ಆಸ್ಟ್ರೇಲಿಯಾದಿಂದ ತವರಿಗೆ ವಾಪಸ್ ಆದ ನ್ಯೂಜಿಲೆಂಡ್ ಕ್ರಿಕೆಟಿಗರಿಗೆ ದಿಗ್ಬಂಧನ!

By Suvarna NewsFirst Published Mar 19, 2020, 3:40 PM IST
Highlights

ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವಿಶ್ವವೇ ವೈರಸ್‌ನಿಂದ ತತ್ತರಿಸಿದೆ. ಕೊರೋನಾ ವೈರಸ್ ಕ್ರಿಕೆಟಿಗೂ ತೀವ್ರ ಹೊಡೆತ ನೀಡಿದೆ. ಆಸ್ಟ್ರೇಲಿಯಾ ಪ್ರವಾಸ ಮೊಟಕುಗೊಳಿಸಿ ತವರಿಗೆ ವಾಪಸ್ ಆದ ನ್ಯೂಜಿಲೆಂಡ್ ಕ್ರಿಕೆಟಿಗರಿಗೆ 14 ದಿನದ ದಿಗ್ಬಂಧನ ವಿದಿಸಲಾಗಿದೆ.
 

ವೆಲ್ಲಿಂಗ್ಟನ್(ಮಾ.19): ಏಕದಿನ ಹಾಗೂ ಟಿ20 ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ನ್ಯೂಜಿಲೆಂಡ್ ತಂಡ ಸರಣಿ ಮೊಟಕುಗೊಳಿಸಿ ಡಿಢೀರ್ ವಾಪಸ್ ಬಂದಿದೆ. ತವರಿಗೆ ಆಗಮಿಸುತ್ತಿದ್ದಂತೆ ನ್ಯೂಜಿಲೆಂಡ್ ಕ್ರಿಕೆಟಿಗರಿಗೆ ಸ್ವಯಂ ದಿಗ್ಬಂಧನಕ್ಕೆ ವೈದ್ಯರು ಸೂಚಿಸಿದ್ದಾರೆ.

ಭಾರತದಿಂದ ತೆರಳಿದ ದ.ಆಫ್ರಿಕಾ ಕ್ರಿಕೆಟಿಗರಿಗೆ 14 ದಿನ ದಿಗ್ಬಂಧನ

ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯಕ್ಕೆ ಅಭಿಮಾನಿಗಳ ಪ್ರವೇಶ ನಿರಾಕರಿಸಿ  ಪಂದ್ಯ ಆಯೋಜಿಸಲಾಗಿತ್ತು. ಖಾಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ 71 ರನ್ ಸೋಲು ಅನುಭವಿಸಿತ್ತು. ಇದೇ ವೇಳೆ ಕೊರೋನಾ ವೈರಸ್ ಭೀತಿ ಹೆಚ್ಚಾದ ಕಾರಣ ದಿಢೀರ್ ಸರಣಿ ಅರ್ಧಕ್ಕೆ ಬಿಟ್ಟು ತವರಿಗೆ ಮರಳಿತ್ತು.

IPL 2020 ಟೂರ್ನಿ ಆಯೋಜಿಸಲು ಬಿಸಿಸಿಐನಿಂದ ಪ್ಲಾನ್ B, ಜುಲೈನಲ್ಲಿ ಟೂರ್ನಿ?

ತವರಿಗೆ ಆಗಮಿಸಿದ ನ್ಯೂಜಿಲೆಂಡ್ ಕ್ರಿಕೆಟಿಗರಿಗೆ ಸ್ವಂಯ ದಿಗ್ಬಂಧನಕ್ಕೆ ಸೂಚಿಸಲಾಗಿದೆ. ವೇಗಿ ಲ್ಯೂಕ್ ಫರ್ಗ್ಯೂಸನ್‌ಗೆ ಗಂಟಲು ನೋವು ಕಾಣಿಸಿಕೊಂಡ ಕಾರಣ ಪ್ರತ್ಯೇಕವಾಗಿರಿಸಿ ತಪಾಸಣೆ ನಡೆಸಲಾಯಿತು. ಆದರೆ ಫರ್ಗ್ಯೂಸನ್‌ಗೆ ಕೊರೋನಾ ವೈರಸ್ ತಗುಲಿಲ್ಲ ಎಂದು ವೈದ್ಯರು ಧೃಡಪಡಿಸಿದ್ದಾರೆ.

ಐಪಿಎಲ್‌ ನಡೆಯದಿದ್ದರೆ ಏನಾಗಲಿದೆ ಧೋನಿ ಭವಿಷ್ಯ?

ಭಾರತದಿಂದ ತವರಿಗೆ ಮರಳಿದ್ದ ಸೌತ್ ಆಫ್ರಿಕಾ ಕ್ರಿಕೆಟಿರಿಗೂ ಸ್ವಯಂ ದಿಗ್ಬಂಧನ ವಿದಿಸಲಾಗಿದೆ. ಮಾರ್ಚ್  29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ತಾತ್ಕಾಲಿಕ ರದ್ದು ಮಾಡಲಾಗಿದೆ. ಎಪ್ರಿಲ್ 15ಕ್ಕ ಆರಂಭಿಸಲು ನಿರ್ಧರಿಸಿರುವ ಬಿಸಿಸಿಐಗೆ ಐಪಿಎಲ್ ಆಯೋಜನೆ ಇದೀಗ ಸವಾಲಾಗಿ ಪರಿಣಮಿಸಿದೆ.
 

click me!