ಇಂಗ್ಲೆಂಡ್‌ ಎದುರಿನ ಏಕದಿನ ಸರಣಿಯಲ್ಲಿ ಕರ್ನಾಟಕದ ವೇಗಿಗೆ ಜಾಕ್‌ಪಾಟ್‌..?

By Suvarna NewsFirst Published Mar 16, 2021, 3:15 PM IST
Highlights

ಇಂಗ್ಲೆಂಡ್‌ ವಿರುದ್ದ ಮುಂಬರುವ ಏಕದಿನ ಸರಣಿಗೆ ಕನ್ನಡಿಗನಿಗೆ ಬುಲಾವ್‌ ಸಿಗುವ ಸಾಧ್ಯತೆಯಿದೆ. ಯಾರು ಆ ಕನ್ನಡಿಗ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಮುಂಬೈ(ಮಾ.16): ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟಿ20 ಸರಣಿ ಮುಕ್ತಾಯವಾದ ಬಳಿಕ ಉಭಯ ತಂಡಗಳು ಪುಣೆಯಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆ. ವಿಶ್ವಕಪ್‌ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ಗೆ ಭಾರತ ತವರಿನಲ್ಲಿ ಯಾವ ರೀತಿ ಪೈಪೋಟಿ ನೀಡಲಿದೆ ಎನ್ನುವ ಕುತೂಹಲ ಜೋರಾಗಿದೆ.

ಖಾಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾದಲ್ಲಿ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣಗೆ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ನೀಳಕಾಯದ ಪ್ರಸಿದ್ದ್ ಕೃಷ್ಣ ಇತ್ತೀಚೆಗಷ್ಟೇ ಮುಕ್ತಾಯವಾದ ವಿಜಯ್‌ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ಪರ 14 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಹೀಗಾಗಿ ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್‌, ನವದೀಪ್‌ ಸೈನಿ ಹಾಗೂ ಶಾರ್ದೂಲ್‌ ಠಾಕೂರ್‌ ಜತೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನಗಿಟ್ಟಿಸಲು ಪೈಪೋಟಿ ನಡೆಸಬೇಕಿದೆ. ಟೀಂ ಇಂಡಿಯಾ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಸೋಮವಾರವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ತಮ್ಮ ರಜೆಯನ್ನು ವಿಸ್ತರಿಸಿದ್ದು, ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ.

ಇಂಗ್ಲೆಂಡ್‌ ವಿರುದ್ದದ 3ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಮಹತ್ವದ ಬದಲಾವಣೆ?

ಇನ್ನು ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರದ ಬರೋಡ ಆಲ್ರೌಂಡರ್‌ ಕೃನಾಲ್ ಪಾಂಡ್ಯಗೂ ಬಿಸಿಸಿಐ ಬುಲಾವ್‌ ನೀಡುವ ಸಾಧ್ಯತೆಯಿದೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ. ವಿಜಯ್ ಹಜಾರೆ ಟೂರ್ನಿಯಲ್ಲಿ ಒಂದು ಶತಕ ಹಾಗೂ 2 ಅರ್ಧಶತಕ ಮಾತ್ರವಲ್ಲದೇ ಬೌಲಿಂಗ್‌ನಲ್ಲೂ ಕೃನಾಲ್ ಪಾಂಡ್ಯ ಸೈ ಎನಿಸಿಕೊಂಡಿದ್ದರು. ಹೀಗಾಗಿ ಈ ಪ್ರಸಿದ್ಧ್ ಕೃಷ್ಣ ಹಾಗೂ ಕೃನಾಲ್‌ ಪಾಂಡ್ಯಗೆ ಕರೆ ನೀಡುವ ಸಾಧ್ಯತೆ ಇದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಮಾರ್ಚ್‌ 23ರಿಂದ ಆರಂಭವಾಗಲಿದ್ದು, ಕ್ರಮವಾಗಿ 26 ಹಾಗೂ 28ರವರೆಗೆ ನಡೆಯಲಿದೆ. 

click me!