್ಲಿಯ IPL ರೆಕಾರ್ಡ್ ಅದ್ಭುತವಾಗಿದೆ. 207 ಪಂದ್ಯಗಳಿಂದ 6,283 ರನ್ ಬಾರಿಸಿದ್ದಾರೆ. 5 ಆವೃತ್ತಿಗಳಲ್ಲಿ 500ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಹಳೇ ಖದರ್ ಮತ್ತೆ ಮರುಕಳಿಸಿ ಬ್ಯಾಟ್ ಬೀಸಿದ್ರೆ ನಾಯಕನಾಗಿ ಅಲ್ಲದಿದ್ರು, ಆಟಗಾರನಾಗಿ ಆರ್‌ಸಿಬಿ ಚೊಚ್ಚಲ ಟ್ರೋಫಿ ಗೆಲುವಿಗೆ ಕಾರಣರಾಗಬಹುದು.
ಭಾರತ ಪರ 2 ವರ್ಷ, IPLನಲ್ಲಿ ಸೆಂಚುರಿ ಬಾರಿಸದೇ 4 ವರ್ಷ..!
ಬ್ಯಾಕ್ ಟು ಬ್ಯಾಕ್ ಸೆಂಚುರಿಗಳಿಂದಲೇ ಹೆಚ್ಚು ಫೇಮಸ್ ಅಗಿದ್ದ ವಿರಾಟ್ ಕೊಹ್ಲಿ ಈಗ ಶತಕದ ಬರ ಎದುರಿಸ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸೆಂಚುರಿ ಮೂಡಿ ಬರದೇ 2 ವರ್ಷ ಕಳೆದಿದೆ. ಇನ್ನೂ ಐಪಿಎಲ್ನಲ್ಲೂ ಅದು ಮಾಯವಾಗಿದೆ. 2017ರಲ್ಲಿ ವಿರಾಟ್ ಕಲರ್ಫುಲ್ ಟೂರ್ನಿಯಲ್ಲಿ ಕೊನೆ ಬಾರಿ ಶತಕ ಸಿಡಿಸಿದ್ರು. 2016ರ ಒಂದೇ ಆವೃತ್ತಿಯಲ್ಲಿ ಬರೋಬ್ಬರಿ 4 ಶತಕ ಬಾರಿಸಿ ಸುದ್ದಿಯಾಗಿದ್ರು. 2017ರಲ್ಲಿ ಒಂದು ಶತಕ. ಇಂತಹ ಸೆಂಚುರಿ ಮ್ಯಾನ್ ಕಳೆದ 4 ಆವೃತ್ತಿಗಳಿಂದ ಐಪಿಎಲ್ನಲ್ಲಿ ಸೆಂಚುರಿ ಬಾರಿಸಲು ಫೇಲಾಗಿದ್ದಾರೆ. ಕನಿಷ್ಠ ಪಕ್ಷ ಈ ಬಾರಿನಾದ್ರು ಆ ಶತಕದ ವೈಭವ ಮರುಕಳಿಸಲಿ.
IPL 2022: ಕಪ್ ಗೆಲ್ಲುವ ಕನಸಿನೊಂದಿಗೆ ಆರ್‌ಸಿಬಿ ಕಣಕ್ಕೆ..!
ಈ ಬಾರಿ ESCN ಅಭಿಯಾನಕ್ಕೆ ಬ್ರೇಕ್:
ಇನ್ನು 2016ರಿಂದ ಪ್ರತಿ ಆವೃತ್ತಿ ಶುರುವಾಗುತ್ತೆ ಅಂದ್ರೆ ಸಾಕು ಆರ್‌ಸಿಬಿ ಅಭಿಮಾನಿಗಳಿಂದ ಈ ಸಲ ಕಪ್ ನಮ್ದೇ ಅನ್ನೋ ಅಭಿಯಾನ ಹೆಚ್ಚು ಸುದ್ದಿಯಲ್ಲಿರ್ಲಿತ್ತು. ಇದರಿಂದ ಟೂರ್ನಿ ಕ್ರೇಜ್ ಹೆಚ್ಚಾಗಿರೋದು. ಆದ್ರೆ ಈ ಬಾರಿ ಯಾಕೋ ಕೊಹ್ಲಿ ಕ್ಯಾಪ್ಟನ್ಸಿ ತೊರೆಯುತ್ತಿದ್ದಂತೆ ಅದರ ಸುದ್ದಿನೇ ಇಲ್ಲ. ಕೊಹ್ಲಿನೇ ಕ್ಯಾಪ್ಟನ್ ಅಲ್ಲ ಅಂದ್ಮೇಲೆ ಈ ಸಲ ಕಪ್ ನಮ್ದೇ ಅಭಿಯಾನ ಆದರೂ ಯಾಕೆ ಅಂತಾ ಆರ್‌ಸಿಬಿ ಫ್ಯಾನ್ಸ್ ಸೈಲೆಂಟಾಗಿದ್ದಾರೆ.
ಮಿಡಲ್ ಆರ್ಡರ್ನಲ್ಲಿ ಕೊಹ್ಲಿನೇ ತಂಡಕ್ಕೆ ಶಕ್ತಿ:
ನ್ಯೂ ಕ್ಯಾಪ್ಟನ್, ನ್ಯೂ ಟೀಮ್ ಜೊತೆ ಆರ್‌ಸಿಬಿ, ಇಂದು ಪಂಜಾಬ್ ವಿರುದ್ಧ ಮೊದಲ ಪಂದ್ಯಕ್ಕೆ ಸಜ್ಜಾಗಿದೆ. ಆಕ್ಷನ್ನಲ್ಲಿ ಕೋಟಿ ಕೋಟಿ ಸುರಿದ್ರೂ ಹೊಸ ಮುಖಗಳಿಗೆ ಮಣೆ ಹಾಕಿದ್ರು, ಮಿಡಲ್ ಆರ್ಡರ್ನಲ್ಲಿ ಕೊಹ್ಲಿಯನ್ನೇ ಹೆಚ್ಚು ಅವಲಂಬಿಸಿದೆ. ಬಿಗ್ ಇನ್ನಿಂಗ್ಸ್ ಕಟ್ಟುವ ಅಗತ್ಯವಿದೆ. ಒಟ್ಟಿನಲ್ಲಿ ಈ ಸಲದ ಐಪಿಎಲ್ ಕೊಹ್ಲಿಗೆ ಕಬ್ಬಿಣಡದ ಕಡಲೆಯಾಗಿದೆ. ಇಂತಹ ಸವಾಲಿನ ಚಕ್ರವ್ಯೂಹವನ್ನ ಕೊಹ್ಲಿ ಭೇದಿಸುತ್ತಾರಾ..? ಇಲ್ಲ ಫೇಲಾಗ್ತಾರಾ ಅನ್ನೋದನ್ನ ಕಾದು ನೋಡಬೇಕು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.