ಐದು ಬಾರಿಯ ಚಾಂಪಿಯನ್ ಮುಂಬೈ ಪಾಳಯದಲ್ಲಿ ಮಹಾ ಸಂಚಲನ: ಸೈಲೆಂಟ್ ಆಗಿ ಮುಂಬೈ ಇಂಡಿಯನ್ಸ್‌ಗೆ ಗುಡ್ ಬೈ ಹೇಳಿದ ದಿಗ್ಗಜ ಕ್ರಿಕೆಟಿಗ..!

Published : Oct 17, 2026, 01:48 PM IST
Mahela Jayawardene

ಸಾರಾಂಶ

2027ರ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಹಾ ಸಂಚಲನ ಉಂಟಾಗಿದ್ದು, ಯಶಸ್ವಿ ಕೋಚ್ ಮಹೆಲಾ ಜಯವರ್ಧನೆ ತಂಡದಿಂದ ಹೊರಬಂದಿದ್ದಾರೆ. ಫ್ರಾಂಚೈಸಿ ಮುಖ್ಯಸ್ಥೆ ನೀತಾ ಅಂಬಾನಿ ಅವರು ಜಯವರ್ಧನೆ ಅವರ ಕೊಡುಗೆಯನ್ನು ಸ್ಮರಿಸಿ ಧನ್ಯವಾದ ಅರ್ಪಿಸಿದ್ದಾರೆ. ಸದ್ಯದಲ್ಲೇ ಮುಂಬೈ ತಂಡಕ್ಕೆ ನೂತನ ಹೆಡ್ ಕೋಚ್ ನೇಮಕವಾಗುವ ಸಾಧ್ಯತೆಯಿದೆ.

ಬೆಂಗಳೂರು: 2027ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರ್ಜರಿ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ಬಹುತೇಕ ತಂಡಗಳು ತಮ್ಮ ಕೋಚಿಂಗ್ ಸ್ಟಾಫ್‌ಗಳನ್ನು ಬದಲಾಯಿಸುತ್ತಿವೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸೌರವ್ ಗಂಗೂಲಿ ಅವರನ್ನು ತನ್ನ ನೂತನ ಹೆಡ್‌ ಕೋಚ್ ಆಗಿ ನೇಮಿಸಿಕೊಂಡಿದೆ. ಇನ್ನು ಇದಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸ್ಟಿಫನ್ ಪ್ಲೆಮಿಂಗ್ ಅವರಿಂದ ತೆರವಾದ ಸ್ಥಾನಕ್ಕೆ ಜಹೀರ್ ಖಾನ್ ಅವರನ್ನು ಹೆಡ್‌ ಕೋಚ್ ಆಗಿ ನೇಮಿಸಿಕೊಂಡಿದೆ. ಇದೀಗ ಐಪಿಎಲ್‌ನಲ್ಲಿ ಚೆನ್ನೈನಂತೆ ಅತ್ಯಂತ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡದಲ್ಲೂ ಇದೀಗ ಮಹಾ ಸಂಚಲನವಾಗಿದೆ. ಇದೀಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ತಂಡದ ಯಶಸ್ವಿ ಕೋಚ್ ಮಹೆಲಾ ಜಯವರ್ಧನೆ ಅವರನ್ನು ತಂಡದಿಂದ ರಿಲೀಸ್ ಮಾಡಿದೆ. ಇದೀಗ ಸದ್ಯದಲ್ಲಿಯೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ನೂತನ ಹೆಡ್‌ ಕೋಚ್ ನೇಮಕ ಮಾಡಿಕೊಳ್ಳಲಿದೆ ಎನ್ನಲಾಗಿದೆ.

ಮುಂಬೈ ಇಂಡಿಯನ್ಸ್‌ಗೆ ಮಹೆಲಾ ಜಯವರ್ಧನೆ ಗುಡ್‌ಬೈ:

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ, ಮಹೆಲಾ ಜಯವರ್ಧನೆ ಮುಂಬೈ ಇಂಡಿಯನ್ಸ್ ಕೋಚ್ ಸ್ಥಾನಕ್ಕೆ ನಿವೃತ್ತಿ ಘೋಷಿಸಿದ್ದಾರೆ ಎನ್ನುವ ವಿಚಾರವನ್ನು ಖಚಿತಪಡಿಸಿದೆ. ಮಹೆಲಾ ಜಯವರ್ಧನೆ ಕಳೆದೊಂದು ದಶಕದಿಂದಲೂ ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಅವರ ಮಾರ್ಗದರ್ಶನದಲ್ಲಿಯೇ ಮುಂಬೈ ತಂಡವು ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ, ಫ್ರಾಂಚೈಸಿ ಮುಖ್ಯಸ್ಥೆ ನೀತಾ ಅಂಬಾನಿ, 'ಮಹೆಲಾ ಜಯವರ್ಧನೆ ಸಾಕಷ್ಟು ವರ್ಷಗಳಿಂದ ಮುಂಬೈ ಇಂಡಿಯನ್ಸ್‌ಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಅವರ ನಾಯಕತ್ವ, ಪ್ರಾಮಾಣಿಕತೆ ಹಾಗೂ ಕ್ರೀಡೆಯ ಮೇಲಿನ ಪ್ರೀತಿಯು ನಮ್ಮ ನೆನಪಿನಲ್ಲಿ ಉಳಿಯಲಿದೆ' ಎಂದು ಹೇಳಿದ್ದಾರೆ.

