ಚಾಂಪಿಯನ್ಸ್ ಟ್ರೋಫಿ 2025 ಆಯೋಜನೆಯಿಂದ ಪಾಕಿಸ್ತಾನಕ್ಕೆ 739 ಕೋಟಿ ರೂ. ನಷ್ಟವಾಗಿದೆ. ಭಾರತ ತಂಡ ಟ್ರೋಫಿ ಗೆದ್ದಿದ್ದರಿಂದ ಫೈನಲ್ ಪಂದ್ಯ ದುಬೈನಲ್ಲಿ ನಡೆದಿದ್ದೇ ಇದಕ್ಕೆ ಕಾರಣ. ನಷ್ಟವನ್ನು ಸರಿದೂಗಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಟಗಾರರ ಸಂಬಳ ಕಡಿತಕ್ಕೆ ಮುಂದಾಗಿದೆ.
ಜಾಗತಿಕ ಮಟ್ಟದಲ್ಲಿ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದ ಪಾಕಿಸ್ತಾನ ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ-2025 ಅನ್ನು ಆಯೋಜನೆ ಮಾಡಿ ಪುನಃ 739 ಕೋಟಿ ರೂ. ನಷ್ಟವನ್ನು ಅನುಭವಿಸಿದೆ. ಇದಕ್ಕೆ ನೇರ ಕಾರಣ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದ್ದೇ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಆಡಿದ ಫೈನಲ್ ಪಂದ್ಯ ಸೇರಿದಂತೆ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಯೋಜನೆ ಮಾಡಿ ಭಾರೀ ನಷ್ಟ ಅನುಭವಿಸಿದೆ. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ನಷ್ಟವನ್ನು ಭರಿಸಲು ಆಟಗಾರರ ಸಂಬಳವನ್ನು ಕಡಿತ ಮಾಡುವುದಕ್ಕೆ ಮುಂದಾಗಿದೆ.
ಚಾಂಪಿಯನ್ಸ್ ಟ್ರೋಫಿ 2025 ನಂತರವೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸತತವಾಗಿ ಆರ್ಥಿಕ ಸಂಜಷ್ಟದಿಂದ ಹೊರಬರಲು ಹೋರಾಟ ನಡೆಸುತ್ತಿದೆ. ಮೊದಲಿಗೆ ತಂಡ ಕಳಪೆ ಆಟವಾಡಿ ಕೇವಲ 5 ದಿನಗಳಲ್ಲಿ ಟೂರ್ನಿಯಿಂದ ಹೊರಬಿದ್ದಿತು. ನಂತರ ಟೀಮ್ ಇಂಡಿಯಾ ಫೈನಲ್‌ಗೆ ತಲುಪುವ ಮೂಲಕ ಪಾಕಿಸ್ತಾನದಿಂದ ಹೊರಗೆ ಫೈನಲ್ ಪಂದ್ಯ ಆಯೋಜನೆ ಮಾಡುವಂತೆ ಮಾಡಿತು. ಹೀಗಾಗಿ ಎಲ್ಲೆಡೆ ಪಾಕಿಸ್ತಾನಕ್ಕೆ ಛೀಮಾರಿ ಹಾಕಲಾಗುತ್ತಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಾವುದಕ್ಕೂ ಯೋಗ್ಯವಲ್ಲ ಎಂದು ಸ್ವತಃ ಸ್ವದೇಶಿ ಜನರೇ ಹೇಳುತ್ತಿದ್ದಾರೆ. ಪಾಕಿಸ್ತಾನ ಐಸಿಸಿ ಇವೆಂಟ್ ಮೂಲಕ ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಯೋಜನೆ ರೂಪಿಸಿದ್ದರೆ, ಭಾರತ ಟ್ರೋಫಿ ಗೆಲ್ಲುವ ಮೂಲಕ ಈ ಯೋಜನೆಯನ್ನು ಉಲ್ಟಾ ಹೊಡೆಯುವಂತೆ ಮಾಡಿದೆ. ಇದೀಗ ಪಾಕಿಸ್ತಾನಕ್ಕೆ ಲಾಭದ ಬದಲು ನಷ್ಟ ಅನುಭಸುತ್ತಿದೆ.
