IPL 2022: ಕಪ್ ಗೆಲ್ಲುವ ಕನಸಿನೊಂದಿಗೆ ಆರ್‌ಸಿಬಿ ಕಣಕ್ಕೆ..!

Published : Mar 27, 2022, 09:10 AM IST
IPL 2022: ಕಪ್ ಗೆಲ್ಲುವ ಕನಸಿನೊಂದಿಗೆ ಆರ್‌ಸಿಬಿ ಕಣಕ್ಕೆ..!

ಸಾರಾಂಶ

* ಇಂದಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಯಾನ ಆರಂಭ * ಆರ್‌ಸಿಬಿಗೆ ತಂಡಕ್ಕೆ ಮೊದಲ ಪಂದ್ಯದಲ್ಲೇ ಪಂಜಾಬ್ ಕಿಂಗ್ಸ್‌ ಸವಾಲು * ಟೂರ್ನಿಯಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ ಆರ್‌ಸಿಬಿ ಪಡೆ

ನವಿ ಮುಂಬೈ(ಮಾ.27): ನಾಯಕತ್ವ ತ್ಯಜಿಸಿ ಕೇವಲ ಬ್ಯಾಟರ್‌ ಆಗಿ ಕಣಕ್ಕಿಳಿಯಲು ಸಿದ್ಧರಾಗಿರುವ ವಿರಾಟ್‌ ಕೊಹ್ಲಿ (Virat Kohli) ತಮ್ಮ ಹಿಂದಿನ ಲಯಕ್ಕೆ ಮರಳಲು ತುದಿಗಾಲಲ್ಲಿ ನಿಂತಿದ್ದಾರೆ. ಫಾಫ್‌ ಡು ಪ್ಲೆಸಿಸ್ (Faf du Plessis) ಹೊಸ ನಾಯಕನಾಗಿ ನೇಮಕಗೊಂಡಿದ್ದರೂ, ಕೊಹ್ಲಿಯ ಮೇಲೆಯೇ ಹೆಚ್ಚು ಅವಲಂಬಿತಗೊಂಡಿರುವ ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು(ಆರ್‌ಸಿಬಿ) (Royal Challengers Bangalore) ಚೊಚ್ಚಲ ಕಪ್‌ ಗೆಲ್ಲುವ ಉತ್ಸಾಹದೊಂದಿಗೆ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಭಾನುವಾರ ತನ್ನ ಅಭಿಯಾನ ಆರಂಭಿಸಲಿದೆ. ಕರ್ನಾಟಕದ ತಾರಾ ಆಟಗಾರ ಮಯಾಂಕ್‌ ಅಗರ್‌ವಾಲ್‌ (Mayank Agarawal) ಮುಂದಾಳತ್ವದ ಪಂಜಾಬ್‌ ಕಿಂಗ್ಸ್‌ (Punjab Kings), ಆರ್‌ಸಿಬಿಗೆ ಮೊದಲ ಎದುರಾಳಿ. ಮೊದಲ ಬಾರಿಗೆ ಮಯಾಂಕ್‌ ಪೂರ್ಣಾವಧಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಎದುರು ನೋಡುತ್ತಿದ್ದಾರೆ.

2016ರ ಐಪಿಎಲ್‌ನಲ್ಲಿ 900ಕ್ಕೂ ಹೆಚ್ಚು ರನ್‌ ಗಳಿಸಿದ್ದ ಕೊಹ್ಲಿ, ಮತ್ತೊಮ್ಮೆ ಅಂಥದ್ದೇ ಪ್ರದರ್ಶನ ತೋರಿ ಟೀಕಾಕಾರರ ಬಾಯಿ ಮುಚ್ಚಿಸಲು ಕಾಯುತ್ತಿದ್ದಾರೆ. ಆರ್‌ಸಿಬಿ (RCB) ಈ ಬಾರಿ ಹೊಸ ಸಂಯೋಜನೆಯೊಂದಿಗೆ ಆಡಲಿದೆ. ಯುವ ಆಟಗಾರರಾದ ಅನುಜ್‌ ರಾವತ್‌, ಸುಯಶ್‌ ಪ್ರಭುದೇಸಾಯಿ, ಮಹಿಪಾಲ್‌ ಲೊಮ್ರಾರ್‌, ಶೆರ್ಫಾನೆ ರುಥರ್‌ಫೋರ್ಡ್‌, ಫಿನ್‌ ಆ್ಯಲೆನ್‌ ಅವಕಾಶಗಳಿಗೆ ಕಾಯುತ್ತಿದ್ದಾರೆ. ಅನುಭವಿಗಳಾದ ಡು ಪ್ಲೆಸಿಸ್‌, ದಿನೇಶ್‌ ಕಾರ್ತಿಕ್‌ (Dinesh Karthik), ಡೇವಿಡ್‌ ವಿಲ್ಲಿ, ಸಿದ್ಧಾರ್ಥ್‌ ಕೌಲ್‌, ಜೋಶ್‌ ಹೇಜಲ್‌ವುಡ್‌, ಹರ್ಷಲ್ ಪಟೇಲ್‌ (Harshal Patel), ವನಿಂದು ಹಸರಂಗ, ಮೊಹಮದ್‌ ಸಿರಾಜ್‌ರ ಬಲವೂ ಆರ್‌ಸಿಬಿಗಿದೆ. ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಜೋಶ್‌ ಹೇಜಲ್‌ವುಡ್‌ ಹಾಗೂ ಜೇಸನ್‌ ಬೆಹ್ರೆನ್‌ಡೊಫ್‌ರ್‍ ಮೊದಲ 2 ಪಂದ್ಯಗಳಿಗೆ ಲಭ್ಯರಿಲ್ಲ.