ಮುಂದುವರೆದು, 'ಮುಂಬೈ ಇಂಡಿಯನ್ಸ್ ಕುಟುಂಬದಿಂದ ಇಷ್ಟು ವರ್ಷಗಳ ಕಾಲ ತಮ್ಮ ಅದ್ಭುತ ಕೊಡುಗೆ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಇಲ್ಲಿಯವರೆಗೆ ಹಲವು ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದಕ್ಕಾಗಿ ನಾವು ಅವರಿಗೆ ಗೌರವ ಅರ್ಪಿಸುತ್ತೇವೆ. ಅವರ ಮುಂದಿನ ಭವಿಷ್ಯ ಸುಖಕರವಾಗಿರಲಿ ಎಂದು ನೀತಾ ಅಂಬಾನಿ ಶುಭ ಹಾರೈಸಿದ್ದಾರೆ.

ಮುಂಬೈ ಇಂಡಿಯನ್ಸ್ ಜತೆ ಜಯವರ್ಧನೆ ಜರ್ನಿ ಹೇಗಿತ್ತು?

ಮಹೆಲಾ ಜಯವರ್ಧನೆ 2017ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹೆಡ್ ಕೋಚ್ ಆಗಿ ನೇಮಕವಾದರು. ಇದಕ್ಕೂ ಮೊದಲು ರಿಕಿ ಪಾಂಟಿಂಗ್ ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಆಗಿದ್ದರು. ಇನ್ನು ಮಹೆಲಾ ಜಯವರ್ಧನೆ ಹೆಡ್ ಕೋಚ್ ಆದ ವರ್ಷವೇ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದಾದ ಬಳಿಕ 2019 ಹಾಗೂ 2020ರಲ್ಲೂ ಜಯವರ್ಧನೆ ಮಾರ್ಗದರ್ಶನದಲ್ಲಿಯೇ ಮುಂಬೈ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು 2022ರಲ್ಲಿ ಮಹೆಲಾ ಜಯವರ್ಧನೆಯನ್ನು ಹೆಡ್‌ ಕೋಚ್ ಸ್ಥಾನದಿಂದ ಗ್ಲೋಬಲ್ ಹೆಡ್ ಆಫ್ ಫರ್ಫಾಮೆನ್ಸ್ ಆಗಿ ನೇಮಕ ಮಾಡಲಾಗಿತ್ತು. ಇನ್ನು ಮತ್ತೆ 2025ರಲ್ಲಿ ಜಯವರ್ಧನೆಯನ್ನು ಮುಂಬೈ ಇಂಡಿಯನ್ಸ್ ತಂಡದ ಹೆಡ್‌ ಕೋಚ್ ಆಗಿ ನೇಮಿಸಲಾಯಿತು. 2026ರ ಐಪಿಎಲ್‌ನಲ್ಲಿ ಕೊನೆಯ ಬಾರಿಗೆ ಜಯವರ್ಧನೆ ಮುಂಬೈ ಇಂಡಿಯನ್ಸ್ ತಂಡದ ಹೆಡ್‌ ಕೋಚ್ ಆಗಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ವೆಸ್ಟ್‌ ಇಂಡೀಸ್ ಇಂದಿನ ಐದನೇ ಟಿ20 ಮ್ಯಾಚ್ ಫ್ರೀ ಆಗಿ ವೀಕ್ಷಿಸೋದು ಹೇಗೆ? ಬೆಂಗಳೂರು ಮ್ಯಾಚ್ ಎಷ್ಟು ಗಂಟೆಯಿಂದ ಆರಂಭ?
ಭಾರತ-ವೆಸ್ಟ್‌ಇಂಡೀಸ್‌ 5ನೇ ಟಿ20ಗೆ ಮಳೆ ಕಾಟ? ಬೆಂಗಳೂರಿನ ಹವಾಮಾನ ವರದಿ ಏನು ಹೇಳುತ್ತೆ?