ಜಡೇಜಾ vs ಸ್ಟೋಕ್ಸ್ ಇಬ್ಬರಲ್ಲಿ ಯಾರು ಬೆಸ್ಟ್? ಕಪಿಲ್ ದೇವ್ ಹೇಳಿದ್ದೇನು?

Published : Jul 27, 2025, 02:54 PM IST
Ravindra Jadeja and Ben Stokes

ಸಾರಾಂಶ

ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್‌ಗಿಂತ ರವೀಂದ್ರ ಜಡೇಜಾ ಉತ್ತಮ ಆಲ್‌ರೌಂಡರ್ ಎಂದು ಮಾಜಿ ಭಾರತೀಯ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ. ಜಡೇಜಾ 3,697 ರನ್ ಮತ್ತು 326 ವಿಕೆಟ್ ಪಡೆದಿರುವುದನ್ನು ಸ್ಟೋಕ್ಸ್‌ ಅವರ ಸಾಧನೆಗೆ ಹೋಲಿಸಿದ್ದಾರೆ.  

ದೆಹಲಿ: ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರಿಗಿಂತ ರವೀಂದ್ರ ಜಡೇಜಾ ಉತ್ತಮ ಆಲ್ರೌಂಡರ್ ಎಂದು ಮಾಜಿ ಭಾರತೀಯ ನಾಯಕ ಕಪಿಲ್ ದೇವ್ ಹೇಳಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸ್ಟೋಕ್ಸ್ ಶತಕ ಬಾರಿಸಿದ್ದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 7000 ರನ್ ಮತ್ತು 200 ವಿಕೆಟ್ ಪಡೆದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಆದರೆ, ಸ್ಟೋಕ್ಸ್‌ಗಿಂತ ಜಡೇಜಾ ಮುಂದಿದ್ದಾರೆ ಎಂದು ಕಪಿಲ್ ದೇವ್ ಹೇಳಿದ್ದಾರೆ. ಜಡೇಜಾ 3,697 ರನ್ ಮತ್ತು 326 ವಿಕೆಟ್ ಪಡೆದಿದ್ದಾರೆ. “ನಾನು ಹೋಲಿಕೆ ಮಾಡಲು ಇಷ್ಟಪಡುವುದಿಲ್ಲ. ಸ್ಟೋಕ್ಸ್ ಉತ್ತಮ ಆಲ್‌ರೌಂಡರ್, ಆದರೆ ಜಡೇಜಾ ಇನ್ನೂ ಮುಂದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ತುಂಬಾ ಚೆನ್ನಾಗಿ ಆಡ್ತಾರೆ” ಎಂದು ಮಾಜಿ ಆಲ್‌ರೌಂಡರ್ ಕಪಿಲ್ ದೇವ್ ಹೇಳಿದ್ದಾರೆ.

 

ಸ್ಟೋಕ್ಸ್‌ ಅಬ್ಬರ:

ಶನಿವಾರ ಮ್ಯಾಂಚೆಸ್ಟರ್‌ ಕ್ರೀಡಾಂಗಣ ಸ್ಟೋಕ್ಸ್‌ ಅಬ್ಬರಕ್ಕೆ ಸಾಕ್ಷಿಯಾಯಿತು. 77 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ಸ್ಟೋಕ್ಸ್‌ ಟೆಸ್ಟ್‌ನಲ್ಲಿ 14ನೇ ಶತಕ ಪೂರ್ಣಗೊಳಿಸಿದರು. ಅವರು 141 ರನ್‌ ಗಳಿಸಿ ಜಡೇಜಾಗೆ ವಿಕೆಟ್‌ ಒಪ್ಪಿಸಿದರು.

7000 ರನ್‌, 200 ವಿಕೆಟ್‌: ಸ್ಟೋಕ್ಸ್‌ 3ನೇ ಕ್ರಿಕೆಟಿಗ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಬೆನ್‌ ಸ್ಟೋಕ್ಸ್‌ 7000 ರನ್‌ ಹಾಗೂ 200 ವಿಕೆಟ್‌ ಸಾಧನೆ ಮಾಡಿದ್ದಾರೆ. ಈ ಮೈಲುಗಲ್ಲು ತಲುಪಿದ 3ನೇ ಆಟಗಾರ. ವಿಂಡೀಸ್‌ನ ಗ್ಯಾರಿ ಸೋಬರ್ಸ್‌(8032 ರನ್‌, 235 ವಿಕೆಟ್), ದಕ್ಷಿಣ ಆಫ್ರಿಕಾದ ಕ್ಯಾಲಿಸ್‌ (13289 ರನ್‌, 292 ವಿಕೆಟ್‌) ಇತರ ಸಾಧಕರು.

