ರಣಜಿ ಟ್ರೋಫಿ: ಸಿದ್ಧಾರ್ಥ್, ಪವನ್‌ ಇನ್‌, ಕರುಣ್‌ ನಾಯರ್‌ ಔಟ್‌!

By Kannadaprabha NewsFirst Published Jan 8, 2020, 3:30 PM IST
Highlights

ರಣಜಿ ಟೂರ್ನಿಯಲ್ಲಿ ಬಲಿಷ್ಠ ಮುಂಬೈ ತಂಡವನ್ನು ಮಣಿಸಿ ಬೀಗುತ್ತಿರುವ ಕರ್ನಾಟಕ ಇದೀಗ ಸೌರಾಷ್ಟ್ರ ಸವಾಲನ್ನು ಎದುರಿಸಲು ಸಜ್ಜಾಗಿದೆ. ಜನವರಿ 11ರಂದು ಆರಂಭವಾಗಲಿರುವ ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ತಂಡ ಪ್ರಕಟವಾಗಿದೆ. ಯಾರಿಗೆ ಸ್ಥಾನ? ಮತ್ತೆ ಯಾರಿಗೆ ರೆಸ್ಟ್ ಸಿಕ್ಕಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

ಬೆಂಗಳೂರು[ಜ.08]: ಮುಂಬೈ ವಿರುದ್ಧದ ರಣಜಿ ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸಿ, ಜಯದ ಲಯಕ್ಕೆ ಮರಳಿರುವ ಕರ್ನಾಟಕ ತಂಡ ಜ.11ರಿಂದ ಕಳೆದ ಬಾರಿಯ ರನ್ನರ್‌-ಅಪ್‌ ಸೌರಾಷ್ಟ್ರ ತಂಡವನ್ನು ರಾಜ್‌ಕೋಟ್‌ನಲ್ಲಿ ಎದುರಿಸಲಿದೆ. 

Karnataka squad for the Ranji Trophy game against Saurashtra at Rajkot from 11 to 14th January. Karun Nair unavailable due to his marriage. Pavan Deshpande & KV Siddharth are back. pic.twitter.com/V43BR0E6DO

— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka)

ಮಂಗಳವಾರ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಸೌರಾಷ್ಟ್ರ ವಿರುದ್ಧದ ಪಂದ್ಯಕ್ಕೆ 15 ಸದಸ್ಯರ ತಂಡವನ್ನು ಪ್ರಕಟಿಸಿತು. ಮುಂದಿನ ವಾರ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಕರುಣ್‌ ನಾಯರ್‌ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಆಲ್ರೌಂಡರ್‌ ಶ್ರೇಯಸ್‌ ಗೋಪಾಲ್‌ ಹೆಗಲಿಗೆ ನಾಯಕತ್ವದ ಹೊಣೆ ಹೊರಿಸಲಾಗಿದೆ.

ರಣಜಿ ಟ್ರೋಫಿ: ಮುಂಬೈ ಎದುರು ಗೆದ್ದು ಬೀಗಿದ ಕರ್ನಾಟಕ

ಗಾಯದಿಂದಾಗಿ ಈ ಋುತುವಿನ ಮೊದಲ 4 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಬ್ಯಾಟ್ಸ್‌ಮನ್‌ ಕೆ.ವಿ. ಸಿದ್ಧಾರ್ಥ್ ತಂಡಕ್ಕೆ ವಾಪಸಾಗಿದ್ದಾರೆ. ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿದ್ದ ಆಲ್ರೌಂಡರ್‌ ಪವನ್‌ ದೇಶಪಾಂಡೆ ಸಹ ಗುಣಮುಖರಾಗಿದ್ದು, ತಂಡಕ್ಕೆ ಮರಳಿದ್ದಾರೆ.

4 ಪಂದ್ಯಗಳಲ್ಲಿ 2 ಗೆಲುವು, 2 ಡ್ರಾಗಳೊಂದಿಗೆ ಒಟ್ಟು 16 ಅಂಕಗಳನ್ನು ಗಳಿಸಿರುವ ಕರ್ನಾಟಕ, ಎಲೈಟ್‌ ‘ಎ’ ಹಾಗೂ ‘ಬಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದಿದೆ.

ತಂಡ: ಶ್ರೇಯಸ್‌ ಗೋಪಾಲ್‌ (ನಾಯಕ), ದೇವದತ್‌ ಪಡಿಕ್ಕಲ್‌, ಡಿ.ನಿಶ್ಚಲ್‌, ಆರ್‌.ಸಮಥ್‌ರ್‍, ಕೆ.ವಿ.ಸಿದ್ಧಾಥ್‌ರ್‍, ಬಿ.ಆರ್‌.ಶರತ್‌, ರೋಹನ್‌ ಕದಂ, ಪವನ್‌ ದೇಶಪಾಂಡೆ, ಜೆ.ಸುಚಿತ್‌, ಅಭಿಮನ್ಯು ಮಿಥುನ್‌, ವಿ.ಕೌಶಿಕ್‌, ಪ್ರತೀಕ್‌ ಜೈನ್‌, ರೋನಿತ್‌ ಮೋರೆ, ಶರತ್‌ ಶ್ರೀನಿವಾಸ್‌, ಪ್ರವೀಣ್‌ ದುಬೆ.

click me!