ಭಾರತ ತಂಡದ ಸಿಬ್ಬಂದಿ ರಘುರನ್ನು ಅಭಿಮಾನಿ ಅನ್ಕೊಂಡು ತಡೆದ ಪೊಲೀಸ್‌! ವಿಡಿಯೋ ವೈರಲ್

Published : Feb 05, 2025, 01:51 PM IST
ಭಾರತ ತಂಡದ ಸಿಬ್ಬಂದಿ ರಘುರನ್ನು ಅಭಿಮಾನಿ ಅನ್ಕೊಂಡು ತಡೆದ ಪೊಲೀಸ್‌! ವಿಡಿಯೋ ವೈರಲ್

ಸಾರಾಂಶ

ಭಾರತ ಕ್ರಿಕೆಟ್ ತಂಡದ ಥ್ರೋಡೌನ್ ತಜ್ಞ ರಾಘವೇಂದ್ರ ಅವರನ್ನು ನಾಗ್ಪುರ ಹೋಟೆಲ್‌ಗೆ ಪೊಲೀಸರು ತಡೆದ ಘಟನೆ ನಡೆಯಿತು. ಮಾಧ್ಯಮದವರ ಹಸ್ತಕ್ಷೇಪದ ನಂತರ ಬಿಡುಗಡೆ ಮಾಡಲಾಯಿತು. ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗಿದೆ. 

ನಾಗ್ಪುರ: ಥ್ರೋಡೌನ್‌ ತಜ್ಞ (ಸಹಾಯಕ ಸಿಬ್ಬಂದಿ)ರಾಗಿ ಕಳೆದ 15 ವರ್ಷದಿಂದ ಭಾರತ ಕ್ರಿಕೆಟ್‌ ತಂಡದೊಂದಿಗೆ ಇರುವ ಕರ್ನಾಟಕದ ರಾಘವೇಂದ್ರ (ರಘು) ಅವರನ್ನು ಅಭಿಮಾನಿಗಳು ಎಂದುಕೊಂಡು ತಂಡದ ಹೋಟೆಲ್‌ವೊಳಗೆ ಬಿಡಲು ಪೊಲೀಸರು ನಿರಾಕರಿಸಿದ ಘಟನೆ ಸೋಮವಾರ ನಡೆದಿದೆ. 

ಇಲ್ಲಿನ ರ್‍ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಭಾರತ ತಂಡ ಉಳಿದುಕೊಂಡಿತ್ತು, ರಘು ಹೋಟೆಲ್‌ನೊಳಕ್ಕೆ ಹೋಗಲು ಮುಂದಾದಾಗ ಮೂವರು ಪೊಲೀಸರು ಅವರನ್ನು ತಡೆದರು. ಆಗ ಅಲ್ಲೇ ಇದ್ದ ಮಾಧ್ಯಮವರು, ‘ಅವರು ಭಾರತ ತಂಡದ ಕೋಚ್‌. ತಂಡದ ಸದಸ್ಯ. ಆಟಗಾರರಿದ್ದ ಬಸ್‌ನಿಂದಲೇ ಕೆಳಗಿಳಿದರು’ ಎಂದು ಕೂಗಿದರು. ಆ ಬಳಿಕ ರಘುರನ್ನು ಪೊಲೀಸರು ಬಿಟ್ಟರು. ಸದಾ ಹಸನ್ಮುಖಿಯಾಗಿರುವ ರಘು, ನಗುತ್ತಲೇ ಈ ಸನ್ನಿವೇಶವನ್ನು ಎದುರಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಲ್ಲಿ ಗೆದ್ದು ಬೀಗಿರುವ ಭಾರತ, ಇದೀಗ ಆಂಗ್ಲರ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ.  ಮೊದಲ ಪಂದ್ಯ ಫೆಬ್ರವರಿ 6ಕ್ಕೆ ನಾಗ್ಪುರದಲ್ಲಿ ನಡೆಯಲಿದೆ. 2ನೇ ಏಕದಿನ ಫೆಬ್ರವರಿ 9ಕ್ಕೆ ಕಟಕ್‌ನಲ್ಲೂ, 3ನೇ ಏಕದಿನ ಫೆಬ್ರವರಿ 12ಕ್ಕೆ ಅಹಮದಾಬಾದ್‌ನಲ್ಲೂ ನಡೆಯಲಿವೆ.

ಭಾರತ vs ಇಂಗ್ಲೆಂಡ್ ಏಕದಿನ ಸರಣಿ: ಸಂಪೂರ್ಣ ವೇಳಾಪಟ್ಟಿ, ಎಲ್ಲಿ ನೋಡಬೇಕು? ಎಷ್ಟು ಗಂಟೆಯಿಂದ ಪಂದ್ಯ ಆರಂಭ?

ಏಕದಿನ ಸರಣಿಗೆ ಭಾರತ ತಂಡ ಹೀಗಿದೆ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಸಂಜು ಕೈಬೆರಳು ಮುರಿತ: 5-6 ವಾರ ಕ್ರಿಕೆಟಿಂದ ದೂರ

ನವದೆಹಲಿ: ಭಾರತ ತಂಡದ ಬ್ಯಾಟರ್‌ ಸಂಜು ಸ್ಯಾಮ್ಸನ್‌, ಇಂಗ್ಲೆಂಡ್‌ ವಿರುದ್ಧದ 5ನೇ ಟಿ20 ಪಂದ್ಯದ ವೇಳೆ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದು, ಕನಿಷ್ಠ 5-6 ವಾರ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ರಣಜಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕೇರಳ ಪರ ಆಡಬೇಕಿದ್ದ ಸಂಜು, ಗಾಯದಿಂದಾಗಿ ಆಯ್ಕೆಗೆ ಲಭ್ಯರಿರುವುದಿಲ್ಲ ಎಂದು ತಿಳಿದುಬಂದಿದೆ.

ವಿರಾಟ್ ಕೊಹ್ಲಿ ಮತ್ತೆ ಕ್ಯಾಪ್ಟನ್ ಆಗ್ತಾರಾ? ಕುತೂಹಲ ಮೂಡಿಸಿದ ಆರ್‌ಸಿಬಿ ಫ್ರಾಂಚೈಸಿ

ಐಪಿಎಲ್‌ ಆರಂಭಗೊಳ್ಳುವ ವೇಳೆಗೆ ಸ್ಯಾಮ್ಸನ್‌ ಫಿಟ್‌ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್‌ರ ಎಸೆತದಲ್ಲಿ ಸ್ಯಾಮ್ಸನ್‌ರ ಬಲಗೈನ ತೋರು ಬೆರಳು ಮುರಿಯಿತು. ಸಂಜು ಸದ್ಯದಲ್ಲೇ ಬೆಂಗಳೂರಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಗೆ ಆಗಮಿಸಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!
ಆ ಒಂದು ಫೋಟೋ: ಪಾಪರಾಜಿಗಳ ಮೇಲೆ ಹಾರ್ದಿಕ್ ಪಾಂಡ್ಯ ಕೆಂಡಾಮಂಡಲ!