
ಕ್ರಿಕೆಟ್ನಲ್ಲಿ ಮಾತ್ರವಲ್ಲ ಕೆಲ ದಿನಗಳ ಹಿಂದೆ ಪೃಥ್ವಿ ಶಾ ಬದುಕೇ ಮುಗಿಯಿತು ಎಂಬ ಮಾತುಗಳು ಬಂದವು. ಮೊದಲು-ಮೊದಲು ಐಪಿಎಲ್ ಬಿಡ್ನಿಂದ ಹೊರಗೆ, ಪಿಟ್ನೆಸ್ ಗೊಂದಲ, ಇದಾದ ಮೇಲೆ ಬದುಕಲ್ಲಿ ನಿರಾಶೆ, ಮುರಿದು ಬಿದ್ದ ಆಕೃತಿಯೊಂದಿಗಿನ ನಿಶ್ಚಿತಾರ್ತ, ಹೀಗೆ, ಸಾಲು-ಸಾಲು ಹೊಡೆತ ಕಂಡ ಶಾ ಡೊಮೆಸ್ಟಿಕ್ ಕ್ರಿಕೆಟ್ ತಂಡದಲ್ಲಿ ದೊಡ್ಡ ಕಂಬ್ಯಾಕ್ ಮೂಡಿಸುತ್ತಿದ್ದಾರೆ. ಅದಕ್ಕೆ ಅವರ ಫಾರ್ಮ್ ಸಾಕ್ಷಿಯಾಗಿದೆ. ಅಷ್ಟಕ್ಕೂ ಶಾ ಹೇಳಿದ ಆ ಮಾತು ಇಂದು ವೈರಲ್ ಆಗಿದೆ. ಅವರು ಹೇಳಿದ್ದೇನು? ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಭಾರತ ತಂಡಕ್ಕೆ ಸೇರುವುದು, ಅಲ್ಲಿನ ಜೆರ್ಸಿ ತೊಡುವುದು ಅಷ್ಟೇ ನನ್ನ ಮುಂದಿರುವ ಗುರಿ. ಅದನ್ನು ಬಿಟ್ಟರೇ ಈ ಮನಸಿನಲ್ಲಿ ಏನು ಉಳಿದಿಲ್ಲ, ಈ ತಲೆ ಎಲ್ಲೂ ಏನು ಓಡುತ್ತಿಲ್ಲ. ಭಾರತ ತಂಡಕ್ಕೆ ಮರಳುವುದು ನನ್ನ ಪರಮ ಹಾಗೂ ಅಂತಿಮ ದೊಡ್ಡ ಗುರಿಯಾಗಿದೆ. ಸದ್ಯಕ್ಕೆ ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವೂ ಇಲ್ಲ, ಅಲ್ಲದೇ ಯಾರೊಂದಿಗೂ ಹುಟ್ಟಿದ ದ್ವೇಷವಲ್ಲ, ಇದು ನನ್ನ ವಿರುದ್ಧ ನಾನೇ ನಡೆಸುತ್ತಿರುವ ಸ್ಪರ್ಧೆ. ಅಷ್ಟೇ ಎನ್ನುವುದನ್ನು ಇತ್ತೀಚೆಗೆ ಬಿಡುಗಡೆಯಾದ ಅವರ ಪೋಸ್ಟರ್ ಹೇಳುವಂತಿದೆ.
ಅಲ್ಲದೇ ಅವರ ಮಾತುಗಳು, ಪೋಸ್ಟರ್ನಲ್ಲಿ ಮೂಡಿದ ಪ್ರತಿ ಅಕ್ಷರ ವಿಮರ್ಷಕರಿಗೆ, ಎದುರಾಳಿಗಳಿಗೆ ಕಟು ಉತ್ತವನ್ನು ಕೊಟ್ಟಂತೆ ಇತ್ತು. ಅದೇನೆಂದರೆ, ಆ ದಾಟಿ ನಾನ್ಯಾಕೆ ಕಾಂಬ್ಳಿ ಆಗಲಿ, ದಿನೇಶ ಕಾರ್ತಿಕರಂತೆ ಗೆದ್ದುತೋರಿಸುವೆ ಎಂದು ಹೇಳಿದಂತೆ ಇತ್ತು. ಇನ್ನು ಡೊಮೆಸ್ಟಿಕ್ ಸೇರಿ ಮುಂಬರುವ ಪಂದ್ಯಗಳಲ್ಲಿ ಉತ್ತಮ ತೋರುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.
ಈ ಫೋಟೋವನ್ನು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಐಪಿಎಲ್ ತಂಡವು ಹಂಚಿಕೊಂಡಿದ್ದು, ಇಂಡಿಯಾ ಟುಡೇಗೆ (India Today) ಪೃಥ್ವಿ ಶಾ ನೀಡಿದ್ದ ಸಂದರ್ಶನದ ಸಾಲುಗಳನ್ನು ಇದರಲ್ಲಿ ಬಳಸಲಾಗಿದೆ. ಅವರು ಇತರರ ವಿಮರ್ಶೆಗಳಿಗೆ ಕಿವಿಗೊಡದೆ, ತಮ್ಮ ಆಟವನ್ನು ತಾವೇ ಸುಧಾರಿಸಿಕೊಂಡು ಮತ್ತೆ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಕಠಿಣ ಪರಿಶ್ರಮ ಪಡುತ್ತಿರುವುದನ್ನು ಈ ಚಿತ್ರವು ಬಿಂಬಿಸುತ್ತದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.