Pink Ball Test: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ, ತಂಡದಲ್ಲಿ ಮಹತ್ವದ ಬದಲಾಗಿದೆ

Suvarna News   | Asianet News
Published : Mar 12, 2022, 01:39 PM ISTUpdated : Mar 12, 2022, 01:49 PM IST
Pink Ball Test: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ, ತಂಡದಲ್ಲಿ ಮಹತ್ವದ ಬದಲಾಗಿದೆ

ಸಾರಾಂಶ

* ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ * ಭಾರತ ತಂಡದಲ್ಲಿ ಒಂದು ಮಹತ್ವದ ಬದಲಾವಣೆ * ಶ್ರೀಲಂಕಾ ತಂಡದಲ್ಲಿ ಎರಡು ಬದಲಾವಣೆ

ಬೆಂಗಳೂರು(ಮಾ.12): ಭಾರತ ಹಾಗೂ ಶ್ರೀಲಂಕಾ (India vs Sri Lanka) ತಂಡಗಳ ನಡುವಿನ ಪಿಂಕ್ ಬಾಲ್ ಟೆಸ್ಟ್‌ (Pink Ball Test) ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಮೊಹಾಲಿ ಟೆಸ್ಟ್ (Mohali Test) ಪಂದ್ಯವನ್ನು ಜಯಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ರೋಹಿತ್ ಶರ್ಮಾ ಪಡೆ ಟೆಸ್ಟ್ ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಲೆಕ್ಕಾಚಾರದಲ್ಲಿದೆ. ಇನ್ನೊಂದೆಡೆ ಸರಣಿ ಸಮ ಮಾಡಿಕೊಳ್ಳಲು ಲಂಕಾ ತಂಡ ಎದುರು ನೋಡುತ್ತಿದೆ

ಇಲ್ಲಿನ ಎಂ. ಚಿನ್ನಸ್ವಾಮಿ ಮೈದಾನವು ಮೊದಲ ಬಾರಿಗೆ ಪಿಂಕ್ ಬಾಲ್ ಟೆಸ್ಟ್‌ ಪಂದ್ಯಕ್ಕೆ ಆತಿಥ್ಯವನ್ನು ವಹಿಸಿದೆ. ನಿರೀಕ್ಷೆಯಂತೆಯೇ ಭಾರತ ತಂಡದಲ್ಲಿ ಒಂದು ಬದಲಾವಣೆಗಳನ್ನು ಮಾಡಲಾಗಿದ್ದು, ಜಯಂತ್ ಯಾದವ್ ಬದಲಿಗೆ ಅಕ್ಷರ್ ಪಟೇಲ್ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಇನ್ನೊಂದೆಡೆ ಶ್ರೀಲಂಕಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಕುಸಾಲ್ ಮೆಂಡೀಸ್ ಹಾಗೂ ಪ್ರವೀಣ್ ಜಯವಿಕ್ರಮ ತಂಡ ಕೂಡಿಕೊಂಡಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಪಥುಮ್ ನಿಸ್ಸಾಂಕ ಹಾಗೂ ಲಹಿರು ಕುಮಾರ ತಂಡದಿಂದ ಹೊರಗುಳಿದಿದ್ದಾರೆ.

ವಿರಾಟ್ ಕೊಹ್ಲಿ ಪಾಲಿನ ನೆಚ್ಚಿನ ಸ್ಟೇಡಿಯಂ ಎನಿಸಿಕೊಂಡಿರುವ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ತಮ್ಮ 71ನೇ ಟೆಸ್ಟ್ ಶತಕವನ್ನು ಬಾರಿಸಬಹುದು ಎಂದು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿರಾಟ್ ಕೊಹ್ಲಿ 2019ರಲ್ಲಿ ಬಾಂಗ್ಲಾದೇಶ ವಿರುದ್ದ ಕೋಲ್ಕತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಕಡೆಯ ಬಾರಿಗೆ ಶತಕ ಸಿಡಿಸಿದ್ದರು. ಇದಾದ ಬಳಿಕ ಶತಕ ಬಾರಿಸಲು ವಿಫಲರಾಗಿರುವ ಕೊಹ್ಲಿ, ಬೆಂಗಳೂರಿನಲ್ಲಿ ಶತಕದ ಬರ ನೀಗಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಭಾರತ ಪರ 400ನೇ ಪಂದ್ಯ ಆಡಲಿರುವ ರೋಹಿತ್‌

