ಪಾಕ್ ಕ್ರಿಕೆಟ್‌ನಲ್ಲಿ ಫಿಕ್ಸಿಂಗ್‌ ಭೂತ: ಆಟಗಾರರ ಮೊಬೈಲ್ ವಶಕ್ಕೆ?

Naveen Kodase   | Kannada Prabha
Published : Sep 08, 2026, 12:40 PM IST
Pakistan Opener Imam-ul-Haq

ಸಾರಾಂಶ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೆಲವು ಆಟಗಾರರ ಮೊಬೈಲ್‌ಗಳನ್ನು ಜಪ್ತಿ ಮಾಡಿದೆ ಎಂದು ವರದಿಯಾಗಿದೆ. ಸರಣಿ ಸೋಲಿನ ಬಳಿಕ ಈ ಬೆಳವಣಿಗೆಯು ಪಾಕ್ ಕ್ರಿಕೆಟ್‌ನಲ್ಲಿ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ನವದೆಹಲಿ: ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಸದ್ಯಕ್ಕಂತೂ ವಿವಾದಗಳು ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇಂಗ್ಲೆಂಡ್‌ ಸರಣಿಯಲ್ಲಿ ಹೀನಾಯವಾಗಿ ಸೋತಿರುವ ಪಾಕಿಸ್ತಾನ ತಂಡವು ಫಿಕ್ಸಿಂಗ್‌ ನಡೆಸಿರುವ ಆರೋಪ ಕೇಳಿ ಬಂದಿದ್ದು, ಈ ಬೆನ್ನಲ್ಲೇ ಪಾಕ್‌ ಕ್ರಿಕೆಟ್‌ ಮಂಡಳಿ(ಪಿಸಿಬಿ) ಕೆಲ ಆಟಗಾರರ ಮೊಬೈಲ್‌ ಜಪ್ತಿ ಮಾಡಿದೆ ಎಂದು ವರದಿಯಾಗಿದೆ.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಸರಣಿಯು ಹಲವು ನಾಟಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, 2ನೇ ಪಂದ್ಯ ಸೋತ ಬಳಿಕ ಪಾಕ್‌ನ ಕೋಚ್‌ ಹಾಗೂ 7 ಆಟಗಾರರನ್ನು ಮನೆಗೆ ಕಳುಹಿಸಲಾಗಿತ್ತು. ಇದೀಗ ಅಂತಿಮ ಪಂದ್ಯ ಆರಂಭಕ್ಕೂ ಮುನ್ನವೇ ಫಿಕ್ಸಿಂಗ್‌ ಆರೋಪ ಕೇಳಿ ಬಂದಿದೆ. ಮೂಲಗಳ ಪ್ರಕಾರ, ಫಿಕ್ಸಿಂಗ್‌ ಶಂಕೆ ಮೇರೆಗೆ ಪಿಸಿಬಿ 2ನೇ ಟೆಸ್ಟ್‌ ಸೋಲಿನ ಬಳಿಕ ಆಟಗಾರರ ಮೊಬೈಲ್‌ಗಳನ್ನು ಜಪ್ತಿ ಮಾಡಿದೆ. ಅಂತಿಮ ಪಂದ್ಯ ಮುಗಿಯುವವರೆಗೂ ಅವುಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲಿದೆ. ಜತೆಗೆ ತವರಿಗೆ ಹಿಂದಿರುಗುವ ಮೊದಲು ಆಟಗಾರರಿಂದ ಡೇಟಾಗಳನ್ನು ವರ್ಗಾಯಿಸಿಕೊಂಡಿದೆ ಎನ್ನಲಾಗಿದೆ.

ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಸೋತ ಪಾಕಿಸ್ತಾನ:

ಪಾಕಿಸ್ತಾನ ತಂಡವು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಆಗಸ್ಟ್‌ 19ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವು 7 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಇದಾದ ಬಳಿಕ ಆಗಸ್ಟ್‌ 27ರಿಂದ ಲಾರ್ಡ್ಸ್‌ ಮೈದಾನದಲ್ಲಿ ಆರಂಭವಾದ ಎರಡನೇ ಟೆಸ್ಟ್‌ ಪಂದ್ಯದಲ್ಲೂ ಇಂಗ್ಲೆಂಡ್ 194 ರನ್‌ಗಳಿಂದ ಸೋಲು ಅನುಭವಿಸಿತ್ತು. ಇದರೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಪಾಕಿಸ್ತಾನ ತಂಡವು ಟೆಸ್ಟ್ ಸರಣಿಯನ್ನು 0-2 ಅಂತರದಲ್ಲಿ ಸೋಲು ಅನುಭವಿಸಿದೆ. ಇದೀಗ ಮೂರನೇ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 9 ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿದೆ.

