2023ರ ಏಕದಿನ ವಿಶ್ವಕಪ್ ಟೂರ್ನಿ ಬಹಿಷ್ಕರಿಸುವ ಎಚ್ಚರಿಕೆ ನೀಡಿದ ರಮೀಜ್ ರಾಜಾ

By Naveen KodaseFirst Published Nov 26, 2022, 11:08 AM IST
Highlights

2023ರ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ
ಏಷ್ಯಾಕಪ್ ಆಡಲು ಪಾಕಿಸ್ತಾನ ಪ್ರವಾಸ ಮಾಡುವುದು ಟೀಂ ಇಂಡಿಯಾ ಪಾಲಿಗೆ ಡೌಟ್
ಭಾರತಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ ರಮೀಜ್ ರಾಜಾ

ಇಸ್ಲಾಮಾಬಾದ್(ನ.26): 2023ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ಹಿಂದೇಟು ಹಾಕಿದರೇ, ಇದಾದ ಬಳಿಕ 2023ರಲ್ಲಿ ಭಾರತದಲ್ಲೇ ಆಯೋಜನೆಯಾಗಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಕೂಡಾ ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ಎಚ್ಚರಿಕೆ ನೀಡಿದ್ದಾರೆ.

ಕಳೆದೆರಡು ವರ್ಷಗಳಿಂದ ಪಾಕಿಸ್ತಾನ ಕ್ರಿಕೆಟ್ ತಂಡವು ಅತ್ಯದ್ಭುತವಾದ ಆಟ ಆಡುತ್ತಿದೆ. ಇದಷ್ಟೇ ಅಲ್ಲದೇ 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಗೂ 2022ರ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಟೀಂ ಇಂಡಿಯಾವನ್ನು ಮಣಿಸಿದೆ. ಹೀಗಾಗಿ ಒಂದು ವೇಳೆ ಭಾರತ ತಂಡವು ಏಷ್ಯಾಕಪ್ ಆಡಲು ಪಾಕ್ ಪ್ರವಾಸ ಮಾಡದಿದ್ದರೇ, ಪಾಕಿಸ್ತಾನ ತಂಡ ಕೂಡಾ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ. ಈ ವಿಚಾರದಲ್ಲಿ ತಾವು ಬದ್ದರಾಗಿರುವುದಾಗಿ ರಮೀಜ್ ರಾಜಾ ಖಚಿತಪಡಿಸಿದ್ದಾರೆ.

ಭಾರತ ಕ್ರಿಕೆಟ್ ತಂಡವು ಏಷ್ಯಾಕಪ್ ಟೂರ್ನಿಯನ್ನಾಡಲು ಇಲ್ಲಿಗೆ ಬಂದರಷ್ಟೇ, ನಾವು ವಿಶ್ವಕಪ್ ಆಡಲು ಭಾರತಕ್ಕೆ ಹೋಗುತ್ತೇವೆ. ಅವರು ಒಂದು ವೇಳೆ ಬರದೇ ಹೋದರೆ, ಅವರೂ ಕೂಡಾ ಪಾಕಿಸ್ತಾನವಿಲ್ಲದೇ ಏಕದಿನ ವಿಶ್ವಕಪ್ ನಡೆಸಲಿ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಪಾಲ್ಗೊಳ್ಳದೇ ಹೋದರೇ ಯಾರು ನೋಡುತ್ತಾರೆ ಹೇಳಿ?. ನಾವು ಆಕ್ರಮಣಕಾರಿ ಮನೋಭಾವ ಮೈಗೂಡಿಸಿಕೊಳ್ಳಬೇಕು. ನಮ್ಮ ತಂಡವು ಒಳ್ಳೆಯ ಪ್ರದರ್ಶನ ತೋರುತ್ತಾ ಬಂದಿದೆ. ನಾವು ಜಗತ್ತಿನ ಶ್ರೀಮಂತ ಕ್ರಿಕೆಟ್ ತಂಡವನ್ನು ಸೋಲಿಸಿದ್ದೇವೆ. ನಾವು ಟಿ20 ವಿಶ್ವಕಪ್‌ ಫೈನಲ್ ಆಡಿದ್ದೇವೆ. ನಾನು ಯಾವಾಗಲೂ ಹೇಳುತ್ತಲೇ ಬಂದಿದ್ದೇನೆ, ಪಾಕಿಸ್ತಾನ ಕ್ರಿಕೆಟ್ ತಂಡದ ಆರ್ಥಿಕ ಪರಿಸ್ಥಿತಿ ಸುಧಾರಿಸಿದಷ್ಟೇ, ನಮ್ಮ ತಂಡಗಳು ಅತ್ಯುತ್ತಮವಾಗಿ ಪ್ರದರ್ಶನ ತೋರಲು ಸಾಧ್ಯ. ಅದನ್ನು ನಾವು 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾವದನ್ನು ಮಾಡಿ ತೋರಿಸಿದ್ದೇವೆ. ಟಿ20 ವಿಶ್ವಕಪ್‌ನಲ್ಲಿ ಏಷ್ಯಾಕಪ್‌ ಟೂರ್ನಿಯಲ್ಲಿ ನಾವು ಭಾರತ ತಂಡವನ್ನು ಸೋಲಿಸಿದ್ದೇವೆ. ಒಂದೇ ವರ್ಷದ ಅವಧಿಯಲ್ಲಿ ನಾವು ಬಿಲಿಯನ್ ಡಾಲರ್‌ ಆರ್ಥಿಕತೆ ಹೊಂದಿರುವ ತಂಡವನ್ನು ಎರಡು ಬಾರಿ ಸೋಲಿಸಿದ್ದೇವೆ ಎಂದು ರಮೀಜ್ ರಾಜಾ ಹೇಳಿದ್ದಾರೆ.

ದ್ರಾವಿಡ್‌ಗಿಂತ ಈತನಿಗೆ ಟಿ20 ಮಾದರಿ ಚೆನ್ನಾಗಿ ಗೊತ್ತು: ಟೀಂ ಇಂಡಿಯಾ ಹೆಡ್ ಕೋಚ್ ಬಗ್ಗೆ ಭಜ್ಜಿ ಅಚ್ಚರಿಯ ಹೇಳಿಕೆ

ಪಾಕಿಸ್ತಾನವು 2009ರಲ್ಲಿ ಬಹುರಾಷ್ಟ್ರಗಳ ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸಿತ್ತು. 2009ರ ಏಷ್ಯಾಕಪ್ ಟೂರ್ನಿಯ ಬಳಿಕ ಯಾವುದೇ ಬಹುರಾಷ್ಟ್ರಗಳ ಅಂತಾರಾಷ್ಟ್ರೀಯ ಟೂರ್ನಿ ಪಾಕಿಸ್ತಾನದಲ್ಲಿ ಜರುಗಿಲ್ಲ. ಶ್ರೀಲಂಕಾ ತಂಡವು 2009ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾಗ ಲಾಹೋರ್‌ನ ಗಢಾಪಿ ಸ್ಟೇಡಿಯಂ ಸಮೀಪ ಲಂಕಾ ಆಟಗಾರರಿದ್ದ ಬಸ್‌ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದರು. ಇದಾದ ಬಳಿಕ ಹಲವು ರಾಷ್ಟ್ರಗಳು ಪಾಕಿಸ್ತಾನ ಪ್ರವಾಸ ಮಾಡಲು ಹಿಂದೇಟು ಹಾಕುತ್ತಿವೆ.

click me!