World Cup 2023: ದಕ್ಷಿಣ ಆಫ್ರಿಕಾ ತಂಡಕ್ಕೆ 102 ರನ್‌ಗಳ ಭರ್ಜರಿ ಗೆಲುವು

By Santosh Naik  |  First Published Oct 7, 2023, 10:27 PM IST

ತನ್ನ ಬ್ಯಾಟಿಂಗ್‌ ವಿಭಾಗ ಪ್ರಚಂಡ ನಿರ್ವಹಣೆಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಗೆಲುವಿನೊಂದಿಗೆ ವಿಶ್ವಕಪ್‌ ಟೂರ್ನಿಯ ಶುಭಾರಂಭ ಮಾಡಿದೆ. ಶನಿವಾರ ನಡೆದ ದಿನದ 2ನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 102 ರನ್‌ಗಳಿಂದ ಮಣಿಸಿತು.


ನವದೆಹಲಿ (ಅ.7): ಅನುಭವಿ ಕ್ವಿಂಟನ್‌ ಡಿ ಕಾಕ್‌, ಯುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ರಸ್ಸಿ ವಾನ್‌ ಡರ್‌ ಡುಸೆನ್‌ ಹಾಗೂ ಏಡೆನ್‌ ಮಾರ್ಕ್ರಮ್‌ ಅವರ ಶತಕಗಳ ನೆರವಿನಿಂದ 2023ರ ಏಕದಿನ ವಿಶ್ವಕಪ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದಾಖಲೆಯ 428 ರನ್‌ ಕಲೆಹಾಕಿದ್ದ ದಕ್ಷಿಣ ಆಫ್ರಿಕಾ ತಂಡ 102 ರನ್‌ಗಳ ದೊಡ್ಡ ಗೆಲುವು ಕಂಡಿದೆ. ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ತನ್ನ ಪ್ರಚಂಡ ಬ್ಯಾಟಿಂಗ್‌ ಶಕ್ತಿಯನ್ನು ಅನಾವರಣ ಮಾಡಿದ ದಕ್ಷಿಣ ಆಫ್ರಿಕಾ ತಂಡ ದೊಡ್ಡ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ. ಮೊದಲ ಅವಧಿಯ ಆಟದಲ್ಲಿಯೇ ಪಂದ್ಯ ಬಹುತೇಕವಾಗು ಮುಗಿದಿತ್ತಾದರೂ, ಶ್ರೀಲಂಕಾ ತಂಡ ತನ್ನ ಬ್ಯಾಟಿಂಗ್‌ನಲ್ಲಿ 44.5 ಓವರ್‌ಗಳನ್ನು ಆಟವಾಡಿತು.  ಆರಂಭದಲ್ಲಿ ಕುಸಲ್‌ ಮೆಂಡಿಸ್‌ ಕೆಲಹೊತ್ತು ಸ್ಫೋಟಕ ಆಟವಾಡಿದ್ದು ಬಿಟ್ಟರೆ, ಶ್ರೀಲಂಕಾ ತಂಡದ ಇನ್ನಿಂಗ್ಸ್‌ನಲ್ಲಿ ಮೊತ್ತ ಚೇಸಿಂಗ್‌ ಮಾಡುವ ಹುರುಪು ಕಾಣಲಿಲ್ಲ. ಇದರಿಂದಾಗಿ 326 ರನ್‌ಗೆ ತಂಡ ಆಲೌಟ್‌ ಆಯಿತು.

ಚೇಸಿಂಗ್‌ ಆರಂಭಿಸಿದ ಶ್ರೀಲಂಕಾ ತಂಡ 1 ರನ್‌ ಗಳಿಸುವ ವೇಳೆಗೆ ಆರಂಭಿಕ ಆಟಗಾರ ಪಥುಮ್‌ ನಿಸ್ಸಂಕ ವಿಕೆಟ್‌ ಕಳೆದುಕೊಂಡಿತು. ಈ ವೇಳೆ ಕ್ರೀಸ್‌ಗೆ ಇಳಿದ ವಿಕೆಟ್‌ ಕೀಪರ್‌ ಕುಸಲ್‌ ಮೆಂಡಿಸ್‌ ತಾವು ಎದುರಿಸಿದ ಮೊದಲ ಎಸೆತದಲ್ಲಿಯೇ ಎಲ್‌ಬಿ ಆದರೂ, ಡಿಆರ್‌ಎಸ್‌ ಮೂಲಕ ಬಚಾವ್‌ ಆದರು. ಆ ಬಳಿಕ 2ನೇ ವಿಕೆಟ್‌ಗೆ ಕುಸಲ್‌ ಪೆರೇರಾ ಹಾಗೂ ಕುಸಲ್‌ ಮೆಂಡಿಸ್‌ 66 ರನ್‌ಗಳ ಜೊತೆಯಾಟವಾಡಿದರು. ಇದರಲ್ಲಿ ಬಹುತೇಕ ರನ್‌ಗಳನ್ನು ಕುಸಲ್‌ ಮೆಂಡಿಸ್‌ ಅವರೇ ಬಾರಿಸಿದ್ದರು. ತಂಡದ ಮೊತ್ತ 67 ರನ್‌ ಆಗಿದ್ದಾಗ 15 ಎಸೆತಗಳ್ಲಿ 7 ರನ್ ಬಾರಿಸಿದ್ದ ಪೆರೇರಾ ಔಟಾದರೆ, ಕುಸಲ್‌ ಮೆಂಡೀಸ್‌ ಹಾಗೂ ಚರಿತ್‌ ಅಸಲಂಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದ್ದರು.

Tap to resize

Latest Videos

click me!