Ranji Trophy:ದೇಶಿ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಗೆ ಡೇಟ್ ಫಿಕ್ಸ್‌..!

By Suvarna News  |  First Published Feb 4, 2022, 11:18 AM IST

* ರಣಜಿ ಟ್ರೋಫಿ ಟೂರ್ನಿ ಆರಂಭಕ್ಕೆ ಕೊನೆಗೂ ಕೂಡಿಬಂತು ಕಾಲ

* ಎರಡು ಹಂತಗಳಲ್ಲಿ ರಣಜಿ ಟ್ರೋಫಿ ಆರಂಭಿಸಲು ಬಿಸಿಸಿಐ ನಿರ್ಧಾರ

* ಫೆಬ್ರವರಿ 10ರಿಂದ ಮೊದಲ ಹಂತದ ರಣಜಿ ಟ್ರೋಫಿ ಆರಂಭ


ನವದೆಹಲಿ(ಫೆ.04): ರಣಜಿ ಟ್ರೋಫಿ (Ranji Trophy) ಕ್ರಿಕೆಟ್‌ ಪಂದ್ಯಾವಳಿಗೆ ಫೆಬ್ರವರಿ 10ರಂದು ಚಾಲನೆ ದೊರೆಯಲಿದ್ದು, ಮಾರ್ಚ್‌ 15ರ ತನಕ ಲೀಗ್‌ ಹಂತದ ಪಂದ್ಯಗಳು ನಡೆಯಲಿವೆ. 2ನೇ ಹಂತವು ಮೇ 30ರಿಂದ ಜೂನ್ 26ರ ತನಕ ನಡೆಯಲಿದೆ ಎಂದು ಬಿಸಿಸಿಐ (BCCI) ಕಾರ್ಯದರ್ಶಿ ಜಯ್‌ ಶಾ (Jay Shah) ಗುರುವಾರ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ತಿಳಿಸಿದ್ದಾರೆ. ಕೋವಿಡ್‌ನಿಂದಾಗಿ (Covid 19) ಮುಂದೂಡಲ್ಪಟ್ಟಿದ್ದ ರಣಜಿ ಟೂರ್ನಿಯನ್ನು 2 ಹಂತದಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿತ್ತು. ಇದರಂತೆ ಗುಂಪು ಹಂತದ ಎಲ್ಲಾ ಪಂದ್ಯಗಳು ಮೊದಲ ಹಂತದಲ್ಲಿ ನಡೆಯಲಿದ್ದು, ಐಪಿಎಲ್‌ ನಂತರ ನಾಕೌಟ್‌ ಹಂತದ ಪಂದ್ಯಗಳು ನಡೆಯಲಿವೆ.

ಇದು ಅತ್ಯಂತ ಕಡಿಮೆ ಅವಧಿಯ ಪ್ರಥಮ ದರ್ಜೆ ಋುತುಗಳಲ್ಲಿ ಒಂದಾಗಿದೆ. ಲೀಗ್‌ ಹಂತದಲ್ಲಿ ಪ್ರತಿ ತಂಡಗಳು 3 ಪಂದ್ಯಗಳನ್ನು ಮಾತ್ರ ಆಡಲಿದ್ದು, ಬಹುತೇಕ ತಂಡಗಳು ಈ ಹಂತದಲ್ಲೇ ಹೊರ ಬೀಳಲಿದೆ. ಪಂದ್ಯಾವಳಿ ಒಟ್ಟು 62 ದಿನ ನಡೆಯಲಿದ್ದು, 64 ಪಂದ್ಯಗಳು ಇರಲಿವೆ. ಮೊದಲ ಹಂತದಲ್ಲಿ 57 ಪಂದ್ಯಗಳು ನಡೆಯಲಿದೆ. 2ನೇ ಹಂತದಲ್ಲಿ ನಾಕೌಟ್‌ ಹಂತದಲ್ಲಿ 4 ಕ್ವಾಟರ್‌ ಫೈನಲ್‌, 2 ಸೆಮಿಫೈನಲ್‌ ಹಾಗೂ ಫೈನಲ್‌ ಸೇರಿದಂತೆ ಒಟ್ಟು 7 ಪಂದ್ಯಗಳು ನಡೆಯಲಿವೆ.

Tap to resize

Latest Videos

undefined

8 ಎಲೈಟ್‌ ಗುಂಪುಗಳನ್ನು ರಚಿಸಲಾಗಿದ್ದು, ಪ್ರತಿ ಗುಂಪಿನಲ್ಲಿ ತಲಾ 4 ತಂಡಗಳು ಇರಲಿವೆ. ಪ್ಲೇಟ್‌ ಗುಂಪಿನಲ್ಲಿ 6 ತಂಡಗಳು ಸ್ಪರ್ಧಿಸಲಿವೆ. ರಾಜ್‌ಕೋಟ್‌, ಕಟಕ್‌, ಚೆನ್ನೈ, ಅಹಮದಾಬಾದ್‌, ತಿರುವನಂತಪುರ, ದೆಹಲಿ, ಹರ್ಯಾಣ, ಗುವಾಹತಿಯಲ್ಲಿ ಎಲೈಟ್‌ ಗುಂಪಿನ ಪಂದ್ಯಗಳು ನಡೆದರೆ, ಪ್ಲೇಟ್‌ ಗುಂಪಿನ ಪಂದ್ಯಗಳಿಗೆ ಕೋಲ್ಕತಾ ಆತಿಥ್ಯ ವಹಿಸಲಿದೆ.

ಕೋವಿಡ್ ಶಾಕ್ ನಡುವೆಯೇ ಟೀಂ ಇಂಡಿಯಾ ಅಭ್ಯಾಸ..!

ಅಹಮದಾಬಾದ್‌: ಕೆಲವು ಆಟಗಾರರಿಗೆ ಕೊರೋನಾ ಸೋಂಕು (Coronavirus) ಕಾಣಿಸಿಕೊಂಡ ಹೊರತಾಗಿಯೂ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಗೆ ಗುರುವಾರದಿಂದಲೇ ಅಭ್ಯಾಸವನ್ನು ಆರಂಭಿಸಿದೆ. ಗುರುವಾರ(ಫೆ.03) ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಕೆಲವು ಆಟಗಾರರು ಮೈದಾನಕ್ಕೆ ಆಗಮಿಸಿ ತರಬೇತಿಯಲ್ಲಿ ನಿರತರಾದರು.

ಕೋವಿಡ್ ಪಾಸಿಟಿವ್ ಬಂದ ಶಿಖರ್ ಧವನ್(Shikhar Dhawan), ಋತುರಾಜ್ ಗಾಯಕ್ವಾಡ್ ಹಾಗೂ ಶ್ರೇಯಸ್ ಅಯ್ಯರ್‌ (Shreyas Iyer) ಐಸೋಲೇಷನ್‌ಗೆ ಒಳಗಾಗಿದ್ದಾರೆ. ಇನ್ನು ತಂಡಕ್ಕೆ ಸೇರ್ಪಡೆಯಾಗಿರುವ ಮಯಾಂಕ್ ಅಗರ್‌ವಾಲ್ (Mayank Agarwal) ಕ್ವಾರಂಟೈನ್‌ನಲ್ಲಿದ್ದು, ಉಳಿದ ಆಟಗಾರರು ಅಭ್ಯಾಸ ನಡೆಸಿದ್ದಾರೆ. ಇನ್ನು ವಿಕೆಟ್ ಕೀಪರ್‌ ಬ್ಯಾಟರ್‌ ಇಶಾನ್ ಕಿಶನ್ (Ishan Kishan) ಕೂಡಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ.

Ind vs WI ಟೀಂ ಇಂಡಿಯಾ ಪಾಳಯದಲ್ಲಿ ಕೊರೋನಾ: ಕನ್ನಡಿಗ ಮಯಾಂಕ್ ಅಗರ್‌ವಾಲ್‌ಗೆ ಬುಲಾವ್..!

ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಡಾಂಗಣದಲ್ಲಿ ಫೆಬ್ರವರಿ 6ರಿಂದ ಆರಂಭವಾಗಲಿದೆ. ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಅವಕಾಶ ನಿರಾಕರಿಸಲಾಗಿದ್ದು, ಖಾಲಿ ಕ್ರೀಡಾಂಗಣದಲ್ಲಿ ಸರಣಿ ನಡೆಯಲಿದೆ. ಸರಣಿಯ ಇನ್ನುಳಿದ ಪಂದ್ಯಗಳು ಫೆಬ್ರವರಿ 9 ಮತ್ತು 11ಕ್ಕೆ ನಡೆಯಲಿವೆ.

ಅಕ್ಷರ್ ಪಟೇಲ್‌ಗೆ ಕೋವಿಡ್ ಪಾಸಿಟಿವ್:

ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಗೆ ಆಯ್ಕೆಯಾಗಿದ್ದ ಆಲ್ರೌಂಡರ್‌ ಅಕ್ಷರ್ ಪಟೇಲ್‌ಗೆ (Axar Patel) ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಏಕದಿನ ಸರಣಿಗೆ ಆಯ್ಕೆಯಾಗದ ಹಿನ್ನೆಲೆಯಲ್ಲಿ ಅವರು ಭಾರತ ತಂಡವನ್ನು ಕೂಡಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಅಕ್ಷರ್ ಪಟೇಲ್‌ ಮನೆಯಲ್ಲಿಯೇ ಐಸೋಲೇಷನ್‌ಗೆ ಒಳಗಾಗಿದ್ದಾರೆ.
 

click me!