ಏಕದಿನ ಸರಣಿಗಾಗಿ ಭಾರತ ಪ್ರವಾಸ ಮಾಡಿದ ಸೌತ್ ಆಫ್ರಿಕಾ ತಂಡ ಆರಂಭಿಕ ಪಂದ್ಯಕ್ಕಾಗಿ ಮೈದಾನಕ್ಕಿಳಿಯಿತು. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ಬೆನ್ನಲ್ಲೇ ಬಿಸಿಸಿಐ ಕೊರೋನಾ ವೈರಸ್ ಆತಂಕದಿಂದ ಟೂರ್ನಿ ರದ್ದು ಮಾಡಿತು. ತಕ್ಷಣವೇ ತವರಿಗೆ ವಾಪಾಸ್ಸಾದ ಸೌತ್ ಆಫ್ರಿಕಾ ಕ್ರಿಕೆಟಿಗರಿಗೆ ಇದೀಗ ದಿಗ್ಬಂಧನ ವಿದಿಸಲಾಗಿದೆ.
ಜೋಹಾನ್ಸ್‌ಬರ್ಗ್(ಮಾ.19): ಕೊರೋನಾ ಸೋಂಕಿ ಭೀತಿಯಿಂದಾಗಿ ಭಾರತ ವಿರುದ್ಧದ ಏಕದಿನ ಸರಣಿ ರದ್ದಾದ ಕಾರಣ ತವರಿಗೆ ವಾಪಸಾದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಟಗಾರರಿಗೆ 14 ದಿನಗಳ ಕಾಲ ಸ್ವಯಂ ದಿಗ್ಬಂಧನದಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದಾರೆ.
ಇದನ್ನೂ ಓದಿ: ಕೈತೊಳೆಯಿರಿ’ ಅಭಿಯಾನಕ್ಕೆ ಸಚಿನ್, ಸಿಂಧು ಬೆಂಬಲ
ತಂಡದ ವೈದ್ಯಕೀಯ ಅಧಿಕಾರಿ ಡಾ.ಶೌಹಿಬ್ ಮಾಂಜ್ರ ಆಟಗಾರರಿಗೆ ಪ್ರತ್ಯೇಕವಾಗಿ ಇರಲು ಸೂಚಿಸಿದ್ದು, ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಪರೀಕ್ಷೆಗೆ ಒಳಪಡುವಂತೆ ತಿಳಿಸಿದ್ದಾರೆ. ಭಾರತದಲ್ಲಿ ಇದ್ದ ಸಮಯದಲ್ಲೂ ಆಟಗಾರರು ಪ್ರತ್ಯೇಕವಾಗಿದ್ದರು. ನಮ್ಮ ತಂಡ ಸುರಕ್ಷಿತವಾಗಿ ತವರಿಗೆ ವಾಪಸಾಗಲು ಬಿಸಿಸಿಐ ಎಲ್ಲಾ ರೀತಿಯಲ್ಲೂ ಸಹಕರಿಸಿತು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೋನಾ ವಿರುದ್ಧ ತೊಡೆ ತಟ್ಟಿದ ಕ್ರಿಕೆಟರ್ಸ್..!
ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 3 ಪಂದ್ಯಗಳ ಏಕದಿನ ಸರಣಿ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನುಳಿದ 2 ಪಂದ್ಯ ಕೊರೋನಾ ವೈರಸ್ ಭೀತಿಯಿಂದ ರದ್ದಾಯಿತು. ವೈರಸ್ ಹರಡದಂತೆ ಮುನ್ನಚ್ಚೆರಿಕ ಕ್ರಮವಾಗಿ ಬಿಸಿಸಿಐ ಟೂರ್ನಿ ರದ್ದು ಮಾಡಿತು.