IPL 2023 ಮುಂಬೈ ಇಂಡಿಯನ್ಸ್‌ ತಂಡಕ್ಕಿಂದು ಸನ್‌ರೈಸರ್ಸ್‌ ಹೈದರಾಬಾದ್‌ ಸವಾಲು..!

Published : Apr 18, 2023, 09:51 AM IST
IPL 2023 ಮುಂಬೈ ಇಂಡಿಯನ್ಸ್‌ ತಂಡಕ್ಕಿಂದು ಸನ್‌ರೈಸರ್ಸ್‌ ಹೈದರಾಬಾದ್‌ ಸವಾಲು..!

ಸಾರಾಂಶ

* ಹೈದರಾಬಾದ್‌ನಲ್ಲಿಂದು ಸನ್‌ರೈಸರ್ಸ್‌ಗೆ ಮುಂಬೈ ಇಂಡಿಯನ್ಸ್‌ ಸವಾಲು * ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಉಭಯ ತಂಡಗಳು * ಹೈವೋಲ್ಟೇಜ್‌ ಪಂದ್ಯಕ್ಕೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ

ಹೈ​ದ​ರಾ​ಬಾ​ದ್‌(ಏ.18): ಸತತ 2 ಸೋಲು​ಗಳೊಂದಿಗೆ 16ನೇ ಆವೃತ್ತಿ ಐಪಿ​ಎ​ಲ್‌ಗೆ ಕಾಲಿ​ರಿ​ಸಿ​ದ್ದರೂ ಬಳಿಕ 2 ಪಂದ್ಯ​ಗ​ಳಲ್ಲಿ ಗೆದ್ದು ಜಯದ ಲಯ ಕಂಡು​ಕೊಂಡಿ​ರುವ ಮುಂಬೈ ಇಂಡಿಯನ್ಸ್‌ ಹಾಗೂ ಸನ್‌​ರೈ​ಸರ್ಸ್‌ ಹೈದ​ರಾ​ಬಾದ್‌ ಮಂಗ​ಳ​ವಾರ ಪರ​ಸ್ಪರ ಸೆಣ​ಸಾ​ಡ​ಲಿದ್ದು, ಹ್ಯಾಟ್ರಿಕ್‌ ಗೆಲು​ವಿನ ನಿರೀ​ಕ್ಷೆ​ಯ​ಲ್ಲಿವೆ. ಈ ಪಂದ್ಯ ಎರಡೂ ತಂಡ​ಗ​ಳಿಗೆ ಮಹ​ತ್ವ​ದ್ದಾ​ಗಿದ್ದು, ಗೆದ್ದು ಅಂಕ​ಪ​ಟ್ಟಿ​ಯಲ್ಲಿ ಮೇಲೇ​ರಲು ಕಾಯು​ತ್ತಿ​ವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದೆ. 

