Ranji Trophy ಕುಸಿದ ಕರ್ನಾಟಕಕ್ಕೆ ಶರತ್ ಆಸರೆ..!

Published : Dec 15, 2022, 09:32 AM IST
Ranji Trophy ಕುಸಿದ ಕರ್ನಾಟಕಕ್ಕೆ ಶರತ್ ಆಸರೆ..!

ಸಾರಾಂಶ

ರಣಜಿ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಕರ್ನಾಟಕ-ಸರ್ವೀಸಸ್ ಮುಖಾಮುಖಿ 304 ರನ್‌ ಬಾರಿಸಿ ಆಲೌಟ್ ಆದ ಕರ್ನಾಟಕ ಕ್ರಿಕೆಟ್ ತಂಡ 115 ಎಸೆತಗಳಲ್ಲಿ 77 ರನ್‌ ಸಿಡಿಸಿ ಮಿಂಚಿದ ಬಿ ಆರ್ ಶರತ್

ಬೆಂಗಳೂರು(ಡಿ.15): ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲೆ ಸರ್ವೀಸಸ್‌ ವಿರುದ್ಧ ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಕರ್ನಾಟಕ ಬಳಿಕ ಪುಟಿದೆದ್ದಿದ್ದು, ದೊಡ್ಡ ಮೊತ್ತ ಗಳಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ದಿನ 6 ವಿಕೆಟ್‌ಗೆ 148 ರನ್‌ ಗಳಿಸಿದ್ದ ರಾಜ್ಯ ತಂಡ ಬುಧವಾರ 304ಕ್ಕೆ ಆಲೌಟಾಯಿತು.

ಮೊದಲ ದಿನ ಕ್ರೀಸ್‌ ಕಾಯ್ದುಕೊಂಡಿದ್ದ ಶರತ್‌ ಹಾಗೂ ಕೆ.ಗೌತಮ್‌ 7ನೇ ವಿಕೆಟ್‌ಗೆ 90 ರನ್‌ ಜೊತೆಯಾಟವಾಡಿದರು. 52 ಎಸೆತಗಳಲ್ಲಿ 48 ರನ್‌ ಸಿಡಿಸಿದ ಗೌತಮ್‌ ಅರ್ಧಶತಕದ ಅಂಚಿನಲ್ಲಿ ಎಡವಿದರೆ, ಶರತ್‌ 115 ಎಸೆತಗಳಲ್ಲಿ 77 ರನ್‌ ಸಿಡಿಸಿ ನಿರ್ಗಮಿಸಿದರು. ಇವರಿಬ್ಬರಿಗೂ ಪುಲ್ಕಿತ್‌ ನಾರಂಗ್‌ ಪೆವಿಲಿಯನ್‌ ಹಾದಿ ತೋರಿಸಿದರು. ಬಳಿಕ ರೋನಿತ್‌ ಮೋರೆ(26), ವಿಧ್ವತ್‌ ಕಾವೇರಪ್ಪ(13), ವೈಶಾಕ್‌(10) ತಂಡದ ಮೊತ್ತ 300ರ ಗಡಿ ದಾಟಲು ನೆರವಾದರು. ದಿವೇಶ್‌ 5, ನಾರಂಗ್‌ 3 ವಿಕೆಟ್‌ ಪಡೆದರು.

ಸರ್ವೀಸಸ್‌ಗೆ ಶಾಕ್‌:

ಬಳಿಕ ಬ್ಯಾಟಿಂಗ್‌ಗೆ ಇಳಿದ ಸರ್ವೀಸಸ್‌ 2ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 96 ರನ್‌ ಕಲೆ ಹಾಕಿದ್ದು, ಇನ್ನೂ 208 ರನ್‌ ಹಿನ್ನಡೆಯಲ್ಲಿದೆ. ಶುಭಂ ರೊಹಿಲ್ಲಾ 8 ರನ್‌ಗೆ ಔಟಾದರೆ, ರಾಹುಲ್‌ ಸಿಂಗ್‌ ಹಾಗೂ ಅನ್ಶುಲ್‌ ಗುಪ್ತಾ ಇಬ್ಬರೂ ಶೂನ್ಯ ಸುತ್ತಿದರು. ನಾಯಕ ರಜತ್‌ ಪಲಿವಾಲ್‌(42) ಹಾಗೂ ರವಿ ಚೌಹಾಣ್‌(39) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ವಿಧ್ವತ್‌ ಕಾವೇರಪ್ಪ 29 ರನ್‌ಗೆ 3 ವಿಕೆಟ್‌ ಕಿತ್ತರು.

