ಕೊರೋನಾ ವೈರಸ್ ವಿರುದ್ಧ ಹೋರಾಡಲು ದಿಟ್ಟ ಹೆಜ್ಜೆ ಇಟ್ಟ ಪಾಕಿಸ್ತಾನ ಕ್ರಿಕೆಟರ್ಸ್!

By Suvarna NewsFirst Published Mar 26, 2020, 3:06 PM IST
Highlights

ಕೊರೋನಾ ವೈರಸ್ ಹರಡುತ್ತಿರುವ ಆತಂಕ ಒಂದೆಡೆಯಾದರೆ, ಮತ್ತೊಂದೆಡೆ ಸಂಪೂರ್ಣ ನೆಲಕ್ಕಚ್ಚಿರುವ ಆರ್ಥಿಕತೆ ಪಾಕಿಸ್ತಾನಕ್ಕೆ ಬಹುದೊಡ್ಡ ಚಿಂತೆಯಾಗಿದೆ. ಪಾಕ್ ಸರ್ಕಾರದ ಬೊಕ್ಕಸ 6 ತಿಂಗಳ ಹಿಂದೆಯೇ ಖಾಲಿಯಾಗಿತ್ತು. ಇದೀಗ ಕೊರೋನಾ ವೈರಸ್ ತಡೆಗಟ್ಟಲು ಪಾಕಿಸ್ತಾನ ಸರ್ಕಾರ ಹಣಕಾಸಿ ಕೊರತೆ ಅನುಭವಿಸುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟಿಗರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಇಸ್ಲಾಮಾಬಾದ್(ಮಾ.26): ಹಲವು ಅಡೆ ತಡೆಗಳನ್ನು ಎದರಿಸುತ್ತಿರುವ ಪಾಕಿಸ್ತಾನ ಇದೀಗ ಕೊರೋನಾ ವೈರಸ್‌ನಿಂದ ಹೈರಾಣಾಗಿದೆ. ಹಣಕಾಸಿನ ಕೊರತೆಯಿಂದ ಬಳಸುತ್ತಿರುವ ಪಾಕಿಸ್ತಾನಕ್ಕೆ ಇದೀಗ ಕ್ರಿಕೆಟಿಗರು ನೆರವಿನ ಹಸ್ತ ಚಾಚಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ(PCB) ಒಪ್ಪಂದದಲ್ಲಿರುವ ಹಾಲಿ ಕ್ರಿಕೆಟಿಗರು ಜೊತೆಯಾಗಿ 50 ಲಕ್ಷ ಪಾಕಿಸ್ತಾನ ರೂಪಾಯಿಯನ್ನು ಸರ್ಕಾರದ ತುರ್ತು ನಿಧಿಗೆ ನೀಡಿದೆ.

ಕೊರೋನಾ ಲಾಕ್‌ಡೌನ್: ಲಕ್ಷಾಂತರ ಮೌಲ್ಯದ ಅಕ್ಕಿ ದಾನ ಮಾಡಿದ ದಾದ..!.

ಪಾಕಿಸ್ತಾನ ಕ್ರಿಕೆಟಿಗರು 50 ಲಕ್ಷ ರೂಪಾಯಿ ಪಾಕ್ ಸರ್ಕಾರಕ್ಕೆ ನೀಡಿದ್ದರೆ, ಪಾಕ್ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಉನ್ನತ ಮಟ್ಟದ ಸಿಬ್ಬಂದಿ ವರ್ಗ ಒಂದು ದಿನದ ವೇತನವನ್ನು ತರ್ತು ನಿಧಿಗೆ ನೀಡಿದೆ ಎಂದು PCB ಚೇರ್ಮೆನ್ ಎಹ್ಸಾನ್ ಮಾಣಿ ಹೇಳಿದ್ದಾರೆ. ವ್ಯವಸ್ಥಾಪ ನಿರ್ದೇಕರು ಸೇರಿದಂತೆ ಕೆಲ ಕ್ರಿಕೆಟ್ ಅಧಿಕಾರಿಗಳು 2 ದಿನದ ಸ್ಯಾಲರಿ ನೀಡಿದ್ದಾರೆ ಎಂದಿದ್ದಾರೆ.

ಎಲ್ಲಾ ಮೊತ್ತವನ್ನು ಸಂಗ್ರಹಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಪಾಕ್ ತುರ್ತು ನಿಧಿಗೆ ನೀಡಲಿದೆ ಎಂದು ಸ್ಪಷ್ಪಪಡಿಸಿದೆ. ಪಾಕಿಸ್ತಾನ ಕ್ರಿಕೆಟಿಗರು ಹಾಗೂ ಪಾಕ್ ಕ್ರಿಕೆಟ್ ಮಂಡಳಿ ದೇಶದ ಸಂಕಷ್ಟದ ಸಮಯದಲ್ಲಿ ಸದಾ ನೆರವು ನೀಡಿದೆ. ಇದೀಗ ದೇಶ ಹಾಗೂ ವಿಶ್ವವೇ ಸಂಕಷ್ಟದಲ್ಲಿ ಸಿಲುಕಿದೆ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸರ್ಕಾರಕ್ಕೆ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಎಹ್ಸಾನ್ ಮಾಣಿ ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟಿಗ ವಾರ್ಷಿಕ ಸ್ಯಾಲರಿ 5 ರಿಂದ 12 ಲಕ್ಷ ರೂಪಾಯಿ.
 

click me!