ಮೊದ​ಲೆ​ರಡು ಪಂದ್ಯ​ದಲ್ಲಿ ಮಂಕಾ​ಗಿದ್ದ ಮುಂಬೈ ಇಂಡಿಯನ್ಸ್‌ ಕೊನೆಗೂ ಲಯಕ್ಕೆ ಮರ​ಳಿದ್ದು, ಕಳೆದ ಪಂದ್ಯ​ದಲ್ಲಿ ಬ್ಯಾಟಿಂಗ್‌​ನಲ್ಲಿ ಅಬ್ಬ​ರಿಸಿ​ತ್ತು. ರೋಹಿತ್‌ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್‌ ಕಿಶನ್, ತಿಲಕ್‌ ವರ್ಮಾ ಲಯ ಕಂಡು​ಕೊಂಡಿದ್ದು, ಕ್ಯಾಮರೋನ್ ಗ್ರೀನ್‌, ಟಿಮ್‌ ಡೇವಿಡ್‌ ಆಲ್ರೌಂಡ್‌ ಪ್ರದ​ರ್ಶನ ನಿರ್ಣಾ​ಯಕ ಎನಿ​ಸ​ಬ​ಹುದು. ಆದರೆ ಜಸ್ಪ್ರೀತ್ ಬುಮ್ರಾ, ಆರ್ಚರ್‌ ಸ್ಥಾನ​ವನ್ನು ತುಂಬ​ಬಲ್ಲ ವೇಗಿ ತಂಡ​ದ​ಲ್ಲಿ​ ಇಲ್ಲದಿರು​ವುದು ಪ್ರಮುಖ ಸಮಸ್ಯೆ. ಕಳೆದ ಪಂದ್ಯ​ದಲ್ಲಿ ರಿಲೇ ಮೆರಿ​ಡಿತ್‌, ಡ್ಯುಯಾನ್‌ ಯಾನ್ಸೆನ್‌ ದುಬಾ​ರಿ​ಯಾ​ಗಿ​ದ್ದರು. ವೇಗಿ ಅರ್ಜುನ್‌ ತೆಂಡು​ಲ್ಕರ್‌ ಎಷ್ಟರ ಮಟ್ಟಿಗೆ ಪರಿ​ಣಾ​ಮ​ಕಾರಿ ಆಗ​ಬ​ಹುದು ಎಂಬು​ದಕ್ಕೆ ಇನ್ನಷ್ಟೇ ಉತ್ತರ ಸಿಗ​ಬೇ​ಕಿದೆ. ಪೀಯೂಷ್ ಚಾವ್ಲಾ, ಹೃತ್ತಿಕ್ ಶೊಕೀನ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಮತ್ತೊಂದೆಡೆ ಸನ್‌ರೈಸ​ರ್ಸ್‌ ಹೈದರಾಬಾದ್ ಸರಿಯಾದ ತಂಡ ಸಂಯೋಜನೆ ಹೊಂದಿದ್ದು, ಯಾವುದೇ ತಂಡಕ್ಕೂ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿ​ದೆ. ಹ್ಯಾರಿ ಬ್ರೂಕ್‌, ಏಯ್ಡನ್ ಮಾರ್ಕ್​ರ​ಮ್‌ ಲಯಕ್ಕೆ ಮರ​ಳಿದ್ದು ತಂಡದ ಪ್ಲಸ್‌ ಪಾಯಿಂಟ್‌. ಅಭಿ​ಷೇಕ್‌ ಶರ್ಮಾ, ರಾಹುಲ್ ತ್ರಿಪಾ​ಠಿ ಕೂಡಾ ಯಾವುದೇ ಕ್ಷಣ​ದಲ್ಲಿ ಸ್ಫೋಟಿ​ಸ​ಬ​ಲ್ಲರು. ಆದರೆ ಮಯಾಂಕ್‌ ಅಗರ್‌ವಾಲ್ ನಿರೀಕ್ಷೆ ಉಳಿ​ಸಿ​ಕೊ​ಳ್ಳು​ತ್ತಿಲ್ಲ. ಬೌಲಿಂಗ್‌ ವಿಭಾಗ ಮೊನಚು ಕಳೆ​ದು​ಕೊಂಡಿದ್ದು, ಟಿ ನಟ​ರಾ​ಜನ್‌, ಉಮ್ರಾನ್‌ ಮಲಿಕ್ ದುಬಾ​ರಿ​ಯಾ​ಗು​ತ್ತಿ​ದ್ದಾರೆ. ಭುವ​ನೇ​ಶ್ವರ್‌ ಕುಮಾರ್ ಕೂಡಾ ಮೊದ​ಲಿನ ಲಯ​ದ​ಲ್ಲಿಲ್ಲ. ಹೀಗಾಗಿ ಮಾರ್ಕೊ ಯಾನ್ಸನ್‌, ಯುವ ಸ್ಪಿನ್ನರ್‌ ಮಯಾಂಕ್‌ ಮಾರ್ಕಂಡೆ ಮೇಲೆ ಮುಂಬೈ ಬ್ಯಾಟ​ರ್‌​ಗ​ಳನ್ನು ಕಟ್ಟಿ​ಹಾ​ಕ​ಬೇ​ಕಾದ ಹೊಣೆ​ಗಾ​ರಿ​ಕೆ​ಯಿ​ದೆ.

