
ನವದೆಹಲಿ (ಏ.30): ಐಪಿಎಲ್‌ನಲ್ಲಿ 35 ಎಸೆತದಲ್ಲಿ ಶತಕ ಸಿಡಿಸಿದ ರಾಜಸ್ಥಾನ ರಾಯಲ್ಸ್‌ನ ವೈಭವ್ ಸೂರ್ಯವಂಶಿ ಆಟವನ್ನು ಇಡೀ ಕ್ರಿಕೆಟ್ ಲೋಕ ಕೊಂಡಾಡಿದೆ. ‘ಕ್ರಿಕೆಟ್ ದೇವರು’ ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್, ‘ವೈಭವ್‌ನ ನಿರ್ಭೀತ ಆಟ, ಬ್ಯಾಟ್ ಬೀಸುವ ವೇಗ, ಮುಂಚಿತವಾಗಿ ಚೆಂಡಿನ ಲೆಂಥ್ ಗ್ರಹಿಸಿಕೊಂಡು ಆಡುವ ರೀತಿ, ಚೆಂಡನ್ನು ಬೌಂಡರಿ ಹೊರಕ್ಕೆ ಅಟ್ಟುವ ಪರಿ ಎಲ್ಲವೂ ಬಹಳ ಸೊಗಸಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ, ‘ಒಂದೆಡೆ ಸಾರ್ಮಥ್ಯ ಹಾಗೂ ಮತ್ತೊಂದೆಡೆ ವೈಭವ್ ಸೂರ್ಯವಂಶಿ. ಮುಂದಿನ ಪೀಳಿಗೆಯನ್ನು ಮುನ್ನಡೆಸಿರಿ. ದೇವರು ನಿಮಗೆ ಒಳ್ಳೇದು ಮಾಡಲಿ’ ಎಂದು ಬರೆದುಕೊಂಡಿದ್ದಾರೆ. ಯುವರಾಜ್ ಸಿಂಗ್, ‘ನಿಮಗೆ 14 ವರ್ಷ ವಯಸ್ಸಿದ್ದಾಗ ಏನು ಮಾಡುತ್ತಿದ್ದಿರಿ?, ಈ ಬಾಲಕ ವಿಶ್ವ ಶ್ರೇಷ್ಠ ಬೌಲರ್‌ಗಳನ್ನು ಮನಸೋಇಚ್ಛೆ ದಂಡಿಸುತ್ತಿದ್ದಾನೆ. ಈತನ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳಿ’ ಎಂದು ಟ್ವೀಟ್ ಮಾಡಿದ್ದಾರೆ. ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್, ಮೊಹಮದ್ ಶಮಿ, ಖ್ಯಾತ ವೀಕ್ಷಕ ವಿವರಣೆಗಾರ ಇಯಾನ್ ಬಿಶಪ್ ಸೇರಿ ಅನೇಕರು ವೈಭವ್‌ರನ್ನು ಕೊಂಡಾಡಿದ್ದಾರೆ.
ಇದನ್ನೂ ಓದಿ: ತಮ್ಮ ಗುರುವಿನ ಮನಗೆದ್ದ ವೈಭವ್ ಸೂರ್ಯವಂಶಿ; ನಾನಂತೂ ಎಂಜಾಯ್ ಮಾಡ್ದೆ ಎಂದ ಲಾರಾ!
ವೈಭವ್‌ಗೆ ₹10 ಲಕ್ಷ ಬಹುಮಾನ ಘೋಷಿಸಿದ ಬಿಹಾರ ಸಿಎಂ ನಿತೇಶ್
ವೈಭವ್ ಸೂರ್ಯವಂಶಿಗೆ ಬಿಹಾರ ಮುಖ್ಯಮಂತ್ರಿ ನಿತೇಶ್ ಕುಮಾರ್ ₹10 ಲಕ್ಷ ಬಹುಮಾನ ಘೋಷಿಸಿದ್ದಾರೆ. ‘ಕಳೆದ ವರ್ಷ ವೈಭವ್ ಹಾಗೂ ಅವರ ತಂದೆಯನ್ನು ಭೇಟಿಯಾಗಿದ್ದೆ. ದಾಖಲೆಯ ಶತಕದ ಬಳಿಕ ಕರೆ ಮಾಡಿ ಅಭಿನಂದನೆ ಸಲ್ಲಿಸಿದೆ. ಈತ ಭವಿಷ್ಯದ ಸ್ಟಾರ್ ಆಗಲಿ’ ಎಂದು ತಿಳಿಸಿದ್ದಾರೆ.
