ICC T20 World Cup: ಚುಟುಕು ಕ್ರಿಕೆಟ್‌ ವಿಶ್ವಕಪ್‌ಗೆ ಬಲಿಷ್ಠ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪ್ರಕಟ..!

By Naveen Kodase  |  First Published Apr 29, 2024, 9:57 AM IST

ಗಾಯದ ಸಮಸ್ಯೆಯಿಂದಾಗಿ ನೀಳಕಾಯದ ವೇಗಿ ಕೈಲ್ ಜೇಮಿಸನ್ ಹಾಗೂ ಆಡಂ ಮಿಲ್ನೆ ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಇನ್ನು ಟಾಮ್ ಲೇಥಮ್, ಟಿಮ್ ಸೈಫರ್ಟ್ ಹಾಗೂ ವಿಲ್ ಯಂಗ್ ಕೂಡಾ ಚುಟುಕು ವಿಶ್ವಕಪ್ ಟೂರ್ನಿಗೆ ಕಿವೀಸ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.


ವೆಲ್ಲಿಂಗ್ಟನ್‌(ಏ.29): ಮುಂಬರುವ ಐಸಿಸಿ ಟಿ20  ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪ್ರಕಟಗೊಂಡಿದ್ದು, ಕೇನ್ ವಿಲಿಯಮ್ಸನ್ ಕಿವೀಸ್ ತಂಡವನ್ನು ಮುನ್ನಡೆಸಲಿದ್ದಾರೆ. 9ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಮುಂಬರುವ ಜೂನ್ 01ರಿಂದ ಆರಂಭವಾಗಲಿದೆ.

ಕೇನ್ ವಿಲಿಯಮ್ಸನ್ ಇದೀಗ ಆರನೇ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದು, ನಾಲ್ಕನೇ ಬಾರಿಗೆ ನಾಯಕನಾಗಿ ಕಿವೀಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಅನುಭವಿ ವೇಗಿ ಟಿಮ್ ಸೌಥಿಗಿದು 7ನೇ ಟಿ20 ವಿಶ್ವಕಪ್ ಆಗಿದ್ದು, ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಪಾಲಿಗೆ 5ನೇ ಟಿ20 ವಿಶ್ವಕಪ್ ಎನಿಸಿದೆ. ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಕನವರಿಕೆಯಲ್ಲಿದೆ.

Latest Videos

undefined

ಟಿ20 ವಿಶ್ವಕಪ್ ಗೆಲ್ಲಲು ಪಾಕ್ ಮಾಸ್ಟರ್ ಪ್ಲಾನ್; ಭಾರತದ ಕೋಚ್ ಈಗ ಪಾಕ್ ಗುರು..!

ಗಾಯದ ಸಮಸ್ಯೆಯಿಂದಾಗಿ ನೀಳಕಾಯದ ವೇಗಿ ಕೈಲ್ ಜೇಮಿಸನ್ ಹಾಗೂ ಆಡಂ ಮಿಲ್ನೆ ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಇನ್ನು ಟಾಮ್ ಲೇಥಮ್, ಟಿಮ್ ಸೈಫರ್ಟ್ ಹಾಗೂ ವಿಲ್ ಯಂಗ್ ಕೂಡಾ ಚುಟುಕು ವಿಶ್ವಕಪ್ ಟೂರ್ನಿಗೆ ಕಿವೀಸ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

New Zealand always finds a special way to announce their World Cup squad. 😄👌pic.twitter.com/3aPcuUgSak

— Mufaddal Vohra (@mufaddal_vohra)

ಇನ್ನುಳಿದಂತೆ ಯುವ ಆಲ್ರೌಂಡರ್ ರಚಿನ್ ರವೀಂದ್ರ ಹಾಗೂ ವೇಗಿ ಮ್ಯಾಟ್ ಹೆನ್ರಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇನ್ನುಳಿದಂತೆ ಯಾವುದೇ ಅಚ್ಚರಿಯ ಆಯ್ಕೆ ಕಿವೀಸ್ ತಂಡದಲ್ಲಿಲ್ಲ. ನ್ಯೂಜಿಲೆಂಡ್ ತಂಡದಲ್ಲಿ ಸಾಕಷ್ಟು ಅನುಭವಿ ಹಾಗೂ ಯುವ ಆಟಗಾರರ ಪಡೆ ಹೊಂದಿದ್ದು, ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಕನವರಿಕೆಯಲ್ಲಿದೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿ: ಭಾರತ ತಂಡ ಆಯ್ಕೆಗೆ ಅಗರ್‌ಕರ್-ರೋಹಿತ್ ಬಿಸಿಬಿಸಿ ಚರ್ಚೆ..! ರೇಸ್‌ನಲ್ಲಿ ಸಂಜು, ಚಹಲ್

ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವು 'ಸಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜೂನ್ 07ರಂದು ಗಯಾನದಲ್ಲಿ ಆಫ್ಘಾನಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇನ್ನು ಇದೇ ಗುಂಪಿನಲ್ಲಿ ಆತಿಥೇಯ ವೆಸ್ಟ್ ಇಂಡೀಸ್, ಉಗಾಂಡ ಹಾಗೂ ಪಪುವಾ ನ್ಯೂಗಿನಿ ತಂಡಗಳು ಸ್ಥಾನ ಪಡೆದಿವೆ.

ಟಿ20 ವಿಶ್ವಕಪ್ ಟೂರ್ನಿಗೆ ನ್ಯೂಜಿಲೆಂಡ್ ತಂಡ ಹೀಗಿದೆ ನೋಡಿ:

ಕೇನ್ ವಿಲಿಯಮ್ಸನ್(ನಾಯಕ), ಫಿನ್ ಅಲೆನ್, ಟ್ರೆಂಟ್ ಬೌಲ್ಟ್, ಮಿಚೆಲ್ ಬ್ರಾಸ್‌ವೆಲ್, ಮಾರ್ಕ್‌ ಚಾಂಪ್ಮನ್, ಡೆವೊನ್ ಕಾನ್‌ವೇ, ಲಾಕಿ ಫರ್ಗ್ಯೂಸನ್, ಮ್ಯಾಟ್ ಹೆನ್ರಿ, ಡೇರಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಫ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ. 
ಮೀಸಲು ಆಟಗಾರ: ಬೆನ್ ಸೀರ್ಸ್

click me!