RCB vs CSK: ಚೆನ್ನೈ ಸೂಪರ್ ಕಿಂಗ್ಸ್‌ ಮುಂದೆ ಮಂಡಿಯೂರಿದ ಆರ್‌ಸಿಬಿ ಬ್ಯಾಟಿಂಗ್‌ ಪರಾಕ್ರಮ

ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಇದುವರೆಗೂ ಒಟ್ಟು 19 ಬಾರಿ ಮುಖಮುಖಿಯಾಗಿದ್ದು, 5 ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಕೊಂಚ ಮುನ್ನಡೆ ಸಾಧಿಸಿದೆ. 19 ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್‌ ತಂಡವು 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡವು 9 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾವ ತಂಡದ ಕೈ ಮೇಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ.

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ ಇಂಡಿಯನ್ಸ್‌: ರೋಹಿತ್‌ ಶರ್ಮಾ(ನಾ​ಯ​ಕ​), ಇಶಾನ್‌ ಕಿಶನ್‌, ಕ್ಯಾಮರೋನ್ ಗ್ರೀನ್‌, ಸೂರ್ಯಕುಮಾರ್‌ ಯಾದವ್​, ತಿಲಕ್‌ ವರ್ಮಾ, ಟಿಮ್‌ ಡೇವಿಡ್‌, ರಿಲೇ ಮೆರಿ​ಡಿ​ತ್‌, ಹೃತ್ತಿಕ್ ಶೊಕೀನ್‌, ಜೇಸನ್ ಬೆಹ್ರ​ನ್‌​ಡ್ರಾ​ಫ್‌, ಪೀಯೂಸ್ ಚಾವ್ಲಾ, ಅರ್ಜು​ನ್‌ ತೆಂಡುಲ್ಕರ್.

ಸನ್‌ರೈಸರ್ಸ್‌ ಹೈದ್ರಾ​ಬಾ​ದ್‌: ಮಯಾಂಕ್‌ ಅಗರ್‌ವಾಲ್‌, ಹ್ಯಾರಿ ಬ್ರೂಕ್‌, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್‌(ನಾಯಕ), ಅಭಿ​ಷೇಕ್‌ ಶರ್ಮಾ, ಹೆನ್ರಿಚ್ ಕ್ಲಾಸೆನ್‌, ಮಾರ್ಕೊ ಯಾನ್ಸನ್‌, ಮಯಾಂಕ್ ಮಾರ್ಕಂಡೆ, ಭುವನೇಶ್ವರ್‌ ಕುಮಾರ್, ಉಮ್ರಾನ್‌ ಮಲಿಲಕ್, ಟಿ ನಟರಾಜನ್‌.

ಪಂದ್ಯ: ಸ.7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೋ ಸಿನಿಮಾ

ಪಿಚ್‌ ರಿಪೋರ್ಚ್‌

ರಾಜೀವ್‌ ಗಾಂಧಿ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದರೂ ಕಳೆದ ಪಂದ್ಯ​ದಲ್ಲಿ ಬೌಲ​ರ್‌​ಗಳೇ ಮೇಲುಗೈ ಸಾಧಿ​ಸಿ​ದ್ದರು. ಆದರೆ ಕ್ರೀಡಾಂಗ​ಣದ ಇತಿ​ಹಾಸ ಗಮ​ನಿ​ಸಿ​ದರೆ ಈ ಪಂದ್ಯ​ದಲ್ಲಿ ದೊಡ್ಡ ಮೊತ್ತ ದಾಖ​ಲಾ​ಗುವ ನಿರೀಕ್ಷೆ ಇದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana