ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಆರಂಭಿಕ ಆಘಾತದ ಹೊರತಾಗಿಯೂ ಮೊದಲ ದಿನದಾಟದಂತ್ಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 302 ರನ್ ಗಳಿಸಿತು. ಒಂದು ಹಂತದಲ್ಲಿ ಕೇವಲ 112 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಇಂಗ್ಲೆಂಡ್ ತಂಡಕ್ಕೆ ಜೋ ರೂಟ್ ಹಾಗೂ ಬೆನ್ ಫೊಕ್ಸ್ ಆಸರೆಯಾಗಿದ್ದರು.
ರಾಂಚಿ(ಫೆ.24): ಜೋ ರೂಟ್ ಭರ್ಜರಿ ಶತಕದ ಹೊರತಾಗಿಯೂ ರವೀಂದ್ರ ಜಡೇಜಾ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 353 ರನ್‌ಗಳಿಗೆ ಸರ್ವಪತನ ಕಂಡಿದೆ. ಜಡೇಜಾ 67 ರನ್ ಬಾರಿಸಿ 4 ವಿಕೆಟ್ ಕಬಳಿಸಿದರೆ, ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ 122 ರನ್ ಬಾರಿಸಿ ಅಜೇಯರಾಗುಳಿದರು.
ಹೌದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಆರಂಭಿಕ ಆಘಾತದ ಹೊರತಾಗಿಯೂ ಮೊದಲ ದಿನದಾಟದಂತ್ಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 302 ರನ್ ಗಳಿಸಿತು. ಒಂದು ಹಂತದಲ್ಲಿ ಕೇವಲ 112 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಇಂಗ್ಲೆಂಡ್ ತಂಡಕ್ಕೆ ಜೋ ರೂಟ್ ಹಾಗೂ ಬೆನ್ ಫೊಕ್ಸ್ ಆಸರೆಯಾಗಿದ್ದರು. ಈ ಜೋಡಿ 113 ರನ್‌ಗಳ ಜತೆಯಾಟವಾಡಿತು. ಇದಾದ ಬಳಿಕ ಎಂಟನೇ ವಿಕೆಟ್‌ಗೆ ಜೋ ರೂಟ್ ಹಾಗೂ ಓಲಿ ರಾಬಿನ್‌ಸನ್ 136 ಎಸೆತಗಳನ್ನು ಎದುರಿಸಿ 102 ರನ್‌ಗಳ ಜತೆಯಾಟ ನಿಭಾಯಿಸಿತು.
A magnificent century by Joe Root headlined England’s innings 🙌 | 📝: https://t.co/3ADZnBAJLL pic.twitter.com/iYTAYmrrGl
— ICC (@ICC)
undefined
ಜೋ ರೂಟ್‌ಗೆ ಉತ್ತಮ ಸಾಥ್ ನೀಡಿ ಆಕರ್ಷಕ ಅರ್ಧಶತಕ ಸಿಡಿಸಿ ಮುನ್ನಗ್ಗುತ್ತಿದ್ದ ಓಲಿ ರಾಬಿನ್ ಅವರನ್ನು ಬಲಿ ಪಡೆಯುವಲ್ಲಿ ರವೀಂದ್ರ ಜಡೇಜಾ ಯಶಸ್ವಿಯಾದರು. ರಾಬಿನ್‌ಸನ್ 96 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 58 ರನ್ ಬಾರಿಸಿ ವಿಕೆಟ್ ಕೀಪರ್ ಧೃವ್ ಜುರೆಲ್‌ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಶತಕದ ಜತೆಯಾಟಕ್ಕೆ ಬ್ರೇಕ್ ಬಿದ್ದಿತು.
Ranchi Test: ಹಳಿ ತಪ್ಪಿದ ಇಂಗ್ಲೆಂಡ್‌ಗೆ ಜೋ ರೂಟ್ ಆಸರೆ
ಇನ್ನು ಶೋಯೆಬ್ ಬಷೀರ್ ಹಾಗೂ ಜೇಮ್ಸ್ ಆಂಡರ್‌ಸನ್ ಅವರನ್ನು ಖಾತೆ ತೆರೆಯುವ ಮುನ್ನವೇ ಬಲಿ ಪಡೆಯುವ ಮೂಲಕ ಜಡೇಜಾ ಇಂದು ಮೂರು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾದರು.
ಅಜೇಯರಾಗುಳಿದ ರೂಟ್: ಕೇವಲ 57 ರನ್‌ಗಳಿಗೆ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗಿಳಿದ ಜೋ ರೂಟ್ ಜವಾಬ್ದಾರಿಯುತ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಭಾರತೀಯ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಜೋ ರೂಟ್ 274 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 122 ರನ್ ಬಾರಿಸಿ ಅಜೇಯರಾಗುಳಿದರು.