ಕೊನೆಗೂ ಆರ್‌ಸಿಬಿ ಅಭಿಮಾನಿಗಳ ಬಹುದಿನಗಳ ಕನಸು ನನಸಾಗಿದೆ. ಆರ್‌ಸಿಬಿಯ ಹೆಸರಲ್ಲಿದ್ದ ಬ್ಯಾಂಗಲೋರ್ ಅನ್ನು ಫ್ರಾಂಚೈಸಿ ಅಧಿಕೃತವಾಗಿ ಬದಲಾಯಿಸಿದ್ದು, ಇನ್ನು ಮುಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಕರೆಸಿಕೊಳ್ಳಲಿದೆ.
ಬೆಂಗಳೂರು (ಮಾ.19): ಬ್ಯಾಂಗಲೂರ್ ಅನ್ನೋದು ನಮ್ಮ ಹೆಸರಲ್ಲ. ಬೆಂಗಳೂರು ಎಂದಿದ್ದರೆ ಚೆನ್ನ ಎಂದು ಆರ್‌ಸಿಬಿ ಫ್ರಾಂಚೈಸಿಗಳಿಗೆ ಅಭಿಮಾನಿಗಳು ಎಷ್ಟೋ ವರ್ಷದಿಂದ ಹೇಳುತ್ತಿದ್ದರು. ಕೊನೆಗೂ ಆರ್‌ಸಿಬಿಯ ಮಾಲೀಕರು ಅಭಿಮಾನಿಗಳ ಒತ್ತಾಸೆಗೆ ಮಣಿದಿದ್ದಾರೆ. 2008ರಿಂದಲೂ ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್ ಎಂದೇ ಕರೆಸಿಕೊಳ್ಳುತ್ತಿದ್ದ ಆರ್‌ಸಿಬಿ ಫ್ರಾಂಚೈಸಿ ತನ್ನ ಹೆಸರಿನ ಕೊನೆಯಲ್ಲಿದ್ದ ಬ್ಯಾಂಗಲೂರ್ ಅನ್ನು ಬೆಂಗಳೂರು ಆಗಿ ಅಧಿಕೃತವಾಗಿ ಬದಲಾಯಿಸಿದೆ. ಮಂಗಳವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಸ್ವತಃ ಈ ಬದಲಾವಣೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಈ ಹಂತದಲ್ಲಿ ಸ್ವತಃ ವಿರಾಟ್ ಕೊಹ್ಲಿ ಕನ್ನಡದಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು. ಇಷ್ಟು ವರ್ಷಗಳಿಂದ ವಿರಾಟ್ ಕೊಹ್ಲಿ 'ಈ ಸಲ ಕಪ್ ನಮ್ದೆ' ಎನ್ನುವ ಸಾಲುಗಳನ್ನೇ ವಿರಾಟ್ ಅವರ ಕನ್ನಡ ಪ್ರೇಮ ಎನ್ನುವಂತೆ ಬಳಸಲಾಗುತ್ತಿತ್ತು. ಆದರೆ, ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ 'ಇದು ಆರ್‌ಸಿಬಿಯ ಹೊಸ ಅಧ್ಯಾಯ' ಎಂದು ಹೇಳಿದಾಗ ಇಡೀ ಸ್ಟೇಡಿಯಂನಲ್ಲಿ ಕರತಾಡನ ಮೂಡಿತು.
ಟ್ರೋಫಿ ಗೆದ್ದ ಮಾತ್ರಕ್ಕೆ, ನಾನು ಕೊಹ್ಲಿಗೆ ಸಮನಲ್ಲ: ಸ್ಮೃತಿ ಮಂಧನಾ
ಜೆರ್ಸಿ ಅನಾವರಣ ಮಾಡುವ ಮುನ್ನ ಮಾತನಾಡಿದ ವಿರಾಟ್ ಕೊಹ್ಲಿ, ಈ ಹಂತದಲ್ಲಿ ಎಲ್ಲರಿಗೂ ನಾನು ತಿಳಿಸೋದೇನೆಂದರೆ, 'ಇದು ಆರ್‌ಸಿಬಿಯ ಹೊಸ ಅಧ್ಯಾಯ' ಎಂದು ಕನ್ನಡದಲ್ಲಿಯೇ ಹೇಳಿದರು. ಇನ್ನು ಆರ್‌ಸಿಬಿಯ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹೆಸರು ಬದಲಾವಣೆ ಆಗಿದ್ದನ್ನು ಖಚಿತಪಡಿಸಲಾಗಿದೆ. 'ನಾವು ಪ್ರೀತಿಸುವ ನಗರ, ನಾವು ಸ್ವೀಕರಿಸುವ ಪರಂಪರೆ, ಮತ್ತು ಇದು ನಮ್ಮ ಹೊಸ ಅಧ್ಯಾಯದ ಸಮಯ.ನಿಮಗೆ ಪ್ರಸ್ತುತ ಪಡಿಸುತ್ತಿದ್ದೇವೆ ROYAL CHALLENGERS BENGALURU, ನಿಮ್ಮ ತಂಡ, ನಿಮ್ಮ RCB' ಎಂದು ಬದಲಾದ ಲೋಗೋ ಜೊತೆ ಆರ್‌ಸಿಬಿಯ ಹೆಸರನ್ನು ಪ್ರಕಟಿಸಿದೆ.
ದುಬಾರಿ ಬೆಲೆಯ ಸನ್‌ಗ್ಲಾಸ್ ಧರಿಸಿ ಆರ್‌ಸಿಬಿ ಪ್ರ್ಯಾಕ್ಟೀಸ್‌ಗೆ ಬಂದ ಕಿಂಗ್ ಕೊಹ್ಲಿ!
ಆ ಬಳಿಕ ತಂಡದ ಹೊಸ ಜೆರ್ಸಿ ಕುರಿತಾಗಿ ಪೋಸ್ಟ್‌ಅನ್ನೂ ಮಾಡಲಾಗಿದೆ. 'ಆರ್‌ಸಿಬಿ ಅಂದರೆ ಕೆಂಪು. ಈಗ ನೀಲಿ ಬಣ್ಣ ಕೂಡ ಕಿಸ್ ಮಾಡಿದೆ. ನಾವು ನಮ್ಮ ಹೊಸ ಜೆರ್ಸಿ ಜೊತೆ ಸಿದ್ಧವಾಗಿದ್ದೇವೆ. ನಿಮಗಾಗಿ ಬೋಲ್ಡ್ ಆಟವಾಡಲು. 2024ರಲ್ಲಿ ಆರ್‌ಸಿಬಿಯ ಅಧಿಕೃತ ಜೆರ್ಸಿಯನ್ನು ನಿಮಗೆ ತೋರಿಸುತ್ತಿದ್ದೇವೆ. ಇದು ಚೆನ್ನಾಗಿದೆಯೇ? ಎಂದು ಪ್ರಶ್ನೆ ಮಾಡಿ ಟ್ವೀಟ್ ಮಾಡಿದೆ.
ಇದು ಯ ಹೊಸ ಅಧ್ಯಾಯ
This Is New Chapter Of RCB pic.twitter.com/s776dW8xDi