ಟಿ0 ವಿಶ್ವಕಪ್ ಟ್ರೋಫಿ ಗೆಲುವಿಗೆ ಬಿಸಿಸಿಐ 125 ಕೋಟಿ ರೂ ಬಹುಮಾನ ಘೋಷಿಸಿದೆ. ಗೆಲುವಿನ ರೂವಾರಿ ಕೋಚ್ ರಾಹುಲ್ ದ್ರಾವಿಡ್ 2.5 ಕೋಟಿ ರೂಪಾಯಿ ಬೋನಸ್ ಸ್ವೀಕರಿಸಲು ನಿರಾಕರಿಸಿದ್ದಾರೆ.
ಬೆಂಗಳೂರು(ಜೂ.10) ಟೀಂ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಗೆಲುವಿನ ಮೂಲಕ ಟ್ರೋಫಿ ಗೆದ್ದುಕೊಂಡಿದೆ. ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅದ್ಧೂರಿ ಸ್ವಾಗತ ಸನ್ಮಾನವೂ ನಡೆದಿದೆ. ಇತ್ತ ಬಿಸಿಸಿಐ ಟ್ರೋಫಿ ಗೆದ್ದ ಟೀಂ ಇಂಡಿಯಾಗೆ 125 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಈ ಬೋನಸ್ ಮೊತ್ತದಲ್ಲಿ ರಾಹುಲ್ ದ್ರಾವಿಡ್ 2.5 ಕೋಟಿ ರೂಪಾಯಿ ಸ್ವೀಕರಿಸಲು ನಿರಾಕರಿಸಿದ್ದಾರೆ.
ಕ್ರಿಕೆಟಿಗರಿಗೆ ತಲಾ 5 ಕೋಟಿ ರೂಪಾಯಿ, ಕೋಚ್ ದ್ರಾವಿಡ್‌ಗೆ 5 ಕೋಟಿ ಹಾಗೂ ಸಹಾಯ ಸಿಬ್ಬಂದಿಗಳಿಗೆ ತಲಾ 2.5 ಕೋಟಿ ರೂಪಾಯಿ ಬಹುಮಾನ ಮೊತ್ತವನ್ನು ಬಿಸಿಸಿಐ ಘೋಷಿಸಿದೆ. ತನಗೂ 2.5 ಕೋಟಿ ರೂಪಾಯಿ ಮಾತ್ರ ಸಾಕು. ಹೆಚ್ಚುವರಿ 2.5 ಕೋಟಿ ರೂಪಾಯಿ ಸ್ವೀಕರಿಸಲು ದ್ರಾವಿಡ್ ನಿರಾಕರಿಸಿದ್ದಾರೆ. ಎಲ್ಲಾ ಸಿಬ್ಬಂದಿಗಳಿಗೆ ನೀಡಿದಂತೆ 2.5 ಕೋಟಿ ರೂಪಾಯಿ ಮಾತ್ರ ತನಗೂ ಸಾಕು ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಬಗ್ಗೆ ರೋಹಿತ್ ಶರ್ಮಾ ಭಾವುಕ ಪೋಸ್ಟ್..!
ಟೀಂ ಇಂಡಿಯಾ ಬೌಲಿಂಗ್ ಕೋಚ್ ಪರಾಸ್, ಫೀಲ್ಡಿಂಗ್ ಕೋಟ್ ಟಿ ದಿಲೀಪ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್‌ಗೆ ತಲಾ 2.5 ಕೋಟಿ ರೂಪಾಯಿ ಬೋನಸ್ ಮೊತ್ತವನ್ನು ಬಿಸಿಸಿಐ ನೀಡಿದೆ. ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಹಾಗೂ ಟೀ ಇಂಡಿಯಾ ಕ್ರಿಕೆಟಿಗರಿಗೆ ತಲಾ 5 ಲಕ್ಷ ರೂಪಾಯಿ ಘೋಷಿಸಲಾಗಿತ್ತು. ಸ್ಟಾಫ್ ನೀಡಿದ ಮೊತ್ತವೇ ತನಗೂ ಸಾಕು, ಹೆಚ್ಚುವರಿ ಬೋನಸ್ ಮೊತ್ತ ಬೇಡ ಎಂದು ರಾಹುಲ್ ದ್ರಾವಿಡ್ ಬಿಸಿಸಿಐಗೆ ಮನವಿ ಮಾಡಿದ್ದಾರೆ.
ಟಿ20 ಗೆಲುವಿಗೆ ಬಿಸಿಸಿಐ ಕೇವಲ ಟೀಂ ಇಂಡಿಯಾಗೆ ಮಾತ್ರವಲ್ಲ, ಆಯ್ಕೆ ಸಮಿತಿ ಸದಸ್ಯರು ಹಾಗೂ ಮೀಸಲು ಆಟಗಾರರಿಗೂ ತಲಾ 1 ಕೋಟಿ ರೂಪಾಯಿ ಬಹುಮಾನ ಮೊತ್ತ ನೀಡಿದೆ. ಥ್ರೋಡೌನ್ ಸ್ಪೆಷಲಿಸ್ಟ್ ಕುಮಟಾದ ರಾಘು, ಫಿಸಿಯೋಥೆರಪಿಸ್ಟ್ ಸೇರಿದಂತೆ ಇತರ ಸಿಬ್ಬಂದಿಗಳಿಗೆ ತಲಾ 2 ಕೋಟಿ ರೂಪಾಯಿ ನೀಡಲಾಗಿದೆ.
ನವೆಂಬರ್ 2021ರಂದು ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದರು. ಕಳೆದ 2.5 ವರ್ಷದಲ್ಲಿ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಟೀಂ ಇಂಡಿಯಾ ಹಲವು ಐಸಿಸಿ ಟೂರ್ನಿಗಳಲ್ಲಿ ಫೈನಲ್, ಸೆಮಿಫೈನಲ್ ಪ್ರವೇಶಿಸಿ ನಿರಾಸೆ ಅನುಭವಿಸಿತ್ತು. ಕೊನೆಗೂ 17 ವರ್ಷಗಳ ಬಳಿಕ 2ನೇ ಟಿ20 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು.
ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ರಾಹುಲ್ ದ್ರಾವಿಡ್ ಕೋಚಿಂಗ್ ಅವಧಿ ಮುಕ್ತಾಯಗೊಂಡಿತ್ತು. ಮತ್ತೆ ಕೋಚ್ ಆಗಿ ಮುಂದುವರಿಯಲು ದ್ರಾವಿಡ್ ನಿರಾಸಕ್ತಿ ತೋರಿದ್ದರು. ಹೀಗಾಗಿ ಬಿಸಿಸಿಐ ಇದೀಗ ನೂತನ ಕೋಚ್ ಆಗಿ ಮಾಜಿ ಕ್ರಿಕೆಟಿಗ, ಕೆಕೆಆರ್ ತಂಡದ ಕೋಚ್ ಗೌತಮ್ ಗಂಭೀರ್ ಆಯ್ಕೆ ಮಾಡಿದೆ.
ಟೀಂ ಇಂಡಿಯಾ ನೂತನ ಹೆಡ್ ಕೋಚ್ ಆಗುತ್ತಿದ್ದಂತೆಯೇ ಖಡಕ್ ಸಂದೇಶ ರವಾನಿಸಿದ ಗೌತಮ್ ಗಂಭೀರ್..!