Rajasthan Royals Pink Promise: ರಾಜಸ್ಥಾನ ರಾಯಲ್ಸ್ ತಂಡ ತನ್ನ ಪಿಂಕ್ ಪ್ರಾಮಿಸ್ ಘೋಷಣೆ ಮಾಡಿದೆ. ಅದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅತಿದೊಡ್ಡ ಕನಸಿಗೆ ಜೊತೆಯಾಗಿದ್ದಾರೆ.
ಜೈಪುರ (ಏ.6): ರಾಜಸ್ಥಾನ ರಾಯಲ್ಸ್ ತಂಡ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಆಡಲಿರುವ ಪಂದ್ಯವನ್ನು ಮಹಿಳೆಯರಿಗೆ ಅರ್ಪಣೆ ಮಾಡಿದೆ. ಪಿಂಕ್ ಪ್ರಾಮಿಸಿ ಚಾಲೆಂಜ್‌ನ ಭಾಗವಾಗಿ ಮಹಿಳೆಯರ ಸಬಲೀಕರಣಗೊಳಿಸುವ ಗುರಿಯನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಹೊಂದಿದೆ. ಶನಿವಾರ ನಡೆಯಲಿರುವ ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸಿಡಿಯುವ ಪ್ರತಿ ಸಿಕ್ಸರ್‌ಗೆ 6 ಮನೆಗಳ ಮೇಲೆ ಸೋಲಾರ್ ಪ್ಯಾನೆಲ್‌ಅನ್ನು ಅಳವಡಿಸಲಿದ್ದೇವೆ ಎಂದು ಫ್ರಾಂಚೈಸಿ ತಿಳಿಸಿದೆ. ರಾಜಸ್ಥಾನ ಪ್ರತಿ ಮನೆಗಳು ಕೂಡ ಈ ಯೋಜನೆಯ ಭಾಗವಾಗಿ ಇರಲಿದೆ ಎಂದು ತಿಳಿಸಿದೆ. ಅದಲ್ಲದೆ, ಶನಿವಾರ ರಾಜಸ್ಥಾನ ರಾಯಲ್ಸ್ ತಂಡ ಗುಲಾಬಿ ಬಣ್ಣದ ಜೆರ್ಸಿ ಧರಿಸಿ ಮೈದಾನಕ್ಕೆ ಇಳಿಯಲಿದೆ. ಈ ಪಂದ್ಯದಲ್ಲಿ ಧರಿಸಲಿರುವ ಮ್ಯಾಚ್ ಕಿಟ್‌ಅನ್ನು ಕೂಡ ಬಿಡುಗಡೆ ಮಾಡಲಾಗಿದೆ. ದೇಶದ 1 ಕೋಟಿ ಮನೆಯ ಮೇಲೆ ಸೌರ ಫಲಕವನ್ನು ಹಾಕುವ ಮೂಲಕ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವ ಗುರಿ ಇರಿಸಿಕೊಳ್ಳಲಾಗಿದೆ. ಪ್ರಧಾನಿ ಮೋದಿ ಕನಸಿಗೆ ಈಗ ರಾಜಸ್ಥಾನ ಫ್ರಾಂಚೈಸಿ ಸಾಥ್ ನೀಡಿದೆ.
ರಾಜಸ್ಥಾನ ರಾಯಲ್ಸ್‌ನ ಪಿಂಕ್ ಪ್ರಾಮಿಸ್ ರಾಜಸ್ಥಾನದ ಹಳ್ಳಿಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ದ ಮಹಿಳೆಯರ ಜೀವನವನ್ನು ಸುಧಾರಿಸುವ ಮತ್ತು ಸೌರಶಕ್ತಿಯ ಪ್ರಚಾರದ ಭಾಗವಾಗಿದೆ. ಈ ಯೋಜನೆಯು 2019 ರಲ್ಲಿ ಸ್ಥಾಪಿಸಲಾದ ರಾಯಲ್ ರಾಜಸ್ಥಾನ್ ಫೌಂಡೇಶನ್‌ನ ಸಹಯೋಗದಲ್ಲಿದೆ. ನೀರು, ವಿದ್ಯುತ್, ಆಶ್ರಯ ಮತ್ತು ಮಾನಸಿಕ ಆರೋಗ್ಯವನ್ನು ಖಾತ್ರಿಪಡಿಸುವ ಮೂಲಕ ರಾಜಸ್ಥಾನದಲ್ಲಿ ಮಹಿಳೆಯರಿಗೆ ಅಧಿಕಾರ ನೀಡುವ ಗುರಿಯನ್ನು ಪ್ರತಿಷ್ಠಾನ ಹೊಂದಿದೆ. ತಂಡವು ಪ್ರತಿ ಟಿಕೆಟ್‌ನಿಂದ ರೂ 100 ಮತ್ತು ವಿಶೇಷ ಪಿಂಕ್ ಪ್ರಾಮಿಸ್ ಜೆರ್ಸಿಯ ಮಾರಾಟದಿಂದ ಬರುವ ಹಣವನ್ನು ರಾಯಲ್ ರಾಜಸ್ಥಾನ್ ಫೌಂಡೇಶನ್‌ಗೆ ದಾನ ಮಾಡುತ್ತದೆ.
ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟ ಮುಂಬೈಗೆ ಸೂರ್ಯನ ಬಲ..! ತಂಡ ಕೂಡಿಕೊಂಡ ಮಿಸ್ಟರ್ 360
undefined
ರಾಜಸ್ಥಾನ ರಾಯಲ್ಸ್-ರಾಯಲ್ಸ್ ಬೆಂಗಳೂರು ನಡುವಿನ ಪಂದ್ಯ ಶನಿವಾರ ಸಂಜೆ 7:30ಕ್ಕೆ ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ರಾಜಸ್ಥಾನ್ ರಾಯಲ್ಸ್ ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ರಾಯಲ್ಸ್ ಸತತ ನಾಲ್ಕನೇ ಗೆಲುವಿನ ಗುರಿ ಹೊಂದಿದೆ. ಪಂದ್ಯಕ್ಕೂ ಮುನ್ನ ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನದ ಮಹಿಳೆಯರಿಂದ ವಿಶೇಷ ಪ್ರದರ್ಶನ ನಡೆಯಲಿದೆ. ವಿಶೇಷ ಅತಿಥಿಗಳಾಗಿ ಅನೇಕ ಮಹಿಳೆಯರು ಮತ್ತು ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ರಾಜಸ್ಥಾನದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಫ್ರಾಂಚೈಸಿಯ ಯೋಜನೆಯು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಗಮನ ಸೆಳೆದಿದೆ.
ಚಿನ್ನಸ್ವಾಮಿಯಲ್ಲಿ ಐಪಿಎಲ್‌ಗೆ ನೀರು ಬಳಕೆ: ವರದಿ ಸಲ್ಲಿಸುವಂತೆ ಎನ್‌ಜಿಟಿ ಆದೇಶ!