ಬೆನ್ ಸ್ಟೋಕ್ಸ್ ಇದೀಗ ಕಳೆದ 42 ವರ್ಷಗಳಲ್ಲಿ ಒಂದೇ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಹಾಗೂ 100+ ರನ್ ಬಾರಿಸಿದ ಮೊದಲ ಕ್ಯಾಪ್ಟನ್ ಎನ್ನುವ ಹಿರಿಮೆಗೂ ಇದೀಗ ಇಂಗ್ಲೆಂಡ್ ಕ್ಯಾಪ್ಟನ್ ಪಾತ್ರರಾಗಿದ್ದಾರೆ.

ಭಾರತೀಯ ನಾಯಕ ಶುಭಮನ್ ಗಿಲ್ ಬಗ್ಗೆಯೂ ಕಪಿಲ್ ಮಾತನಾಡಿದ್ದಾರೆ. “ಗಿಲ್ ತಪ್ಪುಗಳನ್ನು ಮಾಡ್ತಾರೆ, ಆದರೆ ಅವುಗಳಿಂದ ಕಲಿಯುತ್ತಾರೆ. ಅವರಿಗೆ ಸಮಯ ಕೊಡಬೇಕು. ಇದು ಗಿಲ್‌ರ ಮೊದಲ ಸರಣಿ. ಅವರು ತಪ್ಪುಗಳನ್ನು ಮಾಡ್ತಾರೆ, ಕಾಲಾನಂತರದಲ್ಲಿ ಬಹಳಷ್ಟು ಸಕಾರಾತ್ಮಕತೆ ಇರುತ್ತದೆ. ಭಾರತದ ತಂಡ ಯುವ ತಂಡ. ಅವರಿಗೆ ಆಡಲು ಅವಕಾಶ ಸಿಗ್ತಿದೆ. ಮುಂದಿನ ದಿನಗಳಲ್ಲಿ ಈ ಆಟಗಾರರು ಗೆಲ್ತಾರೆ. ಪ್ರಪಂಚದ ಯಾವುದೇ ಹೊಸ ತಂಡಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ” ಎಂದು ಕಪಿಲ್ ಹೇಳಿದ್ದಾರೆ. ಶುಭಮನ್ ಗಿಲ್ ನಾಯಕತ್ವವನ್ನು ಅನೇಕ ಅಭಿಮಾನಿಗಳು ಪ್ರಶ್ನಿಸಿದ್ದರು, ನಾಯಕನ ಬೌಲಿಂಗ್ ಬದಲಾವಣೆಗಳು ಸಾಕಾಗುವುದಿಲ್ಲ ಎಂಬುದು ವಾದ. ಇದಕ್ಕೆ ಪ್ರತಿಕ್ರಿಯೆಯಾಗಿ ಕಪಿಲ್ ಈ ವಿಷಯವನ್ನು ಹೇಳಿದರು.

ಮ್ಯಾಂಚೆಸ್ಟರ್ ಟೆಸ್ಟ್ ರೋಚಕ ಅಂತ್ಯದತ್ತ ಸಾಗುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 311 ರನ್‌ಗಳ ಹಿನ್ನಡೆ ಅನುಭವಿಸಿದ ಭಾರತ ನಾಲ್ಕನೇ ದಿನದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದೆ. ಇನ್ನೂ 137 ರನ್‌ಗಳ ಹಿನ್ನಡೆಯಲ್ಲಿದೆ. ಭಾರತದ ಮೊದಲ ಇನ್ನಿಂಗ್ಸ್‌ನ 358 ರನ್‌ಗಳಿಗೆ ಪ್ರತಿಯಾಗಿ ಇಂಗ್ಲೆಂಡ್ 669 ರನ್ ಗಳಿಸಿತು. ಜೋ ರೂಟ್ (150) ಜೊತೆಗೆ ಬೆನ್ ಸ್ಟೋಕ್ಸ್ (141) ಇಂಗ್ಲೆಂಡ್ ಪರ ಶತಕ ಬಾರಿಸಿದರು. ಭಾರತದ ಪರ ರವೀಂದ್ರ ಜಡೇಜಾ ನಾಲ್ಕು ವಿಕೆಟ್ ಪಡೆದರು.

ಇದೀಗ ಕೊನೆಯ ದಿನದಾಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಭಾರತ ಸೋಲು ತಪ್ಪಿಸಿಕೊಳ್ಳಲು ಹೋರಾಡುತ್ತಿದ್ದರೇ, ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