ದೀಪಕ್ ಚಹಾರ್ ಇಂಜುರಿ; ಟೀಂ ಇಂಡಿಯಾ ಸೇರಿಕೊಂಡ RCB ವೇಗಿ!

By Suvarna News  |  First Published Dec 19, 2019, 3:17 PM IST

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಟೀಂ ಇಂಡಿಯಾ ವೇಗಿ ದೀಪಕ್ ಚಹಾರ್ ಹೊರಬಿದ್ದಿದ್ದಾರೆ. ಗಾಯಗೊಂಡು ತಂಡದಿಂದ ಹೊರಬಿದ್ದಿರುವ ಚಹಾರ್ ಬದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಗಿ ತಂಡ ಸೇರಿಕೊಂಡಿದ್ದಾರೆ. 


ಮುಂಬೈ(ಡಿ.19): ಎಲ್ಲರೂ ಐಪಿಎಲ್ ಹರಾಜಿನತ್ತ ಗಮನವಿಟ್ಟಿದ್ದಾರೆ. ಇದರ ನಡುವೆ ಟೀಂ ಇಂಡಿಯಾ ವೇಗಿ ದೀಪಕ್ ಚಹಾರ್ ಇಂಜುರಿ ಕಾರಣದಿಂದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ದೀಪಕ್ ಚಹಾರ್ ಬದಲಿಗೆ, ದೆಹಲಿ ಮೂಲದ ಹಾಗೂ ರಾಯಲ್ ಚಾಲೆಂಜರ್ಸ್ ತಂಡದ ವೇಗಿ ನವದೀಪ್ ಸೈನಿ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ.

 

UPDATE: Deepak Chahar has been ruled out of the 3rd ODI. Navdeep Saini replaces him.

Details - https://t.co/7vL5GJobTU pic.twitter.com/QbHQL1KMyY

— BCCI (@BCCI)

Tap to resize

Latest Videos

ಇದನ್ನೂ ಓದಿ: 2ನೇ ಏಕದಿನದಲ್ಲಿ ಭಾರತಕ್ಕೆ ಭರ್ಜರಿ ಗೆಲುವು; ಸರಣಿ ಸಮಬಲ!

ಭಾರತ ವೆಸ್ಟ್ ಇಂಡೀಸ್ ನಡುವಿನ 2 ಏಕದಿನ ಪಂದ್ಯಗಳು ಮುಕ್ತಾಯಗೊಂಡಿದ್ದು, 3ನೇ ಹಾಗೂ ಅಂತಿಮ ಪಂದ್ಯ ಕಟಕ್‌ನಲ್ಲಿ ನಡೆಯಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲುವು ಸಾಧಿಸಿದ್ದರೆ, 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಈ ಮೂಲಕ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ಇದೀಗ ಅಂತಿಮ ಪಂದ್ಯ ಸರಣಿ ಯಾರಿಗೆ ಅನ್ನೋದನ್ನು ನಿರ್ಧರಿಸಲಿದೆ.

ಇದನ್ನೂ ಓದಿ:2ನೇ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಕುಲ್ದೀಪ್ ದಾಖಲೆ; ಭಾರತದ ಮೊದಲ ಬೌಲರ್!

ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್, ಶಿವಂ ದುಬೆ, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ

click me!