
ಚೆನ್ನೈ(ಏ.18): ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರ ಜೀವಾನಧಾರಿತ ‘800’ ತಮಿಳು ಚಿತ್ರ ಘೋಷಣೆಯಾಗಿದ್ದು, ಅವರ ಹುಟ್ಟಿದ ದಿನವಾದ ಏ.17ರಂದೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ‘800’ ಎಂಬುದು ಮುರಳೀಧರನ್ ಟೆಸ್ಟ್ ಕ್ರಿಕೆಟ್ನಲ್ಲಿ ಪಡೆದ ವಿಕೆಟ್ಗಳ ಸಂಖ್ಯೆಯಾಗಿದ್ದು, ಟೆಸ್ಟ್ ಇತಿಹಾಸದಲ್ಲೇ ಗರಿಷ್ಠ ವಿಕೆಟ್ ಸರದಾರ ಎನಿಸಿಕೊಂಡಿದ್ದಾರೆ. ಚಿತ್ರವನ್ನು ಎಂ.ಎಸ್.ಶ್ರೀಪತಿ ನಿರ್ದೇಶಿಸುತ್ತಿದ್ದು, ಮಧುರ್ ಮಿತ್ತಲ್ ಅವರು ಮುರಳೀಧರನ್ ಪಾತ್ರ ನಿರ್ವಹಿಸಿದ್ದಾರೆ. ಚೆನ್ನೈ, ಶ್ರೀಲಂಕಾ, ಇಂಗ್ಲೆಂಡ್, ಆಸ್ಪ್ರೇಲಿಯಾದಲ್ಲಿ ಈಗಾಗಲೇ ಚಿತ್ರೀಕರಣ ಮುಗಿದಿದ್ದು ತಮಿಳು, ಹಿಂದಿ, ತೆಲುಗು ಹಾಗೂ ಇಂಗ್ಲಿಷ್ನಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ.
ನಿರಂತರ ಪರಿಶ್ರಮ ಅಗತ್ಯ: ಪುತ್ರನಿಗೆ ಸಚಿನ್ ಕಿವಿಮಾತು
ಮುಂಬೈ: ಪುತ್ರ ಅರ್ಜುನ್ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಸಚಿನ್ ತೆಂಡುಲ್ಕರ್, ಟ್ವೀಟರ್‌ನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ‘ಅರ್ಜುನ್ ಕ್ರಿಕೆಟಿಗನಾಗಿ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದೀಯ. ಒಬ್ಬ ತಂದೆಯಾಗಿ, ನಿನ್ನನ್ನ ಪ್ರೀತಿಸುವ ಹಾಗೂ ಆಟದ ಬಗ್ಗೆ ಅಪಾರ ಪ್ರೀತಿ ಉಳ್ಳವನಾಗಿ, ನೀನು ಆಟವನ್ನು ಗೌರವಿಸುತ್ತೀಯ ಎನ್ನುವ ನಂಬಿಕೆ ನನಗಿದೆ. ನೀನು ಬಹಳ ಕಷ್ಟಪಟ್ಟು ಈ ಹಂತಕ್ಕೆ ತಲುಪಿದ್ದೀಯ. ಯಶಸ್ಸು ಕಾಣಲು ನಿರಂತರ ಪರಿಶ್ರಮ ಅಗತ್ಯ’ ಎಂದು ಕಿವಿ ಮಾತು ಹೇಳಿದ್ದಾರೆ.
ಚೆನ್ನೈನಲ್ಲಿ ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ
ಚೆನ್ನೈ: ಮೊದಲ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ ಆತಿಥ್ಯ ಭಾರತಕ್ಕೆ ಲಭಿಸಿದ್ದು, ಆಗಸ್ಟ್ 3ರಿಂದ 12ರ ವರೆಗೂ ಚೆನ್ನೈನಲ್ಲಿ ಪಂದ್ಯಾವಳಿ ನಡೆಯಲಿದೆ. ಇದರೊಂದಿಗೆ ಚೆನ್ನೈಗೆ 16 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಹಾಕಿ ಪಂದ್ಯದ ಅತಿಥ್ಯ ಸಿಕ್ಕಂತಾಗಿದೆ. ಕೊನೆ ಬಾರಿ 2007ರಲ್ಲಿ ಚೆನ್ನೈನಲ್ಲಿ ಏಷ್ಯಾಕಪ್ ನಡೆದಿತ್ತು.
IPL 2023 ಮುಂಬೈ ಇಂಡಿಯನ್ಸ್ ತಂಡಕ್ಕಿಂದು ಸನ್‌ರೈಸರ್ಸ್ ಹೈದರಾಬಾದ್ ಸವಾಲು..!
7ನೇ ಆವೃತ್ತಿ ಟೂರ್ನಿಯಲ್ಲಿ 3 ಬಾರಿ ಚಾಂಪಿಯನ್ ಭಾರತದ ಜೊತೆ ದ.ಕೊರಿಯಾ, ಮಲೇಷ್ಯಾ, ಜಪಾನ್ ಪಾಲ್ಗೊಳ್ಳಲಿದ್ದು, ಚೀನಾ ಮತ್ತು 3 ಬಾರಿ ಪ್ರಶಸ್ತಿ ವಿಜೇತ ಪಾಕಿಸ್ತಾನ ಆಡುವುದು ಇನ್ನಷ್ಟೇ ಖಚಿತಗೊಳ್ಳಬೇಕಿದೆ. ಈ ಟೂರ್ನಿ ಏಷ್ಯನ್ ಗೇಮ್ಸ್‌ನ ಸಿದ್ಧತೆಗೆ ಬಳಸಿಕೊಳ್ಳಲು ತಂಡಗಳಿಗೆ ಅನುಕೂಲವಾಗಲಿದೆ.
ವಿಶ್ವ ಬಾಕ್ಸಿಂಗ್: ತಾಷ್ಕೆಂಟ್ ತಲುಪಿದ ಭಾರತ ತಂಡ
ನವದೆಹಲಿ: ಏ.30ರಿಂದ ಮೇ 14ರ ವರೆಗೂ ನಡೆಯಲಿರುವ ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು 19 ಸದಸ್ಯರ ಭಾರತ ತಂಡ ಸೋಮವಾರ ಉಜ್ಬೇಕಿಸ್ತಾನದ ತಾಷ್ಕೆಂಟ್‌ಗೆ ತೆರಳಿತು. 6 ಬಾರಿ ಏಷ್ಯನ್ ಚಾಂಪಿಯನ್ ಶಿವ ಥಾಪ, ದೀಪಕ್ ಭೋರಿಯಾ ಅವರನ್ನೊಗೊಂಡ ತಂಡ ಕೂಟಕ್ಕೂ ಮುನ್ನ ನಡೆಯಲಿರುವ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದೆ. ಈ ಪೈಕಿ 13 ಮಂದಿ ಮಾತ್ರ ಕೂಟದಲ್ಲಿ ಸ್ಪರ್ಧಿಸಲಿದ್ದು, 6 ಮಂದಿ ತರಬೇತಿ ಶಿಬಿರಕ್ಕೆ ಹಾಜರಾಗಲಿದ್ದಾರೆ. ಕೂಟದಲ್ಲಿ ಒಟ್ಟಾರೆ 104 ದೇಶಗಳ 640 ಬಾಕ್ಸರ್‌ಗಳು ಪಾಲ್ಗೊಳ್ಳಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.