
ಲಾಹೋರ್(ಜೂ.10): 2010ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿ ಸಿಕ್ಕಬಿದ್ದು 10 ವರ್ಷ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದ ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್, ಈಗ ಮ್ಯಾಚ್ ರೆಫ್ರಿಯಾಗಲು ತಯಾರಾಗುತ್ತಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇತ್ತೀಚೆಗೆ ಅಂಪೈರ್ ಹಾಗೂ ಮ್ಯಾಚ್ ರೆಫ್ರಿಗಳಾಗಲು ಬಯಸುವವರಿಗೆ ನಡೆಸಿದ ಆನ್‌ಲೈನ್ ಲೆವೆಲ್-1 ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ 48 ಕ್ರಿಕೆಟಿಗರ ಪೈಕಿ ಬಟ್ ಕೂಡ ಒಬ್ಬರು. ಆನ್‌ಲೈನ್ ಲೆವೆಲ್-1 ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಮತ್ತೋರ್ವ ಪ್ರಮುಖ ಕ್ರಿಕೆಟಿಗನೆಂದರೆ ಅದು ಅಬ್ದುಲ್ ರವೂಫ್. ಅಬ್ದುಲ್ ರವೂಫ್ ಪಾಕಿಸ್ತಾನ ಪರ 5 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳನ್ನಾಡಿದ್ದಾರೆ.
ಸಚಿನ್ ಸ್ಟ್ರೈಟ್ ಡ್ರೈವ್ ಬಾರಿಸುವುದನ್ನು ಟಿವಿಯಲ್ಲಿ ನೋಡಿ ಕಲಿತೆ: ವಿರೇಂದ್ರ ಸೆಹ್ವಾಗ್
ಸಲ್ಮಾನ್ ಬಟ್ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಪಾಕ್ ದಿಗ್ಗಜ ಕ್ರಿಕೆಟಿಗ ಸಯೀದ್ ಅನ್ವರ್ ಜತೆಗೆ ಬಟ್ ಅವರನ್ನು ಹೋಲಿಸಲಾಗುತ್ತಿತ್ತು. ಸಲ್ಮಾನ್ ಬಟ್ ಪಾಕಿಸ್ತಾನ ಪರ 33 ಟೆಸ್ಟ್, 78 ಏಕದಿನ, 24 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 1889, 2725 ಹಾಗೂ 595 ರನ್ ಬಾರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.