ದ್ರಾವಿಡ್‌ಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲದು: ವೈಭವ್ ತಂದೆ
ನವದೆಹಲಿ: ವೈಭವ್ ಸೂರ್ಯವಂಶಿ ತಮ್ಮ ಸಾಧನೆಯನ್ನು ಹೆತ್ತವರಿಗೆ ಸಮರ್ಪಿಸಿದ್ದಾರೆ. ಈ ನಡುವೆ ವೈಭವ್ ತಂದೆ ಸಂಜೀವ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಬಿಹಾರ ಕ್ರಿಕೆಟ್ ಮತ್ತು ರಾಜಸ್ಥಾನ ತಂಡದ ಕೋಚ್ ರಾಹುಲ್ ದ್ರಾವಿಡ್‌ಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು’ ಎಂದಿದ್ದಾರೆ. ಈ ಕುರಿತಾದ ವಿಡಿಯೋವೊಂದನ್ನು ಬಿಹಾರ ಕ್ರಿಕೆಟ್ ಸಂಸ್ಥೆ ಹಂಚಿಕೊಂಡಿದ್ದು, ‘ ನಮ್ಮ ಗ್ರಾಮ , ಬಿಹಾರ, ಇಡೀ ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಲ್ಲಿ ವೈಭವ್‌ಗೆ ತರಬೇತಿ ನೀಡಿದ ರಾಜಸ್ಥಾನ ರಾಯಲ್ಸ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ವೈಭವ್ ಅವರ ಆಟ ಸುಧಾರಿಸಿದ್ದಕ್ಕಾಗಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಉಳಿದ ಸಹಾಯಕ ಸಿಬ್ಬಂದಿಗೆ ಧನ್ಯವಾದ . ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವಕಾಶ ನೀಡಿದ್ದಕ್ಕಾಗಿ ಬಿಹಾರ ಕ್ರಿಕೆಟ್ ಸಂಸ್ಥೆಗೆ ಧನ್ಯವಾದ ’ ಎಂದಿದ್ದಾರೆ,
ಇದನ್ನೂ ಓದಿ: ವೈಭವ ತಾಂಡವ, ಟಿ20 ಇತಿಹಾಸ ಬರೆದ 14 ವರ್ಷದ ಸೂರ್ಯವಂಶಿ, ಕೇವಲ 35 ಎಸೆತಗಳಲ್ಲಿ ಶತಕ!
ತಂದೆ, ತಾಯಿಯ ಪರಿಶ್ರಮದ ಫಲ
ನಾನು ಏನಾಗಿದ್ದೇನೋ ಅದಕ್ಕೆ ನನ್ನ ಹೆತ್ತವರೇ ಕಾರಣ. ನಮ್ಮ ತಾಯಿ ಪ್ರತಿ ದಿನ ರಾತ್ರಿ 11ಕ್ಕೆ ಮಲಗಿ, ನನಗಾಗಿ ಬೆಳಗ್ಗೆ 3ಕ್ಕೆ ಏಳುತ್ತಾರೆ. ನನ್ನ ತಂದೆ ನನಗಾಗಿ ಕೆಲಸ ತ್ಯಜಿಸಿದ್ದಾರೆ. ಅಣ್ಣ ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದು, ಮನೆ ಕೆಲಸಗಳು ಕಷ್ಟದಿಂದ ಸಾಗುತ್ತಿವೆ. ಭಾರತೀಯ ಕ್ರಿಕೆಟ್‌ಗೆ ದೊಡ್ಡ ಕೊಡುಗೆ ನೀಡಬೇಕು ಎನ್ನುವುದೇ ನನ್ನ ಗುರಿ.
- ವೈಭವ್ ಸೂರ್ಯವಂಶಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.