ಶಫಾಲಿಗೆ ಕೈ ಸನ್ನೆ ಮಾಡಿ ಗೆಟ್‌ ಔಟ್‌ ಹೇಳಿದ್ದ ಪಾಕ್‌ನ ನಾಯಕಿ ಫಾತಿಮಾಗೆ ದಂಡ

ದುಬೈ: ವನಿತೆಯರ ಏಷ್ಯಾಕಪ್‌ ಕ್ರಿಕೆಟ್‌ನಲ್ಲಿ ಶನಿವಾರ ಭಾರತದ ಆಟಗಾರ್ತಿ ಶಫಾಲಿ ವರ್ಮಾ ಅವರು ಔಟ್‌ ಆದಾಗ ಮೈದಾನದಿಂದ ಹೊರಗೆ ಹೋಗು ಎಂಬರ್ಥದಲ್ಲಿ ಅಪಹಾಸ್ಯಕರ ರೀತಿ ಕೈ ಸನ್ನೆ ಮಾಡಿದ್ದ ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಪಂದ್ಯದ ಸಂಭಾವನೆಯ ಶೇ.10ರಷ್ಟು ದಂಡ ವಿಧಿಸಿದೆ. 2ನೇ ಓವರ್‌ನಲ್ಲಿ ಶಫಾಲಿ ಔಟ್‌ ಆಗಿದ್ದರು. ಆಗ ಸನಾ, ಶಫಾಲಿಗೆ ಪೆವಿಲಿಯನ್‌ ಕಡೆ ನಡೆ ಎಂದು ಕೈ ಸನ್ನೆ ಮಾಡಿದ್ದರು. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ ದಂಡ ವಿಧಿಸಿದೆ. ಜತೆಗೆ ಒಂದು ವರ್ಷದಲ್ಲಿ ಎರಡನೇ ಬಾರಿ ನಿಯಮ ಉಲ್ಲಂಘಿಸಿದ್ದಕ್ಕೆ 1 ಡಿಮೆರಿಟ್‌ ಅಂಕ ನೀಡಲಾಗಿದೆ.

ಐಪಿಎಲ್‌ ರೀತಿ ಬಿಗ್‌ಬ್ಯಾಶ್‌ ಟಿ20 ಲೀಗ್‌ ಖಾಸಗೀಕರಣಕ್ಕೆ ನಿರ್ಧಾರ

ಮೆಲ್ಬರ್ನ್‌: ಆಸ್ಟ್ರೇಲಿಯಾದ ಪ್ರಸಿದ್ಧ ಟಿ20 ಕ್ರಿಕೆಟ್‌ ಲೀಗ್‌ ಆಗಿರುವ ಬಿಗ್‌ಬ್ಯಾಶ್‌ಅನ್ನು ಐಪಿಎಲ್‌ ರೀತಿಯಲ್ಲೇ ಖಾಸಗೀಕರಣಗೊಳಿಸಲು ಕ್ರಿಕೆಟ್‌ ಆಸ್ಟ್ರೇಲಿಯಾ ಮುಂದಾಗಿದೆ. ಅಲ್ಲಿನ ಕೆಲ ತಂಡಗಳ ವಿರೋಧ ನಡುವೆಯೂ ಮಂಡಳಿ ಈ ಹೆಜ್ಜೆ ಇಟ್ಟಿದೆ.

ಈಗ ಲೀಗನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ನಡೆಸುತ್ತಿದ್ದು, ಎಲ್ಲಾ ತಂಡಗಳ ಪಾಲನ್ನು ತನ್ನಲ್ಲೇ ಉಳಿಸಿಕೊಂಡಿದೆ. ಆದರೆ ಮುಂದಿನ ದಿನಗಳಲ್ಲಿ ತಂಡಗಳ ಶೇ.49ರಷ್ಟು ಪಾಲನ್ನು ಖಾಸಗಿಯವರಿಗೆ ನೀಡಲು ತೀರ್ಮಾನಿಸಿದೆ. ಇದಕ್ಕೆ ನ್ಯೂ ಸೌಥ್‌ ವೇಲ್ಸ್‌ ಹಾಗೂ ಕ್ವೀನ್ಸ್‌ಲ್ಯಾಂಡ್‌ ತಂಡಗಳ ವಿರೋಧವಿದೆ. ಆದರೂ ಖಾಸಗೀಕರಣ ನಿರ್ಧಾರದಿಂದ ಕ್ರಿಕೆಟ್‌ ಆಸ್ಟ್ರೇಲಿಯಾ ಹಿಂದೆ ಸರಿಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಲೀಗ್‌ನ 8 ತಂಡಗಳ ಪೈಕಿ 6 ತಂಡಗಳು ಕೆಲ ತಿಂಗಳ ಹಿಂದೆಯೇ ಖಾಸಗೀರಣ ವಿಚಾರದಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯಾ ಜೊತೆ ಚರ್ಚೆ ನಡೆಸಿದ್ದು, ಒಪ್ಪಂದಕ್ಕೆ ಸಹಿ ಹಾಕಿದ್ದವು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದುಲೀಪ್ ಟ್ರೋಫಿ: ಇಶಾನ್ ಕಿಶನ್ ಸ್ಪೋಟಕ 270, ಪೂರ್ವ ವಲಯ 708 ರನ್!
Sachin: ₹70,00,00,000 ಕೋಟಿ ಕೊಟ್ಟು ಭರ್ಜರಿ ಜಮೀನು ಖರೀದಿಸಿದ ಸಚಿನ್ ತೆಂಡೂಲ್ಕರ್; ಈ ಹಿಲ್‌ಸ್ಟೇಷನ್‌ನಲ್ಲಿ ಏನು ತಯಾರಾಗುತ್ತೆ?