ಇದನ್ನೂ ಓದಿ: 91ಕ್ಕೆ ಅಲೌಟ್: ಕಿವೀಸ್ ಎದುರು ಹೀನಾಯ ಸೋಲು ಕಂಡ ಪಾಕಿಸ್ತಾನ!
ವಾಸ್ತವವಾಗಿ, ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರೀ ನಷ್ಟವಾಯಿತು. ಕೇವಲ ಒಂದು ಪಂದ್ಯಕ್ಕೆ 869 ಕೋಟಿ ರೂಪಾಯಿ ಖರ್ಚು ಮಾಡಿದೆ. ಆದರೆ, ಈ ಪಂದ್ಯದಿಂದ ಪಾಕಿಸ್ತಾನಕ್ಕೆ ಕೇವಲ 52 ಕೋಟಿ ರೂಪಾಯಿ ಲಾಭವಾಗಿದೆ. ಹೀಗಾಗಿ 739 ಕೋಟಿ ರೂಪಾಯಿ ನಷ್ಟವಾಗಿದ್ದು, ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ದೊಡ್ಡ ಮೊತ್ತವಾಗಿದೆ. ಆದ್ದರಿಂದ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ಅವರೇ ಗೆಲುವು ಸಾಧ್ಯವಾಗದಿದ್ದರೆ ಕಲಿಯಿರಿ ಎಂದು ಹೇಳುವ ಮೂಲಕ ಕ್ರಿಕೆಟ್ ಮಂಡಳಿಯ ಕೋಪಕ್ಕೆ ಗುರಿಯಾಗಿದ್ದಾರೆ. ಆದ್ದರಿಂದ ಪಿಸಿಬಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಯಿಂದ ಆದ ನಷ್ಟವನ್ನು ಸರಿದೂಗಿಸಲು ದೇಶೀಯ ಕ್ರಿಕೆಟ್ ಆಡುವ ಎಲ್ಲ ಆಟಗಾರರ ವೇತನವನ್ನು ಕಡಿತಗೊಳಿಸಲಾಗುತ್ತಿದೆ.
ಲಾಭದ ಕನಸಿನಿಂದ ಟೂರ್ನಿ ಆಯೋಜನೆ: ಪಾಕಿಸ್ತಾನ ಹಲವು ಕಾರಣಗಳಿಂದಾಗಿ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿಗಳನ್ನು ಆಯೋಜನೆ ಮಾಡಿರಲಿಲ್ಲ. ಆದರೆ, 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಿ, ಭಾರೀ ಲಾಭದ ಕನಸು ಕಂಡಿತ್ತು. ಆದರೆ ಎಲ್ಲವೂ ತಲೆಕೆಳಗಾಗಿದ್ದು, ಲಾಭವಿರಲಿ ನಷ್ಟವನ್ನು ಅನುಭವಿಸಿದೆ. ಹೀಗಾಗಿ ಟೂರ್ನಿಗೆ ಮುನ್ನವಾದ ನಷ್ಟದಿಂದ ಮಂಡಳಿ ಆರ್ಥಿಕವಾಗಿ ದುರ್ಬಲವಾಗಿದೆ. ಇದರ ನಂತರ ಈಗ ದೇಶೀಯ ಕ್ರಿಕೆಟ್ ಆಡುವ ಆಟಗಾರರ ಶುಲ್ಕವನ್ನು ಕಡಿತಗೊಳಿಸಲಾಗುತ್ತಿದೆ. ಸೌಲಭ್ಯಗಳ ಬಗ್ಗೆ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುತ್ತಿದ್ದ ಪಾಕಿಸ್ತಾನ ಈಗ ಮಂಡಿಯೂರಿ ಕುಳಿತಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪಾಕ್ ಕ್ರಿಕೆಟ್ ಬೋರ್ಡ್; ಆಟಗಾರರಿಗೆ ಶಾಕ್!