PSL ಥ್ರಿಲ್ಲರ್‌: ಗೆಲುವಿನ ಬೆನ್ನಲ್ಲೇ 'ಗ್ರೇಟ್' ರಾಹುಲ್ ದ್ರಾವಿಡ್ ಮಾತುಗಳನ್ನು ನೆನೆದ ಪಾಕ್ ವೇಗಿ ಮೊಹಮ್ಮದ್ ಅಲಿ!

Published : May 02, 2026, 02:49 PM IST
PSL

ಸಾರಾಂಶ

ಪಾಕಿಸ್ತಾನ್ ಸೂಪರ್ ಲೀಗ್‌ನ ರೋಚಕ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ಕಿಂಗ್ಸ್‌ಮೆನ್ ತಂಡವು ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧ 2 ರನ್‌ಗಳ ಜಯ ಸಾಧಿಸಿತು. ಪಂದ್ಯದ ವೇಳೆ ಪಾಕ್ ವೇಗಿ ಮೊಹಮ್ಮದ್ ಅಲಿ ಮತ್ತು ಎದುರಾಳಿ ಆಟಗಾರನ ನಡುವೆ ಮಾತಿನ ಚಕಮಕಿ ನಡೆದಿತ್ತು.

ಲಾಹೋರ್ (ಮೇ.2): ಪಾಕಿಸ್ತಾನ್ ಸೂಪರ್ ಲೀಗ್‌ನ (PSL) ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಹೈದರಾಬಾದ್ ಕಿಂಗ್ಸ್‌ಮೆನ್ ನಡುವೆ ನಡೆದ ಹೈ-ವೋಲ್ಟೇಜ್ ಕದನದಲ್ಲಿ ಹೈದರಾಬಾದ್ ತಂಡವು ಕೇವಲ 2 ರನ್‌ಗಳ ರೋಚಕ ಜಯ ಸಾಧಿಸಿದೆ. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವು ಕೊನೆಯ ಎಸೆತದವರೆಗೂ ಕುತೂಹಲ ಉಳಿಸಿಕೊಂಡಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಕಿಂಗ್ಸ್‌ಮೆನ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಇಸ್ಲಾಮಾಬಾದ್ ಯುನೈಟೆಡ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 184 ರನ್ ಗಳಿಸಲಷ್ಟೇ ಶಕ್ತವಾಗಿ, ಕೇವಲ 2 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ರನ್ ಬೆನ್ನಟ್ಟುವಿಕೆಯ 16ನೇ ಓವರ್‌ನಲ್ಲಿ ಮೈದಾನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಹೈದರಾಬಾದ್‌ನ ಮಧ್ಯಮ ವೇಗಿ ಮೊಹಮ್ಮದ್ ಅಲಿ ಮತ್ತು ಇಸ್ಲಾಮಾಬಾದ್ ಪರ ಆಡುತ್ತಿದ್ದ ನ್ಯೂಜಿಲೆಂಡ್‌ನ ಮಾರ್ಕ್ ಚಾಪ್ಮನ್ ನಡುವೆ ಮಾತಿನ ಚಕಮಕಿ ನಡೆಯಿತು. ಅಲಿ ಅವರು ಚಾಪ್ಮನ್ ವಿರುದ್ಧ ಕೆಣಕುವ ಹಾವಭಾವಗಳನ್ನು ತೋರಿದ್ದರಿಂದ ಇಬ್ಬರ ನಡುವೆ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಬಳಿಕ ಇತರ ಆಟಗಾರರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಚಾಪ್ಮನ್ 26 ಎಸೆತಗಳಲ್ಲಿ 43 ರನ್ ಗಳಿಸಿ ಇಸ್ಲಾಮಾಬಾದ್ ಪರ ಗರಿಷ್ಠ ಸ್ಕೋರರ್ ಎನಿಸಿದರೆ, ಅಲಿ 44 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು.

ದ್ರಾವಿಡ್ ನೆನೆದ 33ರ ಹರೆಯದ ವೇಗಿ

ಪಂದ್ಯ ಮುಗಿದ ಬಳಿಕ ಮಾತನಾಡಿದ ಮೊಹಮ್ಮದ್ ಅಲಿ ಅವರು ಟೀಮ್ ಇಂಡಿಯಾ ದಂತಕಥೆ ರಾಹುಲ್ ದ್ರಾವಿಡ್ ಅವರನ್ನು ನೆನಪಿಸಿಕೊಂಡಿದ್ದು ಎಲ್ಲರ ಗಮನ ಸೆಳೆಯಿತು. "ದ ಗ್ರೇಟ್ ರಾಹುಲ್ ದ್ರಾವಿಡ್ ಹೇಳಿದಂತೆ - ಯಾರು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡುತ್ತಾರೋ, ಅದೃಷ್ಟವು ಯಾವಾಗಲೂ ಅಂತಹವರನ್ನು ಹುಡುಕಿಕೊಂಡು ಬರುತ್ತದೆ (Luck always comes to those who really work hard)," ಎಂದು ದ್ರಾವಿಡ್ ಅವರ ಮಾತುಗಳನ್ನು ಉಲ್ಲೇಖಿಸಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳು ಅಲಿ ಅವರ ನಡೆಯನ್ನು ಶ್ಲಾಘಿಸಿದ್ದಾರೆ.

ಮಾರ್ನಸ್ ಲಬುಶೇನ್ ನೇತೃತ್ವದ ಹೈದರಾಬಾದ್ ಕಿಂಗ್ಸ್‌ಮೆನ್ ತಂಡವು ಈಗ ಪ್ರಶಸ್ತಿಗಾಗಿ ಬಾಬರ್ ಅಜಮ್ ನೇತೃತ್ವದ ಪೇಶಾವರ ಝಲ್ಮಿ ತಂಡವನ್ನು ಎದುರಿಸಲಿದೆ. ಈ ಮಹತ್ವದ ಫೈನಲ್ ಪಂದ್ಯವು ಭಾನುವಾರ ನಡೆಯಲಿದೆ.

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪಂಜಾಬ್ ಕಿಂಗ್ಸ್ ತಂಡದ ಜೊತೆ ಪ್ರೀತಿ ಜಿಂಟಾ ಟ್ರಾವೆಲ್, ಎಲ್ಲರ ಗಮನಸೆಳೆದ ಹೊಸ ಲುಕ್
IPL: ಓವರ್​ ಮೇಕಪ್​ ಎಂದು ಚಿಯರ್​ಲೇಡಿಗೆ CSK ಫ್ಯಾನ್ ವ್ಯಂಗ​: ಅವಳ ಉತ್ತರಕ್ಕೆ ಇವ ಸುಸ್ತೋ ಸುಸ್ತು!