
ಹೈದರಾಬಾದ್[ಮಾ.02]: ಮಹೇಂದ್ರ ಸಿಂಗ್ ಧೋನಿ ವಿಕೆಟ್ ಹಿಂದಿರುವಾಗ ಕ್ರೀಸ್ ತೊರೆಯಬೇಡಿ ಎಂದು ICC ನೀಡಿದ್ದ ಎಚ್ಚರಿಯನ್ನು ಮರೆತ ಆಸ್ಟ್ರೇಲಿಯಾ ತಂಡದ ಪೀಟರ್ ಹ್ಯಾಂಡ್ಸ್’ಕಂಬ್ ಕೊನೆಗೂ ಬೆಲೆ ತೆತ್ತಿದ್ದಾರೆ. ಈ ಮೂಲಕ ಧೋನಿ ವಿಕೆಟ್ ಹಿಂದೆ ತಾವೇ ಬಾಸ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಧೋನಿ ಇರುವಾಗ ಗೆರೆ ದಾಟಬೇಡಿ: ಇದು ICC ನೀಡಿದ ಎಚ್ಚರಿಕೆ..!
ತಮ್ಮ ಚಾಣಾಕ್ಷ ವಿಕೆಟ್’ಕೀಪಿಂಗ್ ಮೂಲಕ ಎದುರಾಳಿ ಬ್ಯಾಟ್ಸ್’ಮನ್’ಗಳನ್ನು ತಬ್ಬಿಬ್ಬುಗೊಳಿಸಿರುವ ಧೋನಿ, 37 ವರ್ಷವಾದರೂ ವಿಕೆಟ್ ಹಿಂದಿನ ಚುರುಕುತನ ಕಮ್ಮಿಯಾಗಿಲ್ಲ. ಏಕದಿನ ಕ್ರಿಕೆಟ್’ನಲ್ಲಿ ಗರಿಷ್ಠ ಸ್ಟಂಪಿಂಗ್[120] ಮಾಡಿ ವಿಶ್ವದಾಖಲೆ ಬರೆದಿರುವ ಧೋನಿ, ಆಸಿಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೂ ಚುರುಕಿನ ಸ್ಟಂಪಿಂಗ್ ಮೂಲಕ ಗಮನ ಸೆಳೆದಿದ್ದಾರೆ.
ಪಂದ್ಯದಲ್ಲಿ ಮುಗ್ಗರಿಸಿದರೂ ಧೋನಿ ಶ್ಲಾಘಿಸಿದ ಬಿಸಿಸಿಐ !
ಇನ್ನು ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ಏಕದಿನ ಸರಣಿಗೆ ತಂಡ ಕೂಡಿಕೊಂಡಿದ್ದಾರೆ. ಕುಲ್ದೀಪ್ ಎಸೆದ 30ನೇ ಓವರ್’ನಲ್ಲಿ ಆಸಿಸ್ ಬ್ಯಾಟ್ಸ್’ಮನ್ ಪೀಟರ್ ಹ್ಯಾಂಡ್ಸ್’ಕಂಬ್ ಮುನ್ನುಗ್ಗಿ ಬಾರಿಸಲು ಯತ್ನಿಸಿದರು. ಆದರೆ ಬ್ಯಾಟ್ ವಂಚಿಸಿದ ಬಾಲ್ ಧೋನಿ ಕೈ ಸೇರಿತು. ತಡ ಮಾಡದ ಧೋನಿ ಬೇಲ್ಸ್ ಎಗರಿಸುವಲ್ಲಿ ಯಶಸ್ವಿಯಾದರು.
ಹೀಗಿತ್ತು ಆ ಕ್ಷಣ..
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.