Ranji Trophy: ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕಕ್ಕೆ ಉತ್ತರಾಖಂಡ ಸವಾಲು

By Naveen KodaseFirst Published Jan 28, 2023, 10:02 AM IST
Highlights

ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್ ವೇಳಾಪಟ್ಟಿ ಪ್ರಕಟ
ಕರ್ನಾಟಕ ತಂಡಕ್ಕೆ ಸವಾಲೊಡ್ಡಲಿದೆ ಉತ್ತರಾಖಂಡ
ಕರ್ನಾಟಕ-ಉತ್ತರಖಂಡ ನಡುವಿನ ಕಾದಾಟಕ್ಕೆ ಬೆಂಗಳೂರು ಆತಿಥ್ಯ

ಬೆಂಗಳೂರು(ಜ.28): 2022-23ನೇ ಸಾಲಿನ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ವೇಳಾಪಟ್ಟಿಅಂತಿಮಗೊಂಡಿದ್ದು, ‘ಸಿ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಕರ್ನಾಟಕಕ್ಕೆ ‘ಎ’ ಗುಂಪಿನಲ್ಲಿ 2ನೇ ಸ್ಥಾನ ಪಡೆದ ಉತ್ತರಾಖಂಡ ಎದುರಾಗಲಿದೆ. ಜ.31ರಿಂದ ಆರಂಭಗೊಳ್ಳಲಿರುವ 5 ದಿನಗಳ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. 

‘ಎ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಬಂಗಾಳಕ್ಕೆ ‘ಸಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದ ಜಾರ್ಖಂಡ್‌, ‘ಬಿ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಸೌರಾಷ್ಟ್ರಕ್ಕೆ ‘ಡಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದ ಪಂಜಾಬ್‌, ‘ಡಿ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಹಾಲಿ ಚಾಂಪಿಯನ್‌ ಮಧ್ಯಪ್ರದೇಶಕ್ಕೆ ‘ಬಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದ ಆಂಧ್ರಪ್ರದೇಶ ಎದುರಾಗಲಿದೆ.

ಕ್ವಾರ್ಟರ್‌ಫೈನಲ್‌ ವೇಳಾಪಟ್ಟಿ(ಜ.31ರಿಂದ)

ಪಂದ್ಯ ಸ್ಥಳ

ಬಂಗಾಳ-ಜಾರ್ಖಂಡ್‌: ಕೋಲ್ಕತಾ

ಸೌರಾಷ್ಟ್ರ-ಪಂಜಾಬ್‌: ರಾಜ್‌ಕೋಟ್‌

ಕರ್ನಾಟಕ-ಉತ್ತರಾಖಂಡ: ಬೆಂಗಳೂರು

ಮಧ್ಯಪ್ರದೇಶ-ಆಂಧ್ರ: ಇಂದೋರ್‌

ಆಂಧ್ರಕ್ಕೆ ಲಕ್‌: ಮುಂಬೈ, ಮಹಾ ಹಿಂದಿಕ್ಕಿ ಕ್ವಾರ್ಟರ್‌ಗೆ!

ಕ್ರಿಕೆಟ್‌ ಏಕೆ ಅನಿಶ್ಚಿತತೆಯ ಆಟ ಎಂದು ಕರೆಸಿಕೊಳ್ಳುತ್ತದೆ ಎನ್ನುವುದಕ್ಕೆ ಮತ್ತೊಂದು ಉತ್ತಮ ಉದಾಹರಣೆ ದಾಖಲಾಗಿದೆ. ‘ಬಿ’ ಗುಂಪಿನಿಂದ ಕ್ವಾರ್ಟರ್‌ಗೇರಲು ಆಂಧ್ರಕ್ಕೆ ಕೊನೆ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಬೋನಸ್‌ ಅಂಕದ ಗೆಲುವು ಬೇಕಿತ್ತು. ಜೊತೆಗೆ ಮುಂಬೈ ಹಾಗೂ ಮಹಾರಾಷ್ಟ್ರ ನಡುವಿನ ಪಂದ್ಯದಲ್ಲಿ ಯಾರೂ ಮೊದಲ ಇನ್ನಿಂಗ್‌್ಸ ಮುನ್ನಡೆ ಪಡೆಯದೆ ಡ್ರಾ ಆಗಬೇಕಿತ್ತು. ಮೊದಲೇ ನಿಗದಿಯಾದಂತೆ ಆಂಧ್ರಕ್ಕೆ ಬೇಕಿದ್ದ ಫಲಿತಾಂಶವೇ ಹೊರಬಿತ್ತು. 