ಮತ್ತೊಂದೆಡೆ ಪಂಜಾಬ್‌ಗೆ ಮೊದಲ ಪಂದ್ಯದಲ್ಲಿ ಜಾನಿ ಬೇರ್‌ಸ್ಟೋವ್‌, ಕಗಿಸೋ ರಬಾಡ ಅವರ ಅನುಪಸ್ಥಿತಿ ಕಾಡಲಿದೆ. ಬೇರ್‌ಸ್ಟೋವ್‌ ವಿಂಡೀಸ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಆಡುತ್ತಿದ್ದು, ಕಗಿಸೋ ರಬಾಡ (Kagiso Rabada) ಈಗಷ್ಟೇ ಬಾಂಗ್ಲಾದೇಶ ವಿರುದ್ಧದ ಸರಣಿ ಮುಗಿಸಿದ್ದಾರೆ. ಹೀಗಾಗಿ ತಂಡ ತನ್ನ ಹಿರಿಯ ಬ್ಯಾಟರ್‌ ಶಿಖರ್‌ ಧವನ್‌, ಇಂಗ್ಲೆಂಡ್‌ ಆಲ್ರೌಂಡರ್‌ ಲಿಯಾಮ್‌ ಲಿವಿಂಗ್‌ಸ್ಟೋನ್‌, ಮಯಾಂಕ್‌ ಅಗರ್‌ವಾಲ್, 9 ಕೋಟಿ ರುಪಾಯಿಗೆ ಬಿಕರಿಯಾಗಿದ್ದ ಆಲ್ರೌಂಡರ್‌ ಶಾರುಖ್‌ ಖಾನ್‌ ಮೇಲೆ ಹೆಚ್ಚು ನಿರೀಕ್ಷೆ ಇರಿಸಿದೆ.

IPL 2022: ಮುಂಬೈ ಇಂಡಿಯನ್ಸ್‌ಗಿಂದು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ ಚಾಲೆಂಜ್

ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್‌ ತಂಡಗಳು ಒಟ್ಟು 28 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಪಂಜಾಬ್ ತಂಡವು ಕೊಂಚ ಮೇಲುಗೈ ಸಾಧಿಸಿದೆ. 28 ಪಂದ್ಯಗಳ ಪೈಕಿ ಪಂಜಾಬ್ ಕಿಂಗ್ಸ್ ತಂಡವು 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಆರ್‌ಸಿಬಿ ತಂಡವು 13 ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿದೆ.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ಅನುಜ್‌ ರಾವತ್‌, ವಿರಾಟ್‌ ಕೊಹ್ಲಿ, ಮಹಿಪಾಲ್‌ ಲೊಮ್ರಾರ್‌, ರುಥರ್‌ಫೋರ್ಡ್‌, ದಿನೇಶ್ ಕಾರ್ತಿಕ್‌, ವನಿಂದು ಹಸರಂಗ, ಡೇವಿಡ್‌ ವಿಲ್ಲಿ, ಹರ್ಷಲ್ ಪಟೇಲ್‌‌, ಶಾಬಾಜ್ ಅಹಮದ್‌, ಮೊಹಮ್ಮದ್ ಸಿರಾಜ್‌.

ಪಂಜಾಬ್‌ ಕಿಂಗ್ಸ್‌: ಶಿಖರ್ ಧವನ್‌, ಮಯಾಂಕ್ ಅಗರ್‌ವಾಲ್‌(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್‌, ಭನುಕ ರಾಜಪಕ್ಸ, ಶಾರುಖ್‌ ಖಾನ್‌, ಜಿತೇಶ್‌ ಶರ್ಮಾ, ಒಡೆಯನ್‌ ಸ್ಮಿತ್‌, ಸಂದೀಪ್ ಶರ್ಮಾ‌, ನೇಥನ್ ಎಲ್ಲೀಸ್‌, ರಾಹುಲ್‌ ಚಹರ್‌, ಅಶ್‌ರ್‍ದೀಪ್ ಸಿಂಗ್‌.

ಸ್ಥಳ: ನವಿ ಮುಂಬೈ ಡಿ.ವೈ.ಪಾಟೀಲ್‌ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL Mini Auction 2026: 1355 ಆಟಗಾರರಲ್ಲಿ 350 ಪ್ಲೇಯರ್ಸ್ ಶಾರ್ಟ್‌ಲಿಸ್ಟ್! ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್
ಸಡನ್ನಾಗಿ ಸೋಶಿಯಲ್‌ ಮೀಡಿಯಾದಲ್ಲಿ ಸನ್ನಿ ಲಿಯೋನ್‌ ಫೋಟೋ ಹಂಚಿಕೊಂಡ ಅಶ್ವಿನ್‌, ಇದಕ್ಕಿದೆ ಐಪಿಎಲ್ ಲಿಂಕ್‌!