
ನವದೆಹಲಿ (ಜು.29) ಐಪಿಎಲ್ ಲೀಗ್ ಟೂರ್ನಿ ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಹಾಗೂ ಅತೀ ದೊಡ್ಡ ಕ್ರಿಕೆಟ್ ಟೂರ್ನಿ. ಅತೀ ಹೆಚ್ಚು ಹಣ, ವ್ಯವಹಾರ, ವ್ಯಾಲ್ಯೂ ಸೇರಿದಂತೆ ಎಲ್ಲವೂ ಐಪಿಎಲ್ ಟೂರ್ನಿಯಲ್ಲೇ ಗರಿಷ್ಠ. ಐಪಿಎಲ್ ಬ್ರ್ಯಾಂಡ್ ವಾಲ್ಯೂ ಪ್ರತಿ ವರ್ಷ ಹೆಚ್ಚಾಗುತ್ತಲೇ ಹೋಗಿದೆ. ಇದೀಗ ಐಪಿಎಲ್ ಬ್ರ್ಯಾಂಡ್ ವಾಲ್ಯೂ ಬರೋಬ್ಬರಿ 2 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. 2026ರ ಬ್ರ್ಯಾಂಡ್ ಮೌಲ್ಯಮಾಪನ ವರದಿಯ ಪ್ರಕಾರ, ಐಪಿಎಲ್‌ನ ಒಟ್ಟು ವ್ಯವಹಾರ ಮೌಲ್ಯವು ಬರೋಬ್ಬರಿ 20.6 ಬಿಲಿಯನ್ ಅಮೆರಿಕನ್ ಡಾಲರ್ ಎಂದಿದೆ.
ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಸತತ 2 ಪ್ರಶಸ್ತಿ ಗೆದ್ದು ಸಾಧನೆ ಮಾಡಿದೆ. ಆದರೆ ಆರ್‌ಸಿಬಿ ಪ್ರಶಸ್ತಿ ಗೆಲ್ಲುವ ಮೊದಲು ಅತೀ ಹೆಚ್ಚು ಬ್ರ್ಯಾಂಡ್ ವಾಲ್ಯೂ ಹೊಂದಿರುವ ಟಾಪ್ 5 ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಇದೀಗ 2025 ಹಾಗೂ 2026ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಾಗಿದೆ. ಆರ್‌ಸಿಬಿ ಇಗೀದ ಗರಿಷ್ಠ ಬ್ರ್ಯಾಂಡ್ ವಾಲ್ಯೂ ಹೊಂದಿದೆ ನಂ.1 ತಂಡ. ಈ ಬಾರಿ ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ 312 ಮಿಲಿಯನ್ ಅಮೆರಿಕನ್ ಡಾಲರ್‌ಗೆ ತಲುಪಿದೆ.
2026ರ ಐಪಿಎಲ್ ಟೂರ್ನಿ ಆರಂಭದಲ್ಲಿ ಆರ್‌ಸಿಬಿ ಫ್ರಾಂಚೈಸಿಯನ್ನು ಬಿರ್ಲಾ ಗ್ರೂಪ್, ಬೋಲ್ಟ್ ವೆಂಚರ್ಸ್ ಹಾಗೂ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ಖರೀದಿಸಿದೆ. ಬರೋಬ್ಬರಿ 16,600 ಕೋಟಿ ರೂಪಾಯಿಗೆ ಫ್ರಾಂಚೈಸಿಯನ್ನು ಖರೀದಿಸಿದೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಗರಿಷ್ಠ ಮೊತ್ತಕ್ಕೆ ಮಾರಾಟವಾದ ತಂಡ ಅನ್ನೋ ದಾಖಲೆಯನ್ನು ಆರ್‌ಸಿಬಿ ಬರೆದಿದೆ.
ಎಂಎಸ್ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ತಂಡ ಐಪಿಎಲ್ ಟೂರ್ನಿಯ ನಂ.1 ಬ್ರ್ಯಾಂಡ್ ವಾಲ್ಯೂ ತಂಡವಾಗಿ ಹೊರಹೊಮ್ಮಿತ್ತು. ಧೋನಿ ತಂಡದಲ್ಲಿದ್ದರೂ ದೂರ ಸರಿದಿದ್ದಾರೆ. ಇತ್ತ ಸಿಎಸ್‌ಕೆ ಪ್ರದರ್ಶನ ನೆಲಕ್ಕಚಿದೆ. ಇದರಿಂದ ಬ್ರ್ಯಾಂಡ್ ವ್ಯಾಲ್ಯೂ ಕುಸಿದಿದೆ. ಇದೀಗ ಕೆಕೆಆರ್ ತಂಡ ಸಿಎಸ್‌ಕೆಯನ್ನು ಹಿಂದಿಕ್ಕಿ ಬ್ರ್ಯಾಂಡ್ ವಾಲ್ಯೂವಿನಲ್ಲಿ 3ನೇ ಸ್ಥಾನಕ್ಕಿರೆದ. ಮೂರನೇ ಸ್ಥಾನದಲ್ಲಿದ್ದ ಸಿಎಸ್‌ಕೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಎರಡನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಸ್ಥಾನ ಪಡೆದಿದೆ. ಮುಂಬೈ ಇಂಡಿಯನ್ಸ್ 264 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯ ಹೊಂದಿದೆ.
ತಂತ್ರವಾಗಿ ಐಪಿಎಲ್ ಲೀಗ್‌ನ ಬ್ರ್ಯಾಂಡ್ ಮೌಲ್ಯವೂ ಶೇಕಡಾ 10.3ರಷ್ಟು ಏರಿಕೆಯಾಗಿದ್ದು, 4.3 ಬಿಲಿಯನ್ ಡಾಲರ್‌ಗೆ (ಅಂದಾಜು ₹36,000 ಕೋಟಿ) ತಲುಪಿದೆ. ಪಂದ್ಯವೊಂದಕ್ಕೆ ಗಳಿಸುವ ಆದಾಯದ ಆಧಾರದ ಮೇಲೆ ಜಾಗತಿಕವಾಗಿ ಅಮೆರಿಕದ ಎನ್‌ಎಫ್‌ಎಲ್ (NFL) ಲೀಗ್ ಬಿಟ್ಟರೆ ಐಪಿಎಲ್ ಎರಡನೇ ಅತ್ಯಂತ ಮೌಲ್ಯಯುತ ಕ್ರೀಡಾ ಲೀಗ್ ಆಗಿದೆ. ಇತ್ತೀಚೆಗೆ ಬ್ಲಾಕ್‌ಸ್ಟೋನ್ ಹಾಗೂ ಪೂನಾವಾಲಾ ಅವರಂತಹ ಪ್ರಮುಖ ಜಾಗತಿಕ ಹೂಡಿಕೆದಾರರು ಐಪಿಎಲ್ ಫ್ರಾಂಚೈಸಿಗಳ ಶೇರುಗಳನ್ನು ಭಾರಿ ಮೊತ್ತಕ್ಕೆ ಖರೀದಿಸಿರುವುದು ಈ ಭಾರಿ ಮೌಲ್ಯವರ್ಧನೆಗೆ ಪ್ರಮುಖ ಕಾರಣವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.