ಸರ್ಫರಾಜ್ ಖಾನ್‌ಗೆ ಯಾಕಿಲ್ಲ ಟೀಂ ಇಂಡಿಯಾದಲ್ಲಿ ಸ್ಥಾನ? ಕೊನೆಗೂ ಮೌನ ಮುರಿದ ಬಿಸಿಸಿಐ..!

ಅಸ್ಸಾಂ ವಿರುದ್ಧ ಆಂಧ್ರ ಇನ್ನಿಂಗ್‌್ಸ ಜಯ ಪಡೆಯಿತು. ಮಹಾರಾಷ್ಟ್ರ ಹಾಗೂ ಮುಂಬೈನ ಮೊದಲ ಇನ್ನಿಂಗ್‌್ಸ ಮೊತ್ತ(384 ರನ್‌) ಟೈ ಆಯಿತು. ಕೊನೆ ದಿನವಾದ ಶುಕ್ರವಾರ ಎರಡೂ ತಂಡಗಳು ಗೆಲುವಿನ ಹತ್ತಿರಕ್ಕೆ ಬಂದರೂ ಸಮಯದ ಅಭಾವದ ಕಾರಣ ಡ್ರಾಗೆ ತೃಪ್ತಿಪಡಬೇಕಾಯಿತು. ಗೆಲ್ಲಲು 253 ರನ್‌ ಗುರಿ ಬೆನ್ನತ್ತಿದ ಮುಂಬೈ 6 ವಿಕೆಟ್‌ಗೆ 195 ರನ್‌ ಗಳಿಸಿತು. ಮುಂಬೈ ಜಯದಿಂದ 58 ರನ್‌ ದೂರ ಉಳಿದರೆ, ಮಹಾರಾಷ್ಟ್ರ 4 ವಿಕೆಟ್‌ಗಳಿಂದ ಹಿಂದೆ ಬಿತ್ತು.

ರಾಷ್ಟ್ರೀಯ ವನಿತಾ ಏಕದಿನ: ಕರ್ನಾಟಕಕ್ಕೆ ದೊಡ್ಡ ಜಯ

ಮುಂಬೈ: ರಾಷ್ಟ್ರೀಯ ಹಿರಿಯ ಮಹಿಳೆಯರ ಏಕದಿನ ಟೂರ್ನಿಯಲ್ಲಿ ಕರ್ನಾಟಕ 4ನೇ ಜಯ ದಾಖಲಿಸಿದೆ. ಶುಕ್ರವಾರ ನಾಗಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ 111 ರನ್‌ಗಳ ಗೆಲುವು ಸಾಧಿಸಿ ‘ಬಿ’ ಗುಂಪಿನಲ್ಲಿ 3ನೇ ಸ್ಥಾನದಲ್ಲಿ ಮುಂದುವರಿದಿದೆ. ತಂಡ ನಾಕೌಟ್‌ ಹಂತಕ್ಕೆ ಪ್ರವೇಶಿಸಬೇಕಿದ್ದರೆ ಕೊನೆ ಪಂದ್ಯದಲ್ಲಿ ದೆಹಲಿ ವಿರುದ್ಧ ಗೆದ್ದು, ಚಂಡೀಗಢ ವಿರುದ್ಧ ಹರಾರ‍ಯಣ ಸೋಲಬೇಕಿದೆ. ಕರ್ನಾಟಕ 9 ವಿಕೆಟ್‌ಗೆ 186 ರನ್‌ ಗಳಿಸಿತು. ನಾಗಲ್ಯಾಂಡ್‌ 31 ಓವರಲ್ಲಿ 75ಕ್ಕೆ ಆಲೌಟ್‌ ಆಯಿತು. ರಾಮೇಶ್ವರಿ 4 ವಿಕೆಟ್‌ ಕಿತ್ತರು.

click me!