Ranji Trophy ಶ್ರೇಯಸ್ ಗೋಪಾಲ್ ಭರ್ಜರಿ ಶತಕ, ಕರ್ನಾಟಕ ಬೃಹತ್ ಮೊತ್ತ

Published : Feb 02, 2023, 08:38 AM IST
Ranji Trophy ಶ್ರೇಯಸ್ ಗೋಪಾಲ್ ಭರ್ಜರಿ ಶತಕ, ಕರ್ನಾಟಕ ಬೃಹತ್ ಮೊತ್ತ

ಸಾರಾಂಶ

ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕಕ್ಕೆ ಮೊದಲ ಇನಿಂಗ್ಸ್‌ ಮುನ್ನಡೆ ಉತ್ತರಾಖಂಡ್ ಎದುರು ಅಜೇಯ ಶತಕ ಸಿಡಿಸಿ ಮಿಂಚಿದ ಶ್ರೇಯಸ್ ಗೋಪಾಲ್ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ 358 ರನ್‌ ಮುನ್ನಡೆ

ಬೆಂಗಳೂರು(ಫೆ.02) ರಣಜಿ ಟ್ರೋಫಿ ಕ್ರಿಕೆಟ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ಮೊದಲ ದಿನವೇ ಮುನ್ನಡೆ ಪಡೆದಿದ್ದ ಕರ್ನಾಟಕ ಬೃಹತ್‌ ಮೊತ್ತ ಕಲೆಹಾಕಿದ್ದು, ಇನ್ನಿಂಗ್‌್ಸ ಗೆಲುವಿನತ್ತ ದಾಪುಗಾಲಿಟ್ಟಿದೆ. 2ನೇ ದಿನದಂತ್ಯಕ್ಕೆ ರಾಜ್ಯ ತಂಡ 5 ವಿಕೆಟ್‌ಗೆ 474 ರನ್‌ ಗಳಿಸಿದ್ದು ಬರೋಬ್ಬರಿ 358 ರನ್‌ ಮುನ್ನಡೆಯಲ್ಲಿದೆ.

ಮಂಗಳವಾರ ವಿಕೆಟ್‌ ನಷ್ಟವಿಲ್ಲದೇ 123 ರನ್‌ ಗಳಿಸಿದ್ದ ಕರ್ನಾಟಕ ಮತ್ತೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿತು. ಸಮಥ್‌ರ್‍(82), ಮಯಾಂಕ್‌(83), ದೇವದತ್‌ ಪಡಿಕ್ಕಲ್‌(69), ನಿಕಿನ್‌ ಜೋಸ್‌(62) ತಲಾ ಅರ್ಧಶತಕದ ಕೊಡುಗೆ ನೀಡಿದರೆ, ರಣಜಿಯಲ್ಲಿ 5ನೇ ಶತಕ ಪೂರ್ತಿಗೊಳಿಸಿದ ಶ್ರೇಯಸ್‌ ಗೋಪಾಲ್‌(103), ಬಿ.ಆರ್‌.ಶರತ್‌(23) ಜೊತೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ರಾಜ್ಯ ತಂಡ 3ನೇ ದಿನ ಮತ್ತಷ್ಟುರನ್‌ ಸೇರಿಸಿ ಉತ್ತರಾಖಂಡವನ್ನು ಬೇಗನೇ ಆಲೌಟ್‌ ಮಾಡುವ ಗುರಿ ಇಟ್ಟುಕೊಂಡಿದೆ.

ಸ್ಕೋರ್‌: ಉತ್ತರಾಖಂಡ 116/10,
ಕರ್ನಾಟಕ 474/5 
(ಶ್ರೇಯಸ್‌ 103*, ಮಯಾಂಕ್‌ 83, ಸಮರ್ಥ್ 82, ಮಯಾಂಕ್‌ ಮಿಶ್ರಾ 3-98)

ಕೈ ಮುರಿದರೂ ವಿಹಾರಿ ಬ್ಯಾಟಿಂಗ್‌

ಮಧ್ಯಪ್ರದೇಶ ವಿರುದ್ಧ ಆಂಧ್ರ ನಾಯಕ ಹನುಮ ವಿಹಾರಿ(27 ರನ್‌) ಮೊದಲ ದಿನ ಕೈ ಮುರಿತಕ್ಕೊಳಗಾಗಿದ್ದರು. ಆದರೂ 2ನೇ ದಿನ ತಂಡ 9 ವಿಕೆಟ್‌ ಕಳೆದುಕೊಂಡಾಗ ಕ್ರೀಸ್‌ಗೆ ಬಂದು ಎಡಗೈನಲ್ಲೇ ಬ್ಯಾಟ್‌ ಮಾಡಿ ಗಮನ ಸೆಳೆದರು. ಆಂಧ್ರ 379ಕ್ಕೆ ಆಲೌಟಾಯಿತು. ಮಧ್ಯಪ್ರದೇಶ 4ಕ್ಕೆ 144 ರನ್‌ ಗಳಿಸಿದೆ.