ಸ್ಕೋರ್‌: 
ಕರ್ನಾಟಕ 304/10 (ಮೊದಲ ದಿನ 148/6) (ಶರತ್‌ 77, ಗೌತಮ್‌ 48, ದಿವೇಶ್‌ 5-86), 
ಸರ್ವೀಸಸ್‌ 96/4(ರಜತ್‌ 42*, ರವಿ 39*, ವಿಧ್ವತ್‌ 3-29)

ಅಪ್ಪನ ಹಾದಿಯಲ್ಲಿ ಅರ್ಜುನ್‌ ತೆಂಡುಲ್ಕರ್!

ಪಣಜಿ: ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಪುತ್ರ ಅರ್ಜುನ್‌ ತೆಂಡುಲ್ಕರ್‌ ರಣಜಿ ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ವರ್ಷ ಗೋವಾ ಪರ ಆಡುತ್ತಿರುವ ಅರ್ಜುನ್‌, ಬುಧವಾರ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದರು. 7ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅವರು 2 ಸಿಕ್ಸರ್‌, 16 ಬೌಂಡರಿ ಒಳಗೊಂಡ 120 ರನ್‌ ಸಿಡಿಸಿದರು. 1988ರಲ್ಲಿ ಸಚಿನ್‌ ಕೂಡಾ ತಮ್ಮ ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ಎಡಗೈ ವೇಗಿಯಾಗಿದ್ದರೂ ಅರ್ಜುನ್‌ ಪಾದಾರ್ಪಣೆಯಲ್ಲೇ ಶತಕ ಸಿಡಿಸುವ ಮೂಲಕ ತಂದೆಯಂತೆಯೇ ಬ್ಯಾಟಿಂಗ್‌ನಲ್ಲಿ ಸದ್ದು ಮಾಡುವ ಮುನ್ಸೂಚನೆ ನೀಡಿದ್ದಾರೆ.

Ind vs Ban: ಶತಕದ ಹೊಸ್ತಿಲಲ್ಲಿ ಎಡವಿದ ಪೂಜಾರ, ಬೃಹತ್ ಮೊತ್ತದತ್ತ ಟೀಂ ಇಂಡಿಯಾ

ಕಳೆದ ಆವೃತ್ತಿಯವರೆಗೆ ಮುಂಬೈ ತಂಡದಲ್ಲಿದ್ದ ಅರ್ಜುನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಮುಂಬೈ ತಂಡ ತೊರೆದಿದ್ದ ಅರ್ಜುನ್‌ ಗೋವಾ ಪರ ರಣಜಿ ಆಡಲು ನಿರ್ಧರಿಸಿದ್ದರು.

ಪಾದಾರ್ಪಣೆಯಲ್ಲೇ 9 ವಿಕೆಟ್‌!

16 ವರ್ಷದ ಮಣಿಪುರ ವೇಗಿ ಫೀರೋಯಿಜಾಂ ಸಿಂಗ್‌ ಪ್ರಥಮ ದರ್ಜೆ ಪಾದಾರ್ಪಣೆಯಲ್ಲೇ ಇನ್ನಿಂಗ್‌್ಸನಲ್ಲಿ 9 ವಿಕೆಟ್‌ ಕಿತ್ತ ಭಾರತದ 4ನೇ, ವಿಶ್ವದ 10ನೇ ಬೌಲರ್‌ ಎನಿಸಿಕೊಂಡರು. ಅವರು ಸಿಕ್ಕಿಂ ವಿರುದ್ಧ 22 ಓವರಲ್ಲಿ 69 ರನ್‌ಗೆ 9 ವಿಕೆಟ್‌ ಪಡೆದರು. ಈ ಮೊದಲು ಭಾರತದ ವಸಂತ್‌ ರಂಜಾನೆ, ಅಮರ್‌ಜಿತ್‌ ಸಿಂಗ್‌, ಸಂಜಯ್‌ ಯಾದವ್‌ ಈ ಸಾಧನೆ ಮಾಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL Mini Auction: ಎಲ್ಲಾ ಐಪಿಎಲ್ ತಂಡಗಳ ಅವಶ್ಯಕತೆ ಏನು? ಯಾರ ಬಳಿ ಎಷ್ಟಿದೆ ಹಣ?
Good News for RCB Fans: ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ? KSCA-BCCI ಮಾತುಕತೆ