ಬೆಂಗಳೂರಿನಲ್ಲಿ ಮಳೆ ಆರಂಭ, ಇಂದಿನ ಭಾರತ ವೆಸ್ಟ್ ಇಂಡೀಸ್ ಟಿ20 ಪಂದ್ಯ ಅನುಮಾನ

Published : Oct 17, 2026, 05:15 PM IST
Bengaluru Rain Threatens Today IND vs WI match

ಸಾರಾಂಶ

ಬೆಂಗಳೂರಿನಲ್ಲಿ ಮಳೆ ಆರಂಭಗೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಸೇರಿದಂತೆ ಹಲವೆಡೆ ಮಳೆ ಆಂಭವಾಗಿದೆ. ಇದೀಗ ಕ್ರಿಕೆಟ್ ಅಭಿಮಾನಿಗಳ ಆತಂಕ ಹೆಚ್ಚಾಗಿದೆ. ಇಂದು ಸಂಜೆ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಪಂದ್ಯ ನಡೆಯುವುದು ಅನುಮಾನವಾಗಿದೆ.

ಬೆಂಗಳೂರು (ಅ.17) ಬೆಂಗಳೂರಿನ ಸುತ್ತ ಮುತ್ತ ಮಳೆ ಆರಂಭಗೊಂಡಿದೆ. ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಶಿವಾನಂದ ಸರ್ಕಲ್, ಮಲ್ಲೇಶ್ವರಂ ಸೇರಿದಂತೆ ಹಲೆವೆಡೆ ಮಳೆ ಆರಂಭಗೊಂಡಿದೆ. ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ನಿರಂತವಾಗಿ ಮಳೆ ಸುರಿಯುತ್ತಿದೆ. ಇದರಿಂದ ಇಂದು ಸಂಜೆ ನಡೆಯಬೇಕಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 5ನೇ ಟಿ20 ಪಂದ್ಯ ವಿಳಂಬವಾಗುವ ಅಥವಾ ರದ್ದಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ನಿರಂತರವಾಗಿ ಮಳೆ ಸುರಿಯುವ ಕಾರಣ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚು. ಇಂದು ಸಂಜೆ 7 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ. 6.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಈಗಲೇ ಮಳೆ ಆರಂಭಗೊಂಡಿರುವ ಕಾರಣ ಪಂದ್ಯ ಆರಂಭ ವಿಳಂಭವಾಗುವ ಸಾಧ್ಯತೆ ಇದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಮ್ ವ್ಯವಸ್ಥೆ ಇರುವ ಕಾರಣ ಮಳೆ ನಿಂತ ತಕ್ಷಣವೇ ಪಂದ್ಯ ಆರಂಭಿಸಲು ಸಾಧ್ಯವಾಗಲಿದೆ. ಕನಿಷ್ಠ ಮಳೆ ಕೆಲ ಗಂಟೆಗಳ ಕಾಲ ನಿಲ್ಲಬೇಕು ಅಷ್ಟೆ.

ಚಿನ್ನಸ್ವಾಮಿ ಸುತ್ತ ಮತ್ತ ಕ್ರಿಕೆಟ್ ಅಭಿಮಾನಿಗಳು

ಸಂಜೆ 7 ಗಂಟೆ ಪಂದ್ಯದ ಕಾರಣ ಈಗಾಗಲೇ ಕ್ರಿಕೆಟ್ ಪ್ರೇಮಿಗಳು ಚಿನ್ನಸ್ವಾಮಿ ಸುತ್ತ ಮುತ್ತ ನೆರೆದಿದ್ದಾರೆ. ಮಳೆ ವಕ್ಕರಿಸುತ್ತಿದ್ದಂತೆ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿರುವ ಕಾರಣ ಅಭಿಮಾನಿಗಳು ಸಂಪೂರ್ಣ ಪಂದ್ಯ ವೀಕ್ಷಿಸುವ ಅವಕಾಶ ಸಿಗುವ ಸಾಧ್ಯತೆ ಕಡಿಮೆ.

ಇಂದು ನಿರ್ಣಾಯ ಪಂದ್ಯ

ಬೆಂಗಳೂರಿನ ಟ20 ಪಂದ್ಯ ನಿರ್ಣಾಯಕ ಪಂದ್ಯವಾಗಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ 2 ಪಂದ್ಯ ಭಾರತ ಗೆದ್ದರೆ, ಇನ್ನೆರಡು ಪಂದ್ಯ ವೆಸ್ಟ್ ಇಂಡೀಸ್ ಗೆದ್ದುಕೊಂಡಿದೆ. ಹೀಗಾಗಿ ಇಂದಿನ ಪಂದ್ಯ ಫೈನಲ್ ಸ್ವರೂಪ ಪಡೆದುಕೊಂಡಿದೆ. ಚಿನ್ನಸ್ವಾಮಿ ಪಂದ್ಯ ಗೆದ್ದವರಿಗೆ ಟ್ರೋಫಿ ಒಲಿಯಲಿದೆ. ಹೀಗಾಗಿ ರೋಚಕ ಹೋರಾಟ ನಡೆಯಲಿದೆ. ಆದರೆ ಮಳೆರಾಯನ ಆಗಮನದಿಂದ ಅಭಿಮಾನಿಗಳ ಆತಂಕ ಹೆಚ್ಚಾದಿದೆ.

ಹಲೆವೆಡೆ ಟ್ರಾಫಿಕ್ ಜಾಮ್

ಸಂಜೆಯಾಗುತ್ತದ್ದಂತೆ ಮಳೆ ವಕ್ಕರಿಸಿದೆ. ಪರಿಣಾಮ ಹಲೆವೆಡೆ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಮಲ್ಲೆೇಶ್ವರಂ, ಆನಂದ್ ರಾವ್ ಸರ್ಕಲ್, ಮೆಜಸ್ಟಿಕ್ ಸುತ್ತ ಮುತ್ತ ಭಾರಿ ಟ್ರಾಫಿಕ್ ಸಮಸ್ಯೆಯಾಗಿದೆ. ಒಂದೆಡೆ ಶನಿವಾರ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಿದೆ. ಹಬ್ಬದ ಪ್ರಯುಕ್ತ ಹಲವರು ತವರಿಗೆ ತೆರಳುವ ಧಾವಂತದಲ್ಲಿದ್ದಾರೆ. ಮತ್ತೊಂದೆಡೆ ಮಳೆರಾಯನಿಂದ ಟ್ರಾಫಿಕ್ ಸಮಸ್ಯೆ ತೀವ್ರಗೊಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Ind Vs WI: ಅವಕಾಶ ಸಿಕ್ಕರೂ ತಪ್ಪಲಿಲ್ಲ ಗಂಡಾಂತರ; ಭುವಿ ಆಯ್ಕೆ ಬಿಸಿಸಿಐನ 'ಅವಕಾಶವಾದಿ' ಆಟನಾ? ಇದೆಂಥಾ ಮೈಂಡ್ ಗೇಮ್?
ಏಕದಿನ ವಿಶ್ವಕಪ್‌ನಿಂದ ಈ 4 ಸ್ಟಾರ್ ಆಟಗಾರರು ಔಟ್..? ಕಿವೀಸ್ ಎದುರಿನ ಸರಣಿಗೆ ತಂಡ ಪ್ರಕಟ ಬೆನ್ನಲ್ಲೇ ಶುರುವಾಯ್ತು ಚರ್ಚೆ..! ಲಿಸ್ಟ್‌ನಲ್ಲಿ ಅಚ್ಚರಿ ಹೆಸರು