ರೋಹಿತ್‌ ಶರ್ಮಾ ಬೆಂಗಳೂರು ಟೆಸ್ಟ್‌ನಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ. ಅವರು ಭಾರತ ಪರ ಆಡಲಿರುವ 400ನೇ ಪಂದ್ಯ ಇದಾಗಿದೆ. 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಈ ವರೆಗೂ 230 ಏಕದಿನ, 125 ಟಿ20, 44 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಭಾರತ ಪರ 400 ಪಂದ್ಯಗಳನ್ನು ಆಡಿದ 8ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಮೊದಲು ಸಚಿನ್ ತೆಂಡುಲ್ಕರ್‌(664 ಪಂದ್ಯ), ಎಂ ಎಸ್ ಧೋನಿ(535), ರಾಹುಲ್ ದ್ರಾವಿಡ್‌(504), ವಿರಾಟ್ ಕೊಹ್ಲಿ(457), ಮೊಹಮ್ಮದ್ ಅಜರುದ್ದೀನ್‌(433), ಸೌರವ್ ಗಂಗೂಲಿ(421), ಅನಿಲ್ ಕುಂಬ್ಳೆ(401) ಈ ಸಾಧನೆ ಮಾಡಿದ್ದಾರೆ.

Rohit to Kohli: ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಲಿದೆ Pink Ball Test

4 ವರ್ಷದ ಬಳಿಕ ಬೆಂಗಳೂರಲ್ಲಿ ಟೆಸ್ಟ್‌

ಕೊನೆಯ ಬಾರಿಗೆ ಬೆಂಗಳೂರು ಟೆಸ್ಟ್‌ (Bengaluru Test) ಪಂದ್ಯಕ್ಕೆ ಆತಿಥ್ಯ ವಹಿಸಿದ್ದು 2018ರಲ್ಲಿ. ಭಾರತ ಹಾಗೂ ಆಫ್ಘಾನಿಸ್ತಾನ ನಡುವೆ ಪಂದ್ಯ ನಡೆದಿತ್ತು. ಅದು ಆಫ್ಘಾನಿಸ್ತಾನದ ಆಡಿದ ಮೊದಲ ಟೆಸ್ಟ್‌ ಎನ್ನುವುದು ವಿಶೇಷ. 4 ವರ್ಷಗಳ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣ ಟೆಸ್ಟ್‌ ಪಂದ್ಯಕ್ಕೆ ವೇದಿಕೆಯಾಗಲು ಸಜ್ಜಾಗಿದೆ.

ಬೆಂಗಳೂರಲ್ಲಿ ಮೊದಲ ಪಿಂಕ್‌ ಬಾಲ್‌ ಟೆಸ್ಟ್‌

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ವರೆಗೂ ಒಟ್ಟು 23 ಟೆಸ್ಟ್‌ಗಳು ನಡೆದಿವೆ. ಭಾರತ ಇಲ್ಲಿ ಆಡಿರುವ 23 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದು, 6 ಸೋಲು ಕಂಡಿದೆ. 9 ಪಂದ್ಯಗಳು ಡ್ರಾಗೊಂಡಿವೆ. ಇದೀಗ ಮೊದಲ ಬಾರಿಗೆ ಬೆಂಗಳೂರು ಹಗಲು-ರಾತ್ರಿ ಟೆಸ್ಟ್‌ಗೆ ಸಾಕ್ಷಿಯಾಗಲಿದೆ.

ತಂಡಗಳು ಹೀಗಿವೆ ನೋಡಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಮಯಾಂಕ್‌ ಅಗರ್‌ವಾಲ್‌, ಹನುಮ ವಿಹಾರಿ, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ರವೀಂದ್ರ ಜಡೇಜಾ, ಆರ್‌.ಅಶ್ವಿನ್‌, ಅಕ್ಷರ್‌ ಪಟೇಲ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಶಮಿ.

ಶ್ರೀಲಂಕಾ: ದಿಮುತ್‌ ಕರುಣರತ್ನೆ(ನಾಯಕ), ಲಹಿರು ತಿರಿಮನ್ನೆ, ಕುಸಾಲ್‌ ಮೆಂಡಿಸ್‌, ಮ್ಯಾಥ್ಯೂಸ್‌, ಧನಂಜಯ, ಚರಿತ್ ಅಸಲಂಕ, ನಿರೋಶನ್‌ ಡಿಕ್‌ವೆಲ್ಲಾ, ವಿಶ್ವ ಫರ್ನಾಂಡೋ, ಸುರಂಗ ಲಕ್ಮಲ್‌, ಎಂಬುಲ್ಡೇನಿಯಾ, ಜಯವಿಕ್ರಮ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