ಪಂಜಾಬ್‌, ಬಂಗಾಳ ಲೀಡ್‌

ಮತ್ತೊಂದು ಕ್ವಾರ್ಟರ್‌ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಪಂಜಾಬ್‌ ಇನ್ನಿಂಗ್‌್ಸ ಮುನ್ನಡೆ ಪಡೆದಿದೆ. ಸೌರಾಷ್ಟ್ರ 303ಕ್ಕೆ ಆಲೌಟಾಗಿದ್ದರೆ, ಪಂಜಾಬ್‌ 327/5 ಗಳಿಸಿದೆ. ಜಾರ್ಖಂಡ್‌ ವಿರುದ್ಧ ಬಂಗಾಳ ಕೂಡಾ ಮುನ್ನಡೆ ಸಾಧಿಸಿತು. ಜಾರ್ಖಂಡ್‌ 173ಕ್ಕೆ ಆಲೌಟಾಗಿತ್ತು. ಬಂಗಾಳ 5ಕ್ಕೆ 238 ರನ್‌ ಗಳಿಸಿದೆ.

ವನಿತಾ ಏಕದಿನ: ಕ್ವಾರ್ಟರ್‌ ಪ್ರವೇಶಿಸಿದ ಕರ್ನಾಟಕ

ರಾಂಚಿ: ರಾಷ್ಟ್ರೀಯ ಹಿರಿಯ ಮಹಿಳಾ ಏಕದಿನ ಟೂರ್ನಿಯ ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕ ಪ್ರವೇಶಿಸಿದೆ. ಬುಧವಾರ ನಡೆದ ಪ್ರಿ ಕ್ವಾರ್ಟರ್‌ನಲ್ಲಿ ರಾಜ್ಯ ತಂಡ ಮಧ್ಯಪ್ರದೇಶ ವಿರುದ್ಧ 7 ವಿಕೆಟ್‌ ಜಯ ಸಾಧಿಸಿತು. ಮಧ್ಯಪ್ರದೇಶ 9 ವಿಕೆಟ್‌ಗೆ 166 ರನ್‌ ಗಳಿಸಿತು. ಕರ್ನಾಟಕ 36.3 ಓವರಲ್ಲಿ 3 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ನಾಯಕಿ ವೇದಾ ಔಟಾಗದೆ 44, ಶಿಶಿರಾ 41 ರನ್‌ ಗಳಿಸಿದರು. ಕ್ವಾರ್ಟರಲ್ಲಿ ರಾಜ್ಯಕ್ಕೆ ದೆಹಲಿ ಎದುರಾಗಲಿದೆ.

ಭಾರತದ ದಾಳಿಗೆ ನ್ಯೂಜಿಲೆಂಡ್ ಧೂಳೀಪಟ, ಭರ್ಜರಿ ಗೆಲುವಿನೊಂದಿಗೆ ಹಾರ್ದಿಕ್ ಸೈನ್ಯಕ್ಕೆ ಟಿ20 ಕಿರೀಟ!

ನಂ.1 ಸ್ಥಾನದಲ್ಲೇ ಸೂರ್ಯಕುಮಾರ್ ಯಾದವ್

ದುಬೈ: ಭಾರತದ ತಾರಾ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಟಿ20 ರ‍್ಯಾಂಕಿಂಗ್‌‌ನಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಸದ್ಯ ಅವರು 910 ರೇಟಿಂಗ್‌ ಅಂಕಗಳನ್ನು ಹೊಂದಿದ್ದು, ಭಾರತೀಯರ ಪೈಕಿ ಈವರೆಗಿನ ಗರಿಷ್ಠ ರೇಟಿಂಗ್‌ ಅಂಕ ಎನಿಸಿಕೊಂಡಿದೆ. ಈ ಮೊದಲು ವಿರಾಟ್‌ ಕೊಹ್ಲಿ 2014ರಲ್ಲಿ 897 ರೇಟಿಂಗ್‌ ಅಂಕ ಗಳಿಸಿದ್ದರು. 2020ರಲ್ಲಿ 915 ರೇಟಿಂಗ್‌ ಹೊಂದಿದ್ದ ಇಂಗ್ಲೆಂಡ್‌ನ ಡೇವಿಡ್‌ ಮಲಾನ್‌ ಈ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದಾರೆ.

ಮೊದಲ ಆಸೀಸ್‌ ಟೆಸ್ಟ್‌ಗೆ ಶ್ರೇಯಸ್‌ ಗೈರು: ವರದಿ

ಬೆಂಗಳೂರು: ಬೆನ್ನು ನೋವಿನಿಂದ ಬಳಲುತ್ತಿರುವ ತಾರಾ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಅಸ್ಪ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ಗೆ ಗೈರಾಗಲಿದ್ದಾರೆ ಎಂದು ವರದಿಯಾಗಿದೆ. ಫಿಟ್ನೆಸ್‌ ಪರೀಕ್ಷೆಗಾಗಿ ಬೆಂಗಳೂರಿನ ಎನ್‌ಸಿಎಗೆ ಆಗಮಿಸಿದ ಶ್ರೇಯಸ್‌ಗೆ ಸಂಪೂರ್ಣ ಚೇತರಿಕೆಗಾಗಿ ಕೆಲ ದಿನ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಶ್ರೇಯಸ್‌ ಗೈರಾದರೆ ಸೂರ‍್ಯಕುಮಾರ್‌ ಯಾದವ್‌ ಟೆಸ್ಟ್‌ ಪಾದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಶ್ರೇಯಸ್‌ 2ನೇ ಟೆಸ್ಟ್‌ಗೆ ಫಿಟ್‌ ಆಗಲಿದ್ದಾರೆ ಎಂದು ವರದಿಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!